ನ್ಯೂಸ್

ಭವಿಷ್ಯ: ಈ ರಾಶಿಯವರಿಗಿಂದು ಉನ್ನತ ಸ್ಥಾನಮಾನ, ಪರರ ಧನ ಪ್ರಾಪ್ತಿ

ಮೇಷ: ಉನ್ನತ ಸ್ಥಾನಮಾನ, ಪರರ ಧನ ಪ್ರಾಪ್ತಿ. ದೈವಿಕ ಚಿಂತನೆಯಿಂದ ಮಾನಸಿಕ ಶಾಂತಿ, ಗುರು ಹಿರಿಯರಲ್ಲಿ ಭಕ್ತಿ ಪ್ರದರ್ಶನ. ಶುಭಸಂಖ್ಯೆ: 9

ವೃಷಭ: ನೌಕರಿಯಲ್ಲಿ ಬಡ್ತಿ. ಕೈಹಾಕಿದ ಕೆಲಸಗಳಲ್ಲಿ ಜಯ. ಸುಖ ಭೋಜನ. ಬಂಧುಗಳಲ್ಲಿ ಕಲಹ. ಎಲ್ಲಿ ಹೋದರೂ ಅಶಾಂತಿ. ಶುಭಸಂಖ್ಯೆ: 4

ಮಿಥುನ: ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವಿರಿ. ಷೇರು ವ್ಯವಹಾರಗಳಲ್ಲಿ ಉತ್ತಮ ಆದಾಯ, ಚಂಚಲ ಮನಸ್ಸು. ಶುಭಸಂಖ್ಯೆ:7

ಕಟಕ: ಗುತ್ತಿಗೆ ಕೆಲಸಗಾರರಿಗೆ ಅನುಕೂಲ. ಆರೋಗ್ಯದಲ್ಲಿ ಏರುಪೇರು ಆದೀತು. ಮನಸ್ಸಿಗೆ ಸದಾ ಸಂಕಟ. ವಿನಾಕಾರಣ ನಿಷ್ಠುರ. ಶುಭಸಂಖ್ಯೆ: 3

ಸಿಂಹ: ಕೆಲಸವನ್ನು ತಾಳ್ಮೆಯಿಂದ ನಿಭಾಯಿಸಿ. ಹೊಸ ವ್ಯಕ್ತಿಗಳ ಪರಿಚಯವಾಗುವುದು. ಕೆಲಸ ಕಾರ್ಯಗಳಲ್ಲಿ ಮಂದಗತಿ. ಶುಭಸಂಖ್ಯೆ: 3

ಕನ್ಯಾ: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಲಾಭ. ತಾಳ್ಮೆ ಅಗತ್ಯ. ಮನಸ್ತಾಪ, ಆಕಸ್ಮಿಕ ನಷ್ಟ. ಆಸ್ತಿ ವಿಚಾರದಲ್ಲಿ ಕಲಹವಾದೀತು. ಶುಭಸಂಖ್ಯೆ: 9

ತುಲಾ: ಬೇಜವಾಬ್ದಾರಿತನದಿಂದ ಸಂಕಷ್ಟ ಅನುಭವಿಸುವಿರಿ. ನಿದ್ರಾಭಂಗ. ಕಾಲು ನೋವು. ಸಾಲಬಾಧೆ. ಆರ್ಥಿಕ ಸಂಕಷ್ಟ ಎದುರಾದೀತು. ಶುಭಸಂಖ್ಯೆ: 6

ವೃಶ್ಚಿಕ: ಸೌಖ್ಯಕ್ಕೆ ಧಕ್ಕೆ. ಮಿತ್ರರಿಂದ ಸಹಾಯ ದೊರೆಯುವುದು. ಆಲಸ್ಯ ಮನೋಭಾವ. ವಾಹನ ಅಪಘಾತ ಸಾಧ್ಯತೆ, ಎಚ್ಚರ. ಶುಭಸಂಖ್ಯೆ:7

ಧನುಸ್ಸು: ಮಾತಿನ ಮೇಲೆ ನಿಗಾ ಇರಲಿ. ಅಕಾಲ ಭೋಜನ ಮಾಡಬೇಕಾಗಬಹುದು. ವಿವಾಹಕ್ಕೆ ಅಡಚಣೆ. ಸಾಲ ಮಾಡುವ ಸಾಧ್ಯತೆ. ಶುಭಸಂಖ್ಯೆ: 2

ಮಕರ: ಅಭಿವೃದ್ಧಿ ಕುಂಠಿತವಾಗಲಿದೆ. ಆಪ್ತರಿಂದ ಸಹಾಯ. ಅತಿಯಾದ ಪ್ರಯಾಣದಿಂದ ಆಯಾಸ. ಈ ದಿನ ಸಾಧಾರಣ ಫಲ. ಶುಭಸಂಖ್ಯೆ: 5

ಕುಂಭ: ಅನಗತ್ಯ ಖರ್ಚಿಗೆ ನೂರಾರು ದಾರಿ. ವಿರೋಧಿಗಳಿಂದ ಕಿರುಕುಳ ಅನುಭವಿಸುವಿರಿ. ಸಾಧಾರಣ ಫಲ. ಕೋಪ ಜಾಸ್ತಿ. ಶುಭಸಂಖ್ಯೆ: 1

ಮೀನ: ಪ್ರಯತ್ನದಿಂದ ಕಾರ್ಯ ಸಫಲ. ವಿಪರೀತ ತಿರುಗಾಟ. ನಂಬಿಕಸ್ಥರಿಂದ ಅಶಾಂತಿ. ಅನವಶ್ಯಕ ವಿಷಯಗಳಿಂದ ದೂರವಿರಿ. ಶುಭಸಂಖ್ಯೆ: 8