ನ್ಯೂಸ್

ದಿನ ಭವಿಷ್ಯ: ಈ ರಾಶಿಯವರಿಗೆ ಇಂದು ಅನಿರೀಕ್ಷಿತ ಅಧಿಕಾರ ಪ್ರಾಪ್ತಿ

ಮೇಷ: ಆರೋಗ್ಯ ಉತ್ತಮ. ಶಾರೀರಿಕ ಬಲ ವೃದ್ಧಿ. ಅನಿರೀಕ್ಷಿತ ಧನಾಗಮ. ಕಚೇರಿಯಲ್ಲಿ ಸಹಾಯ, ಸಹಕಾರ ಪ್ರಾಪ್ತಿ. ಉತ್ತಮ ವಾಕ್​ಚತುರತೆ. ಶುಭ ಸಂಖ್ಯೆ 9

ವೃಷಭ: ಎಲ್ಲರಿಂದಲೂ ಮಾನ್ಯತೆ. ಧನ ಸಂಪತ್ತು ವೃದ್ಧಿ. ಸರ್ವ ಕಾರ್ಯಗಳಲ್ಲಿ ಸಫಲತೆ. ಗೃಹದಲ್ಲಿ ಸಂತಸದ ವಾತಾ ವರಣ. ವಿದ್ಯಾರ್ಜನೆಯಲ್ಲಿ ಆಸಕ್ತಿ. ಶುಭ ಸಂಖ್ಯೆ 1

ಮಿಥುನ: ಶಾರೀರಿಕ, ಮಾನಸಿಕ ಸ್ಥಿತಿಯಲ್ಲಿ ವ್ಯತ್ಯಾಸ. ಸಹೋದ್ಯೋಗಿಗಳ ಸಹಾಯದಿಂದ ಕೆಲಸಗಳಲ್ಲಿ ಜಯ. ಹಿರಿಯರ ಆರೋಗ್ಯ ಗಮನಿಸಿ. ಶುಭ ಸಂಖ್ಯೆ 4

ಕಟಕ: ಧಾರ್ವಿುಕ ಕಾರ್ಯಗಳಿಗೆ ಧನ ವ್ಯಯ. ದೂರದ ಬಂಧು ಮಿತ್ರರ ಭೇಟಿ. ಉದ್ಯೋಗ, ದೂರದ ವ್ಯವಹಾರಗಳಲ್ಲಿ ಮುನ್ನಡೆ. ಹಿರಿಯರಿಂದ ಸುಖ. ಶುಭಸಂಖ್ಯೆ 8

ಸಿಂಹ: ಉದ್ಯೋಗದಲ್ಲಿ ತಾಳ್ಮೆ ಅಗತ್ಯ. ವಿದ್ಯಾರ್ಜನೆಯಲ್ಲಿ ಯಶಸ್ಸು. ಆಳವಾದ ಜ್ಞಾನ ಸಂಪಾದನೆಯಲ್ಲಿ ಅಭಿರುಚಿ. ಹಣಕಾಸಿನ ವಿಚಾರದಲ್ಲಿ ಹೆಚ್ಚಿದ ಪ್ರಗತಿ. ಶುಭ ಸಂಖ್ಯೆ 3

ಕನ್ಯಾ: ಸರಕಾರಿ ಕೆಲಸಗಳಲ್ಲಿ ಯಶಸ್ಸು. ಸ್ವಸಾಮರ್ಥ್ಯದಿಂದ ನಿರೀಕ್ಷೆಗೂ ಮೀರಿದ ಧನ ಸಂಪತ್ತು ವೃದ್ಧಿ. ಧಾರ್ವಿುಕ ಕಾರ್ಯದಲ್ಲಿ ತೊಡಗುವಿಕೆ. ಶುಭಸಂಖ್ಯೆ 6.

ತುಲಾ: ಭೂವ್ಯವಹಾರದಲ್ಲಿ ಅತ್ಯುತ್ತಮ ಪ್ರಗತಿ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಪ್ರತಿಫಲ. ವರ್ತಕರಿಗೆ ಕಾರ್ಯ ಕ್ಷೇತ್ರದಲ್ಲಿ ಅಭಿವೃದ್ಧಿ. ಕೌಟುಂಬಿಕ ಸುಖ. ಶುಭಸಂಖ್ಯೆ 2

ವೃಶ್ಚಿಕ: ಅನಿರೀಕ್ಷಿತ ಅಧಿಕಾರ ಪ್ರಾಪ್ತಿ. ಗುರುಹಿರಿಯರ ಮೇಲಧಿಕಾರಿಗಳ ಪ್ರೀತಿ ವಿಶ್ವಾಸ ಗಳಿಕೆ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ. ಶುಭ ಸಂಖ್ಯೆ 4

ಧನಸ್ಸು: ಗೃಹೋಪಕರಣ ವಸ್ತುಗಳ ಸಂಗ್ರಹ. ಸಣ್ಣ ಪ್ರಯಾಣ. ಪಾಲುದಾರಿಕಾ ವ್ಯವಹಾರದಲ್ಲಿ ಸಾಮರಸ್ಯಕ್ಕೆ ಆದ್ಯತೆ ನೀಡಿ. ವಿದ್ಯಾರ್ಥಿಗಳಿಗೆ ಅನುಕೂಲ. ಶುಭ ಸಂಖ್ಯೆ 4

ಮಕರ: ಜಲೋತ್ಪನ್ನ ವಸ್ತುಗಳ ಕ್ರಯವಿಕ್ರಯದಲ್ಲಿ ಉತ್ತಮಪ್ರಗತಿ. ಸಂಶೋಧಕರಿಗೆ ಸಂದರ್ಭಕ್ಕೆ ಸರಿಯಾಗಿ ಸಹಾಯ. ಅನಗತ್ಯ ಖರ್ಚಿಗೆ ಅವಕಾಶ ನೀಡದಿರಿ. ಶುಭ ಸಂಖ್ಯೆ 9

ಕುಂಭ: ಮಾತಿನಲ್ಲಿ ಕಠೋರತೆ ತೋರದಿರಿ. ಪಾಲುದಾರಿಕಾ ವ್ಯವಹಾರಸ್ಥರು ತಾಳ್ಮೆಯಿಂದ ಕಾರ್ಯ ಸಾಧಿಸಿಕೊಳ್ಳಿ. ಮಿತ್ರರಿಂದ ಸಹಾಯ ಒದಗಿ ಬರುವುದು. ಶುಭ ಸಂಖ್ಯೆ 1

ಮೀನ: ಆರೋಗ್ಯ ಗಮನಹರಿಸಿ. ದೇವತಾ ಕಾರ್ಯಗಳಲ್ಲಿ ಭಾಗಿಯಾದ ಸಂತೋಷ. ಕಾರ್ವಿುಕರು ಸಹೋದರರಲ್ಲಿ ತಾಳ್ಮೆಯಿರಲಿ. ಶುಭ ಸಂಖ್ಯೆ 5