ಮೇಷ: ಮಾತಿನ ಮೋಡಿಯಿಂದ ಜನಾಕರ್ಷಣೆ. ಸಹೋದ್ಯೋಗಿಗಳಿಂದ ವಿಶೇಷ ಸಲಹೆ. ಹಣದ ಅಪವ್ಯಯವಾದೀತು. ಶುಭಸಂಖ್ಯೆ: 9
ವೃಷಭ: ಕೆಲಸದ ಒತ್ತಡ ಸಹಜ. ಆದರೆ ಕುಟುಂಬವೂ ಮುಖ್ಯ. ಆದ್ದರಿಂದ ಅದಷ್ಟೇ ಒತ್ತಡವಿದ್ದರೂ ಕುಟುಂಬವನ್ನು ಮರೆಯಬೇಡಿ. ಶುಭಸಂಖ್ಯೆ: 2
ಮಿಥುನ: ಬಹಳ ದಿನಗಳ ಕನಸು ನನಸಾಗಲಿದೆ. ವಿವಾಹದ ನಿರೀಕ್ಷೆಯಲ್ಲಿರುವವರಿಗೆ ಶುಭ. ತಂದೆಯ ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 9
ಕಟಕ: ಮನೆಗೆ ಬಂಧುಗಳು ಬರುವರು. ಅಕ್ಕ ತಂಗಿಯರ ಮನೆಗೆ ಭೇಟಿ. ಮನೆ ಕಟ್ಟುವ ಕೆಲಸಕ್ಕೆ ಚಾಲನೆ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 7
ಸಿಂಹ: ದೃಢನಿರ್ಧಾರ ತೆಗೆದುಕೊಳ್ಳುವಲ್ಲಿ ದ್ವಂದ್ವ. ಹೊಸ ವ್ಯಾಪಾರದ ಪ್ರಾರಂಭ. ಬಂಧುಗಳಿಂದ ಪ್ರಶಂಸೆ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 5
ಕನ್ಯಾ: ಯಾರನ್ನೂ ಅತಿಯಾಗಿ ನಂಬಬೇಡಿ. ಸಾಲಗಾರರಿಂದ ಅವಮಾನ. ವ್ಯಾಪಾರಸ್ಥರಿಗೆ ನಷ್ಟ. ದೇವಾಲಯಕ್ಕೆ ಭೇಟಿ. ಶುಭಸಂಖ್ಯೆ: 5
ತುಲಾ: ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ಮನೆಯಲ್ಲಿ ಶುಭ ಸಮಾರಂಭದ ಸಡಗರ. ಶುಭಸಂಖ್ಯೆ: 7
ವೃಶ್ಚಿಕ: ಹಾಸಿಗೆ ಇದ್ದಷ್ಟು ಕಾಲು ಚಾಚುವುದು ಒಳಿತು. ಸಾರ್ವಜನಿಕ ಕ್ಷೇತ್ರದಲ್ಲಿ ವಿಶೇಷ ಮನ್ನಣೆ. ಗುರು ಸನ್ನಿಧಾನಕ್ಕೆ ಪ್ರಯಾಣ. ಶುಭಸಂಖ್ಯೆ: 5
ಧನಸ್ಸು: ಹಿರಿಯರ ಸಲಹೆ ಪಡೆಯಿರಿ. ಪ್ರತಿಭೆಗೆ ಸೂಕ್ತ ಪೋ›ತ್ಸಾಹ. ನಟರಿಗೆ ಕಾರ್ಯ ನಷ್ಟ. ಸಹೋದರಿ ಜತೆ ಭೋಜನ. ಶುಭಸಂಖ್ಯೆ: 6
ಮಕರ: ಅಸಾಧ್ಯವಾದುದನ್ನು ಸಾಧಿಸಿದ ಸಮಾಧಾನ. ಕುಟುಂಬ ವರ್ಗದಲ್ಲಿ ಮನ್ನಣೆ. ದಿನ ದರಿದ್ರರಿಗೆ ಸಹಾಯ ಮಾಡಿ. ಶುಭಸಂಖ್ಯೆ: 4
ಕುಂಭ: ರಾಜಕೀಯ ರಂಗದಲ್ಲಿ ಇರುವವರಿಗೆ ಅಧಿಕಾರ ನಷ್ಟ. ಕುಟುಂಬದ ಸಹಕಾರ. ಅಣ್ಣ-ತಮ್ಮಂದಿರ ಬಾಂಧವ್ಯ ವೃದ್ಧಿ. ಶುಭಸಂಖ್ಯೆ: 9
ಮೀನ: ಮನೆಯಲ್ಲಿ ಕಿರಿಕಿರಿ. ಆರ್ಥಿಕ ಮುಗ್ಗಟ್ಟು. ಮಕ್ಕಳಿಂದ ದುಂದುವೆಚ್ಚ. ತಾಯಿಯ ಮಾತನ್ನು ಪಾಲಿಸಿ ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 1
| ವೇ|| ಬ್ರ|| ಶ್ರೀ ದೇವದತ್ತ ಶರ್ಮಾ ಗುರೂಜಿ