ನ್ಯೂಸ್

ದಿನ ಭವಿಷ್ಯ: ಈ ರಾಶಿಯವರಿಗೆ ಇಂದು ಬಹಳ ದಿನಗಳ ಕನಸು ನನಸಾಗಲಿದೆ

ಮೇಷ: ಮಾತಿನ ಮೋಡಿಯಿಂದ ಜನಾಕರ್ಷಣೆ. ಸಹೋದ್ಯೋಗಿಗಳಿಂದ ವಿಶೇಷ ಸಲಹೆ. ಹಣದ ಅಪವ್ಯಯ. ಶುಭಸಂಖ್ಯೆ: 9

ವೃಷಭ: ಕೆಲಸದ ಒತ್ತಡ ಸಹಜ. ಸಮರ್ಥವಾಗಿ ನಿಭಾಯಿ ಸುವುದು ಮುಖ್ಯವೇ ಆದರೂ ಕುಟುಂಬವನ್ನು ಕಡೆಗಣಿಸುವುದು ಸಲ್ಲದು. ಶುಭಸಂಖ್ಯೆ: 2

ಮಿಥುನ: ಬಹಳ ದಿನಗಳ ಕನಸು ನನಸಾಗಲಿದೆ. ವಿವಾಹದ ನಿರೀಕ್ಷೆಯಲ್ಲಿರುವವರಿಗೆ ಶುಭ ಸುದ್ದಿ. ತಂದೆಯ ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 9

ಕಟಕ: ಮನೆಗೆ ಬಂಧುಗಳು ಬರುವ ಸಾಧ್ಯತೆ. ಅಕ್ಕ ತಂಗಿಯರ ಮನೆಗೆ ಭೇಟಿ. ಮನೆ ಕಟ್ಟುವ ಕೆಲಸಕ್ಕೆ ಚಾಲನೆ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 7

ಸಿಂಹ: ದೃಢನಿರ್ಧಾರದಲ್ಲಿ ದ್ವಂದ್ವ. ಹೊಸ ವ್ಯಾಪಾರದ ಪ್ರಾರಂಭ. ಬಂಧು ವರ್ಗದಲ್ಲಿ ಪ್ರಶಂಸೆ. ಸಂಜೆಯ ವೇಳೆ ಆಯಾಸ. ಶುಭಸಂಖ್ಯೆ: 5

ಕನ್ಯಾ: ಯಾರನ್ನೂ ಅತಿ ನಂಬಬೇಡಿ. ಸಾಲಗಾರರಿಂದ ಅವಮಾನ. ವ್ಯಾಪಾರಸ್ಥರಿಗೆ ನಷ್ಟ. ಕುಟುಂಬ ದೊಂದಿಗೆ ದೇವಾಲಯ ಭೇಟಿ. ಶುಭಸಂಖ್ಯೆ: 5

ತುಲಾ: ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಹಿರಿಯ ಅಧಿಕಾರಿ ಗಳಿಂದ ಪ್ರಶಂಸೆ. ಮನೆಯಲ್ಲಿ ಶುಭ ಸಮಾರಂಭದ ಸಡಗರ. ಶುಭವಾರ್ತೆ. ಶುಭಸಂಖ್ಯೆ: 7

ವೃಶ್ಚಿಕ: ಹಾಸಿಗೆ ಇದ್ದಷ್ಟು ಕಾಲು ಚಾಚುವುದು ಒಳಿತು. ಸಾರ್ವಜನಿಕ ಕ್ಷೇತ್ರದಲ್ಲಿ ವಿಶೇಷ ಮನ್ನಣೆ. ಗುರು ಸನ್ನಿಧಾನಕ್ಕೆ ಪ್ರಯಾಣ. ಶುಭಸಂಖ್ಯೆ: 5

ಧನಸ್ಸು: ಹಿರಿಯರ ಸಲಹೆ ಪಡೆಯಿರಿ. ನಿಮ್ಮ ಪ್ರತಿಭೆಗೆ ಸೂಕ್ತ ಪೋ›ತ್ಸಾಹ. ನಟರಿಗೆ ಕಾರ್ಯ ನಷ್ಟ. ಸಹೋ ದರಿಯರೊಂದಿಗೆ ಭೋಜನ. ಶುಭಸಂಖ್ಯೆ: 6

ಮಕರ: ಇಚ್ಛಾಶಕ್ತಿಯಿಂದ ಅಸಾಧ್ಯವಾದುದನ್ನು ಸಾಧಿಸಿದ ಸಮಾಧಾನ. ಕುಟುಂಬ ವರ್ಗದಲ್ಲಿ ಮನ್ನಣೆ. ದೀನರಿಗೆ ಸಹಾಯ ಮಾಡಿ. ಶುಭಸಂಖ್ಯೆ: 4

ಕುಂಭ: ರಾಜಕೀಯ ರಂಗದಲ್ಲಿ ಇರುವವರಿಗೆ ಅಧಿಕಾರ ನಷ್ಟ. ಕುಟುಂಬದ ಸಹಕಾರ. ಅಣ್ಣ-ತಮ್ಮಂದಿರ ಬಾಂಧವ್ಯ ವೃದ್ಧಿ. ಶುಭಸಂಖ್ಯೆ: 9

ಮೀನ: ಮನೆಯಲ್ಲಿ ಕಿರಿಕಿರಿ ವಾತಾವರಣ. ಆರ್ಥಿಕ ಮುಗ್ಗಟ್ಟು. ಮಕ್ಕಳಿಂದ ದುಂದುವೆಚ್ಚ. ಮಾತೆಯ ಮಾತನ್ನು ಪಾಲಿಸಿ. ಶುಭ ಸುದ್ದಿ. ಶುಭಸಂಖ್ಯೆ: 1

| ವೇ|| ಬ್ರ|| ಶ್ರೀ ದೇವದತ್ತ ಶರ್ಮಾ ಗುರೂಜಿ