ನ್ಯೂಸ್

ದಿನ ಭವಿಷ್ಯ: ಈ ರಾಶಿಯವರಿಗೆ ಇಂದು ಹೊಸ ಮನೆ ಖರೀದಿ ಸಾಧ್ಯತೆ

ಮೇಷ: ಅನ್ಯರ ಕಿವಿಮಾತಿನ ಬಗ್ಗೆ ವಿಶ್ವಾಸಬೇಡ. ಕುಟುಂಬದ ಸಲಹೆ ತೆಗೆದುಕೊಂಡು ಆಸ್ತಿ ವಿಚಾರದಲ್ಲಿ ತೀರ್ಮಾನ ತೆಗೆದುಕೊಳ್ಳಿ. ಶುಭಸಂಖ್ಯೆ: 7

ವೃಷಭ: ಅನಿರೀಕ್ಷಿತ ಘಟನೆಗಳಿಗೆ ನೀವು ಸಾಕ್ಷಿಯಾಗುವ ಸಾಧ್ಯತೆ. ಸಹೋದ್ಯೋಗಿಗಳಿಂದ ಕಿರಿಕಿರಿ. ಮಕ್ಕಳ ಬಗ್ಗೆ ಕಾಳಜಿ ವಹಿಸಿ. ಶುಭಸಂಖ್ಯೆ:3

ಮಿಥುನ: ಶತ್ರುಗಳಿಂದ ತೊಂದರೆ. ಉದ್ಯೋಗದ ನಿಮಿತ್ತ ದೂರಪ್ರಯಾಣ ಸಾಧ್ಯತೆ. ಆರೋಗ್ಯದಲ್ಲಿ ಎಚ್ಚರ. ಮಾವನಿಂದ ಸಹಕಾರ. ಶುಭಸಂಖ್ಯೆ:5

ಕಟಕ: ಉದ್ಯೋಗದಲ್ಲಿ ಸಣ್ಣ ಮನಸ್ತಾಪವಾದೀತು. ಅಮೂಲ್ಯ ವಸ್ತುಗಳ ಸಂಗ್ರಹ ಮಾಡಲಿದ್ದೀರಿ. ಮಹಿಳೆಯರ ಆಸೆ ಈಡೇರಲಿದೆ. ಶುಭಸಂಖ್ಯೆ: 2

ಸಿಂಹ: ಮನೆ ಬದಲಾವಣೆ ನಿರ್ಧಾರ. ಔಷಧಿ ವ್ಯಾಪಾರಿಗಳಿಗೆ ವಿಶೇಷ ಲಾಭ. ಮಿತ್ರರ ಕೆಲಸದಲ್ಲಿ ಸಿದ್ದಿ. ಚಾಲಕರು ಎಚ್ಚರವಾಗಿರಿ. ಶುಭಸಂಖ್ಯೆ: 7

ಕನ್ಯಾ: ಆರ್ಥಿಕ ಸಂಪನ್ಮೂಲಗಳಿಂದ ಸಾಲ ಮರುಪಾವತಿ. ಹಿರಿಯರ ಮಾತು ಗೌರವಿಸಿ. ಆಭರಣ ವ್ಯಾಪಾರಿಗಳಿಗೆ ಮೋಸ ಸಾಧ್ಯತೆ. ಶುಭಸಂಖ್ಯೆ: 5

ತುಲಾ: ಕಳೆದುಕೊಂಡ ವಸ್ತುವಿನ ಪುನರ್ ಲಭ್ಯತೆ. ಧಾರ್ವಿುಕ ಸಮಾರಂಭದಲ್ಲಿ ಪಾಲ್ಗೊಂಡು ಮನಃಶಾಂತಿ. ದೂರ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 8

ವೃಶ್ಚಿಕ: ಮುಂದಾಲೋಚನೆಯಿಂದ ಯಶ. ಕುಟುಂಬದೊಂದಿಗೆ ಧಾರ್ವಿುಕ ಕ್ಷೇತ್ರಕ್ಕೆ ಯಾತ್ರೆ. ಸಹನೆಯಿಂದ ಕಲಹ ನಿವಾರಿಸಿ. ಶುಭಸಂಖ್ಯೆ: 6

ಧನಸ್ಸು: ಕಚೇರಿಯ ಕೆಲಸದಲ್ಲಿ ಹೆಚ್ಚಿನ ಆಸಕ್ತಿ. ಹೊಸ ಮನೆ ಖರೀದಿ ಸಾಧ್ಯತೆ. ಮಕ್ಕಳ ಪ್ರತಿಭೆಯಿಂದ ಸಮಾಜದಲ್ಲಿ ಗೌರವ. ಶುಭಸಂಖ್ಯೆ:1

ಮಕರ: ಮಗಳ ಆರೋಗ್ಯದಲ್ಲಿ ಏರುಪೇರು. ದೈನಂದಿನ ವ್ಯವಹಾರ ಸುಗಮವಾಗಿ ನಡೆಯಲಿದೆ. ಪಾಲುದಾರಿಕೆ ನಿಲ್ಲಿಸುವ ಪ್ರಯತ್ನ. ಶುಭಸಂಖ್ಯೆ:3

ಕುಂಭ: ನ್ಯಾಯಾಲಯದ ಪ್ರಕರಣದಲ್ಲಿ ಜಯ. ಪಾಲುದಾರಿಕೆ ವ್ಯವಹಾರದಲ್ಲಿ ಹಿಂಜರಿತ. ಹಿರಿಯರ ಆರೋಗ್ಯದಲ್ಲಿ ವ್ಯತ್ಯಯ. ಶುಭಸಂಖ್ಯೆ: 7

ಮೀನ: ಪ್ರತಿಭಾನ್ವಿತರಿಗೆ ಅವಕಾಶ ಲಭ್ಯತೆ. ವೈಯಕ್ತಿಕ ಸಮಸ್ಯೆಗಳಿಗೆ ಆತ್ಮೀಯ ಸ್ನೇಹಿತನಿಂದ ಪರಿಹಾರ. ಪ್ರೇಮ ವಿಚಾರದಲ್ಲಿ ಎಚ್ಚರ. ಶುಭಸಂಖ್ಯೆ: 9