ಮೇಷ: ಕಚೇರಿಯಲ್ಲಿ ಹೊಸ ಜವಾಬ್ದಾರಿ ನಿರ್ವಹಿಸಿದ ಸಮಾಧಾನ. ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 1
ವೃಷಭ; ಸಣ್ಣವ್ಯಾಪಾರಸ್ಥರಿಗೆ ಸಾಧಾರಣ ಲಾಭ. ಅನವಶ್ಯಕ ಖರ್ಚು ಉಂಟಾದೀತು. ಸ್ನೇಹಿತನ ಮನೆಗೆ ಭೇಟಿ ನೀಡುವಿರಿ. ಶುಭಸಂಖ್ಯೆ: 7
ಮಿಥುನ: ನ್ಯಾಯಾಲಯದ ಕೆಲಸಗಳಲ್ಲಿ ವಿಘ್ನ. ವಿನಾಕಾರಣ ಖರ್ಚು ಮಾಡಬೇಕಾದೀತು. ಆರೋಗ್ಯ ಸುಧಾರಣೆ. ಶುಭಸಂಖ್ಯೆ: 7
ಕಟಕ: ಉದ್ಯೋಗಸ್ಥರಿಗೆ ಅಲ್ಪ ಪ್ರಗತಿ. ಮಗಳ ವಿಚಾರದಲ್ಲಿ ಗೊಂದಲ ಬಗೆಹರಿದು ಸಮಾಧಾನ. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 6
ಸಿಂಹ: ಅಂದುಕೊಂಡ ಕಾರ್ಯದಲ್ಲಿ ಯಶ. ದುರಭಿಮಾನ ಒಳ್ಳೆಯದಲ್ಲ, ತಾಯಿಯನ್ನು ನಿರ್ಲಕ್ಷಿಸಬೇಡಿ. ದಿನಾಂತ್ಯಕ್ಕೆ ಆಯಾಸ. ಶುಭಸಂಖ್ಯೆ: 5
ಕನ್ಯಾ: ರಾಜಕಾರಣಿಗಳಿಗೆ ಸ್ವಕ್ಷೇತ್ರದಲ್ಲಿ ಗೌರವ. ಕೃಷಿಕರಿಗೆ ಅಲ್ಪಮಟ್ಟಿನ ಪ್ರಗತಿ. ದಿನದ ಮಧ್ಯಭಾಗದಲ್ಲಿ ಚಿಂತೆ ಕಾಡಲಿದೆ. ಶುಭಸಂಖ್ಯೆ: 4
ತುಲಾ: ಮಿತ್ರರಿಂದ ವಂಚನೆ. ಕುಟುಂಬದಲ್ಲಿ ಸಮಾಧಾನ. ಮನೆಯಲ್ಲಿ ಮಗನ ವಿವಾಹದ ಕುರಿತು ಸಮಾಲೋಚನೆ. ಶುಭಸಂಖ್ಯೆ: 3
ವೃಶ್ಚಿಕ: ಕುಟುಂಬದವರೊಂದಿಗೆ ದೇವಾಲಯಕ್ಕೆ ಭೇಟಿ. ಮನೆಯಲ್ಲಿ ನೆಮ್ಮದಿಯ ವಾತಾವರಣ. ವ್ಯಾಪಾರಸ್ಥರಿಗೆ ಲಾಭ. ಶುಭಸಂಖ್ಯೆ: 2
ಧನಸ್ಸು: ಕಾರ್ಯಸಾಧನೆಗಾಗಿ ತಿರುಗಾಟ ಅನಿವಾರ್ಯ. ಗುರು ಕ್ಷೇತ್ರಕ್ಕೆ ಭೇಟಿ. ಮಾತಿನಿಂದ ಶತ್ರುಗಳು ಸೃಷ್ಟಿಯಾದಾರು. ಶುಭಸಂಖ್ಯೆ: 8
ಮಕರ: ದೃಢ ನಿರ್ಧಾರವನ್ನು ತೆಗೆದುಕೊಳ್ಳು ಸಾಧ್ಯವಾಗದೆ ಮನಸ್ಸಿಗೆ ಚಿಂತೆ. ಕಚೇರಿಯಲ್ಲಿ ಗೌರವಕ್ಕೆ ಧಕ್ಕೆ. ಪತ್ನಿಗೆ ಅನಾರೋಗ್ಯ. ಶುಭಸಂಖ್ಯೆ: 6
ಕುಂಭ: ಸಂಬಂಧವಿಲ್ಲದ ವಿಷಯಗಳ ತಂಟೆ ಬೇಡ. ಕೃಷಿಯಲ್ಲಿ ಲಾಭ. ಕೋರ್ಟು ವ್ಯವಹಾರಗಳಲ್ಲಿ ಅಡಚಣೆ .ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 8
ಮೀನ: ಗಾಯಕರಿಗೆ ಅವಕಾಶ. ವ್ಯಾಪಾರದಲ್ಲಿ ಪ್ರಗತಿ. ಸಾರ್ವಜನಿಕವಾಗಿ ಮನ್ನಣೆ. ಕುಟುಂಬದಲ್ಲಿ ಸಂತಸ. ಅನಿರೀಕ್ಷಿತ ಧನಾಗಮ. ಶುಭಸಂಖ್ಯೆ: 9
| ವೇ|| ಬ್ರ|| ಶ್ರೀ ದೇವದತ್ತ ಶರ್ಮಾ ಗುರೂಜಿ