ಮೇಷ: ಇಷ್ಟಪಟ್ಟು ಕೆಲಸ ಮಾಡುತ್ತೀರಿ, ಬೆಂಬಲಿಸುವವರೇ ಕೈ ಕೊಡಬಹುದು. ಇಷ್ಟ ದೇವರನ್ನು ಪ್ರಾರ್ಥಿಸಿ, ಕಾರ್ಯಸಿದ್ಧಿ ಆಗುತ್ತದೆ. ಶುಭಸಂಖ್ಯೆ: 2
ವೃಷಭ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆಗೆ ಪಾತ್ರರಾಗುವಿರಿ, ಅನಿರೀಕ್ಷಿತ ಧನ ಲಾಭವಿದೆ. ಚಿತ್ತ ಚಾಂಚಲ್ಯವನ್ನು ನಿಯಂತ್ರಿಸಿ. ಶುಭಸಂಖ್ಯೆ: 6
ಮಿಥುನ: ಮಗನಿಂದ ಕಿರಿಕಿರಿ. ಕುಟುಂಬದ ಬಿಗುವಿನ ವಾತಾವರಣವನ್ನು ತಿಳಿಯಾಗಿಸಿ. ಮಕ್ಕಳ ಭವಿಷ್ಯದ ಚಿಂತೆ ಕಾಡಬಹುದು. ಶುಭಸಂಖ್ಯೆ: 9
ಕಟಕ: ಆತ್ಮೀಯ ಸ್ನೇಹಿತನ ಭೇಟಿ. ಮಕ್ಕಳ ಬದುಕಿನ ಕುರಿತು ಚಿಂತೆ, ತಿರುಗಾಟ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳಿಂದ ಛೀಮಾರಿ. ಶುಭಸಂಖ್ಯೆ:1
ಸಿಂಹ: ಫಲಿತಾಂಶದ ಬಗ್ಗೆ ಯೋಚಿಸಬೇಡಿ. ನಿಮ್ಮ ಶ್ರಮ ಯಾವುದೇ ಕಾರಣಕ್ಕೂ ವ್ಯರ್ಥವಾಗುವುದಿಲ್ಲ. ಹಣದ ಅಪವ್ಯಯ. ಶುಭಸಂಖ್ಯೆ: 3
ಕನ್ಯಾ: ಆತ್ಮೀಯ ಸ್ನೇಹಿತನ ಭೆೇಟಿ. ಈ ದಿನ ನಿಜವಾದ ಸ್ನೇಹಿತನ ಅಂತರಾತ್ಮ ಗೊತ್ತಾಗುವುದು. ಹಿತಶತ್ರುಗಳಿಂದ ದೂರವಿರಿ. ಶುಭಸಂಖ್ಯೆ: 4
ತುಲಾ: ಅನಗತ್ಯ ವಿಷಯಗಳಲ್ಲಿ ತಲೆ ಹಾಕಬೇಡಿ. ಮಕ್ಕಳಿಂದ ಹಣ ನಷ್ಟ. ಕಚೇರಿಯಲ್ಲಿ ಸ್ನೇಹಿತರ ಸಲಹೆ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 6
ವೃಶ್ಚಿಕ: ಸಮಯ ಸಾಧಕರಿಂದ ದೂರ ಇದ್ದಷ್ಟೂ ಉತ್ತಮ. ನಿಮ್ಮ ಪ್ರತಿಭೆ ಪ್ರಯೋಜನಕ್ಕೆ ಬರುತ್ತದೆ. ಆತ್ಮೀಯರ ವಿಯೋಗ. ಶುಭಸಂಖ್ಯೆ: 2
ಧನಸ್ಸು: ಕಠಿಣ ಪರಿಶ್ರಮಕ್ಕೆ ಸರಿಯಾದ ಫಲ ಸಿಗುತ್ತದೆ. ಸಹೋದ್ಯೋಗಿಗಳಿಂದ ವಿಶೇಷ ಸಲಹೆ. ಕುಟುಂಬದೊಂದಿಗೆ ವಿಹಾರ ಶುಭ ಸಂಖ್ಯೆ: 7
ಮಕರ: ದೂರದ ಊರಿಗೆ ಪ್ರಯಾಣ. ಬೇಡ. ಆರೋಗ್ಯದಲ್ಲಿ ವ್ಯತ್ಯಾಸ. ವೈದ್ಯರ ಸಲಹೆ ಪಾಲಿಸಿ. ಹಿರಿಯರಿಂದ ಸಲಹೆ. ಶುಭಸಂಖ್ಯೆ: 4
ಕುಂಭ: ವೈದ್ಯರ ಸಲಹೆ ಸೂಚನೆಗಳನ್ನು ಪಾಲಿಸಿ. ಅನಗತ್ಯ ವಿವಾದಗಳಿಂದ ದೂರವಿರಿ. ಕಚೇರಿಯಲ್ಲಿ ಹೆಚ್ಚಿನ ಶ್ರಮ. ಶುಭಸಂಖ್ಯೆ: 9
ಮೀನ: ಆತ್ಮವಿಶ್ವಾಸದಿಂದ ಮುಂದುವರಿಯಿರಿ. ನನೆಗುದಿಗೆ ಬಿದ್ದ ಕಾರ್ಯಕ್ಕೆ ಚಾಲನೆ. ಭೂಮಿ ಖರೀದಿ. ಕುಟುಂಬದಲ್ಲಿ ಸಡಗರ. ಶುಭಸಂಖ್ಯೆ: 1
| ವೇ|| ಬ್ರ|| ಶ್ರೀ ದೇವದತ್ತ ಶರ್ಮಾ ಗುರೂಜಿ