ಮೇಷ: ನಿಮ್ಮ ಪರಿಶ್ರಮಕ್ಕೆ ಸರಿಯಾದ ಫಲ ಸಿಗುತ್ತದೆ. ಗೆಳೆಯರಿಂದ ಮೋಸ. ನಿಮ್ಮ ಆತ್ಮಬಲ, ದೈವ ಬಲದಿಂದ ಯಶಸ್ಸು. ಶುಭಸಂಖ್ಯೆ: 4
ವೃಷಭ: ಹಣದ ವಿಪರೀತ ಖರ್ಚು ಉಂಟಾಗಬಹುದು. ಮಾನಸಿಕವಾಗಿ ಅಶಾಂತಿ. ದಿನಾಂತ್ಯದಲ್ಲಿ ಆತ್ಮೀಯರ ಭೇಟಿ. ಶುಭಸಂಖ್ಯೆ: 2
ಮಿಥುನ: ನಿಮ್ಮ ವಾಗ್ಝರಿಯಿಂದ ಸಮಸ್ಯೆ ಪರಿಹಾರ ಮಾಡಿದ ಸಮಾಧಾನ. ವ್ಯಾಪಾರದಲ್ಲಿ ಅಧಿಕ ಲಾಭ. ಮನೆಯಲ್ಲಿ ಸಡಗರ. ಶುಭಸಂಖ್ಯೆ: 2
ಕಟಕ: ಮಕ್ಕಳ ಅವಿಧೇಯತೆ ಮನಸ್ಸಿಗೆ ನೋವುಂಟು ಮಾಡುವುದು. ಸಂಗಾತಿಯಿಂದ ಸಮಾಧಾನ. ದೃಢ ನಿರ್ಧಾರದಲ್ಲಿ ಗೊಂದಲ. ಶುಭಸಂಖ್ಯೆ: 3
ಸಿಂಹ: ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಳ್ಳದೆ ಪ್ರಯತ್ನ ಮುಂದುವರಿಸಿ. ಹಿತಶತ್ರುಗಳಿಂದ ತೊಂದರೆ. ಕುಟುಂಬದಲ್ಲಿ ಅಸಮಾಧಾನ. ಶುಭಸಂಖ್ಯೆ: 1
ಕನ್ಯಾ: ಆತ್ಮೀಯ ಮಿತ್ರರು ಶತ್ರುವಾಗಿ ಪರಿವರ್ತನೆ. ನಂಬಿದವರಿಂದಲೇ ವಂಚನೆ. ವಿದ್ಯಾರ್ಥಿಗಳಿಗೆ ಶುಭದಿನ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 3
ತುಲಾ: ಅನಗತ್ಯ ವಸ್ತುಗಳಿಗಾಗಿ ದುಂದುವೆಚ್ಚ. ಬರಬೇಕಾಗಿದ್ದ ಹಣದ ವಿಷಯದಲ್ಲಿ ನಿರಾಸೆ. ಪರ್ಯಾಯ ವ್ಯವಸ್ಥೆಗೆ ಚಿಂತನೆ. ಶುಭಸಂಖ್ಯೆ: 7
ವೃಶ್ಚಿಕ: ಸಮಯ ಸಾಧಕರಿಂದ ಸುರಕ್ಷಿತ ಅಂತರವಿರಲಿ. ನಂಬಿದವರಿಂದ ಮೋಸ. ಸಂಗೀತಗಾರರಿಗೆ ವಿಶೇಷ ವೇದಿಕೆ. ಶುಭಸಂಖ್ಯೆ: 6
ಧನಸ್ಸು: ಕಷ್ಟಪಟ್ಟರೆ ಸುಖ ಎನ್ನುವುದಕ್ಕೆ ಬದ್ಧರಾಗಿ. ನಟರಿಗೆ ವಿಶೇಷ ಬೆಂಬಲ. ಸಾಮಾಜಿಕ ಕಿರಿಕಿರಿ. ಉನ್ನತ ವಿದ್ಯಾಭ್ಯಾಸದಲ್ಲಿ ಸಾಧನೆ. ಶುಭಸಂಖ್ಯೆ: 5
ಮಕರ: ಯಾಂತ್ರಿಕ ಜೀವನದಿಂದ ವಿಮುಖರಾಗಿ ದೂರದೂರಿಗೆ ಪ್ರಯಾಣ. ಬಂಧುಮಿತ್ರರ ಭೇಟಿ. ಧಾರ್ವಿುಕ ಕ್ಷೇತ್ರಕ್ಕೆ ಹೋಗುವಿರಿ. ಶುಭಸಂಖ್ಯೆ: 3
ಕುಂಭ: ವೈದ್ಯರ ಸಲಹೆಯನ್ನು ಶಿಸ್ತಿನಿಂದ ಪಾಲಿಸಿ. ನಿಮಗೆ ಸಂಬಂಧವಿರದ ವಿಷಯದಿಂದ ದೂರವಿರಿ. ಮಕ್ಕಳಿಂದ ಹೆಮ್ಮೆ. ಶುಭಸಂಖ್ಯೆ: 7
ಮೀನ: ನಿಮ್ಮ ಬಗ್ಗೆ ಟೀಕೆ ಮಾಡುವವರನ್ನು ನಿರ್ಲಕ್ಷಿಸಿ. ವಿಶೇಷ ಉದ್ದಿಮೆ ಪ್ರಾರಂಭಕ್ಕೆ ನಿರ್ಧಾರ. ಮಗನ ಮದುವೆಗೆ ಮುಹೂರ್ತ. ಶುಭಸಂಖ್ಯೆ: 9
| ವೇ|| ಬ್ರ|| ಶ್ರೀ ದೇವದತ್ತ ಶರ್ಮಾ ಗುರೂಜಿ