ನ್ಯೂಸ್

ಭವಿಷ್ಯ: ಈ ರಾಶಿಯವರಿಂದು ಆರ್ಥಿಕ ಸುಧಾರಣೆಗೆ ಸೂಕ್ತ ಕಾಲ, ಷೇರು ವ್ಯವಹಾರದಲ್ಲಿ ಲಾಭ

ಮೇಷ: ಹೋಟೆಲ್, ಬೇಕರಿ ಉದ್ಯಮದವರಿಗೆ ವ್ಯಾಪಾರದಲ್ಲಿ ಹಿನ್ನಡೆ ಉಂಟಾಗಬಹುದು. ಬಂಧುಗಳಿಂದ ಸಹಾಯ ನಿರೀಕ್ಷಿಸಬೇಡಿ. ಶುಭಸಂಖ್ಯೆ: 1

ವೃಷಭ: ಸಮಸ್ಯೆಯಲ್ಲಿ ಸಿಲುಕುವ ಸಂಭವವಿರುವುದು. ವ್ಯಾಪಾರ ವ್ಯವಹಾರವನ್ನು ನಡೆಸುವಾಗ ಹಣಕಾಸಿನ ವಿಚಾರದಲ್ಲಿ ಗಮನವಿರಲಿ. ಶುಭಸಂಖ್ಯೆ: 9

ಮಿಥುನ: ಆಡಿದ ಮಾತುಗಳು ಮುಳ್ಳಾಗುವ ದಿನ. ದಾಖಲೆಯ ಪತ್ರಗಳ ಕುರಿತು ಹೆಚ್ಚಿನ ಗಮನವಿರಲಿ. ಪರಿಣಿತರ ಅನುಭವವನ್ನು ಕೇಳಿ. ಶುಭಸಂಖ್ಯೆ: 9

ಕಟಕ: ಜವಳಿ ವ್ಯಾಪಾರಿಗಳಿಗೆ ಅಧಿಕ ವ್ಯಾಪಾರ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ. ಬೆಲೆ ಬಾಳುವ ವಸ್ತು ಕಾಣೆಯಾದೀತು, ಜಾಗ್ರತೆ. ಶುಭಸಂಖ್ಯೆ: 5

ಸಿಂಹ: ಸಂಶೋಧನಾ ವೃತ್ತಿಯವರಿಗೆ ಸುಸಮಯ. ದೇಹದಲ್ಲಿ ಪಿತ್ತದ ಅಂಶ ಜಾಸ್ತಿಯಾದೀತು. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಶುಭಸಂಖ್ಯೆ: 7

ಕನ್ಯಾ: ಆರ್ಥಿಕ ಸುಧಾರಣೆಗೆ ಸೂಕ್ತ ಕಾಲ. ಷೇರು ವ್ಯವಹಾರದಲ್ಲಿ ಲಾಭ. ನಿಮ್ಮ ಪರೋಪಕಾರದಿಂದ ಸಹೋದ್ಯೋಗಿಗಳಿಗೆ ಸಂತಸ. ಶುಭಸಂಖ್ಯೆ: 3

ತುಲಾ: ಕೆಲಸದ ಬಗ್ಗೆ ಅಧಿಕಾರಿಗಳಲ್ಲಿ ಕಲಹ. ಕಾರ್ಯ ಸಾಧನೆಗೆ ಅಡ್ಡಿಯಾಗದು. ವಿವಾಹ ವಯಸ್ಕರಿಗೆ ನೂತನ ಸಂಬಂಧ ಬರಲಿದೆ. ಶುಭಸಂಖ್ಯೆ: 9

ವೃಶ್ಚಿಕ: ಔತಣ ಕೂಟದಲ್ಲಿ ಭಾಗವಹಿಸುವಿರಿ. ನೂತನ ವಸ್ತ್ರ ಖರೀದಿ ಯೋಗ. ಮಿತ್ರರೊಂದಿಗೆ ಮಾತುಕತೆಗಳಲ್ಲಿ ಕಾಲ ಕಳೆಯುವಿರಿ. ಶುಭಸಂಖ್ಯೆ:3

ಧನುಸ್ಸು: ಕೋರ್ಟ್ ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿದ ಜಯ. ಸಂಸ್ಥೆಯೊಂದರ ಸಲಹೆಗಾರರಾಗಿ ನೇಮಕ ಸಾಧ್ಯತೆ. ಜಾಗ್ರತೆ ಅಗತ್ಯ. ಶುಭಸಂಖ್ಯೆ: 4

ಮಕರ: ಹಲವು ಅವಕಾಶಗಳು ಎದುರಾಗುವುದರಿಂದ ಗೊಂದಲಕ್ಕೆ ಈಡಾಗುವಿರಿ. ವಾಹನ ಚಾಲನಾ ವೃತ್ತಿಯವರಿಗೆ ಶುಭವಿದೆ. ಶುಭಸಂಖ್ಯೆ: 6

ಕುಂಭ: ಸ್ನೇಹಿತರ ಸಂಪರ್ಕದಿಂದ ಜೀವನಕ್ಕೆ ಬೇಕಾದ ದಾರಿ ಸಿಗುವುದು. ಸಂಸ್ಥೆಯೊಂದರಲ್ಲಿ ಕೆಲಸ ಕೊಡಿಸಲು ಅಣ್ಣನ ಸಹಾಯ ಕೇಳಿ. ಶುಭಸಂಖ್ಯೆ: 9

ಮೀನ: ಸಂಬಂಧವಿಲ್ಲದ ವಿವಾದಗಳಿಂದ ದೂರ ಉಳಿಯುವುದು ಶೋಭೆ ತರಲಿದೆ. ವೈದ್ಯರು ನೀಡಿದ ಸಲಹೆಯನ್ನು ತಪ್ಪದೆ ಪಾಲಿಸಿ. ಶುಭಸಂಖ್ಯೆ: 2