ನ್ಯೂಸ್

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗಲಿದೆ

ಮೇಷ: ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಗೆಳೆಯರಿಂದ ಮೋಸ. ನಿಮ್ಮ ಆತ್ಮಬಲ ದೈವ ಬಲದಿಂದ ನಿಮ್ಮ ಕೆಲಸಕ್ಕೆ ಯಶಸ್ಸು. ಶುಭಸಂಖ್ಯೆ: 4

ವೃಷಭ: ಹಣದ ವಿಪರೀತ ಖರ್ಚು. ಮಾನಸಿಕವಾಗಿ ಅಶಾಂತಿ ತಲೆದೋರೀತು. ದಿನಾಂತ್ಯದಲ್ಲಿ ಆತ್ಮೀಯರ ಭೇಟಿ, ಸ್ವಲ್ಪ ನೆಮ್ಮದಿ. ಶುಭಸಂಖ್ಯೆ: 2

ಮಿಥುನ: ನಿಮ್ಮ ವಾಗ್ಝರಿಯಿಂದ ಸಮಸ್ಯೆ ಪರಿಹಾರ ಮಾಡಿದ ಸಮಾಧಾನ. ವ್ಯಾಪಾರದಲ್ಲಿ ಅಧಿಕ ಲಾಭ. ಮನೆಯಲ್ಲಿ ಸಡಗರ. ಶುಭಸಂಖ್ಯೆ:2

ಕಟಕ: ಮಕ್ಕಳ ಅವಿಧೇಯತೆ ನೋವುಂಟು ಮಾಡುವುದು. ಸಂಗಾತಿಯಿಂದ ಸಮಾಧಾನ. ದೃಢ ನಿರ್ಧಾರ ತೆಗೆದುಕೊಳ್ಳಲು ಗೊಂದಲ. ಶುಭಸಂಖ್ಯೆ: 3

ಸಿಂಹ: ಫಲಿತಾಂಶಕ್ಕೆ ತಲೆಕೆಡಿಸಿಕೊಳ್ಳಬೇಡಿ. ಪ್ರಯತ್ನ ಮುಂದುವರಿಸಿ. ಹಿತಶತ್ರುಗಳಿಂದ ತೊಂದರೆ. ಕುಟುಂಬದಲ್ಲಿ ಅಸಮಾಧಾನ. ಶುಭಸಂಖ್ಯೆ: 1

ಕನ್ಯಾ: ಆತ್ಮೀಯ ಮಿತ್ರರು ಶತ್ರುವಾಗಿ ಪರಿವರ್ತನೆ. ನಂಬಿದವರಿಂದಲೇ ಮೋಸ. ವಿದ್ಯಾರ್ಥಿಗಳಿಗೆ ಶುಭದಿನ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 3

ತುಲಾ: ಅನಗತ್ಯ ದುಂದುವೆಚ್ಚ. ಬರಬೇಕಾಗಿದ್ದ ಹಣದ ವಿಷಯದಲ್ಲಿ ನಿರಾಸೆ. ಕುಟುಂಬದ ಪರ್ಯಾಯ ವ್ಯವಸ್ಥೆಗೆ ಚಿಂತನೆ. ಶುಭಸಂಖ್ಯೆ: 7

ವೃಶ್ಚಿಕ: ಸಮಯಸಾಧಕರಿಂದ ಅಂತರವಿರಲಿ. ನಂಬಿದವರಿಂದ ಮೋಸ. ಸಂಗೀತಗಾರರಿಗೆ ವಿಶೇಷ ವೇದಿಕೆ. ಆಯಾಸ. ಶುಭಸಂಖ್ಯೆ: 6

ಧನಸ್ಸು: ಕಷ್ಟಪಟ್ಟರೆ ಸುಖ ಎನ್ನುವುದಕ್ಕೆ ಬದ್ಧರಾಗಿ. ನಟರಿಗೆ ವಿಶೇಷ ಬೆಂಬಲ. ಸಾಮಾಜಿಕವಾಗಿ ಕಿರಿಕಿರಿ. ವಿದ್ಯಾಭ್ಯಾಸದಲ್ಲಿ ಸಾಧನೆ. ಶುಭಸಂಖ್ಯೆ: 5

ಮಕರ: ಯಾಂತ್ರಿಕ ಜೀವನದಿಂದ ವಿಮುಖರಾಗಿ. ದೂರದೂರಿಗೆ ಪ್ರಯಾಣ, ಬಂಧುಮಿತ್ರರ, ಧಾರ್ವಿುಕ ಕ್ಷೇತ್ರದಭೇಟಿ. ಶುಭಸಂಖ್ಯೆ: 3

ಕುಂಭ: ವೈದ್ಯರ ಸಲಹೆಯನ್ನು ಶಿಸ್ತಿನಿಂದ ಪಾಲಿಸಿ. ನಿಮಗೆ ಸಂಬಂಧವಿರದ ವಿಷಯದಿಂದ ಅಂತರವಿರಲಿ. ಮಕ್ಕಳಿಂದ ಹೆಮ್ಮೆ. ಶುಭಸಂಖ್ಯೆ: 7

ಮೀನ: ನಿಮ್ಮ ಬಗ್ಗೆ ಟೀಕೆ ಮಾಡುವವರ ಬಗ್ಗೆ ನಿರ್ಲಕ್ಷಿಸಿ. ವಿಶೇಷ ಉದ್ದಿಮೆ ಪ್ರಾರಂಭ ನಿರ್ಧಾರ. ಮಗನ ಮದುವೆಗೆ ಮುಹೂರ್ತ. ಶುಭಸಂಖ್ಯೆ: 9

| ವೇ|| ಬ್ರ|| ಶ್ರೀ ದೇವದತ್ತ ಶರ್ಮಾ ಗುರೂಜಿ