ನ್ಯೂಸ್

ದಿನ ಭವಿಷ್ಯ: ಈ ರಾಶಿಯವರಿಗೆ ಇಂದು ಸಾಮಾಜಿಕ ಮನ್ನಣೆ ಸಿಗಲಿದೆ

ಮೇಷ: ಮಗಳಿಗೆ ಮದುವೆ ನಿಶ್ಚಯವಾಗಿ ಮನೆತುಂಬ ಸಂಭ್ರಮ. ಸಾಮಾಜಿಕ ಮನ್ನಣೆ ಸಿಗಲಿದೆ. ಕಚೇರಿಯಲ್ಲಿ ವಿಶೇಷ ದಿನ. ಶುಭಸಂಖ್ಯೆ: 8

ವೃಷಭ: ಕಲಾವಿದರಿಗೆ ವಿನೂತನ ಅವಕಾಶ. ಉದ್ಯೋಗ ದಲ್ಲಿ ವಿಶೇಷ ಲಾಭ. ಬಂಧುಗಳ ಭೆೇಟಿ. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 7

ಮಿಥುನ: ಆತ್ಮಾವಲೋಕನ ಮಾಡಿಕೊಳ್ಳಿ. ಮುಂದೆ ಎದುರಾಗುವ ಪರಿಸ್ಥಿತಿ ಸಮರ್ಥವಾಗಿ ನಿಭಾ ಯಿಸಬಹುದು. ತಾಳ್ಮೆ ಇರಲಿ. ಶುಭಸಂಖ್ಯೆ: 3

ಕಟಕ: ಕೃಷಿಕರಿಗೆ ವಿಶೇಷ ಲಾಭ. ಮೋಸ ಹೋಗುವ ಸಾಧ್ಯತೆಗಳಿವೆ ಎಚ್ಚರದಿಂದಿರಿ. ವಿಶೇಷ ಅತಿಥಿಯ ಆಗಮನ ಸಾಧ್ಯತೆ. ಶುಭಸಂಖ್ಯೆ: 7

ಸಿಂಹ: ಆರೋಗ್ಯ ಸಮಸ್ಯೆ ಸ್ವಲ್ಪಮಟ್ಟಿಗೆ ಶಮನ. ಆಹಾರದ ಕಡೆ ವಿಶೇಷ ನಿಗಾ ಇರಲಿ. ತಂದೆ- ತಾಯಿಯ ಸಲಹೆ ಪಡೆದುಕೊಳ್ಳಿ. ಶುಭಸಂಖ್ಯೆ: 1

ಕನ್ಯಾ: ಯೋಚನೆ ಸಾಕಾರಗೊಳ್ಳಲು ಇಷ್ಟ ದೇವರನ್ನು ಪ್ರಾರ್ಥಿಸಿ. ಗಾಯಕರಿಗೆ ವಿಶೇಷ ಅವಕಾಶ. ಸ್ನೇಹಿತರಿಂದ ಅವಮಾನ. ಶುಭಸಂಖ್ಯೆ: 6

ತುಲಾ: ನಿರ್ಧಾರ ತೆಗೆದುಕೊಳ್ಳುವಲ್ಲಿ ದ್ವಂದ್ವ ಎದುರಾಗ ಬಹುದು. ಕುಟುಂಬದ ಸಲಹೆಯನ್ನು ಪಡೆದು ಕೊಳ್ಳಿ. ದಿನಾಂತ್ಯದಲ್ಲಿ ಸಂತಸ. ಶುಭಸಂಖ್ಯೆ: 4

ವೃಶ್ಚಿಕ: ಬಾಳಸಂಗಾತಿಯೊಂದಿಗೆ ವ್ಯವಧಾನದಿಂದ ನಡೆದುಕೊಳ್ಳಿ. ವಾಹನ ಖರೀದಿಗೆ ನಿರ್ಧಾರ. ಮಕ್ಕಳ ಬಗ್ಗೆ ಗಮನವಿರಲಿ. ಶುಭಸಂಖ್ಯೆ: 5

ಧನಸ್ಸು: ಭೂ ವಿವಾದಕ್ಕೆ ಸಂಬಂಧಪಟ್ಟಂತೆ ಮಹತ್ವದ ನಿರ್ಧಾರ. ಮಾತಿನಿಂದ ಶತ್ರುಗಳು ಸೃಷ್ಟಿಯಾಗು ತ್ತಾರೆ. ಕುಟುಂಬದಲ್ಲಿ ಕಿರಿ-ಕಿರಿ. ಶುಭಸಂಖ್ಯೆ: 4

ಮಕರ: ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಮೆಚ್ಚುಗೆ. ವೃತ್ತಿಜೀವನದಲ್ಲಿ ಬಡ್ತಿ ಸಿಗಬಹುದು. ತಾಯಿಯ ಆಶೀರ್ವಾದ ಪಡೆಯಿರಿ. ಶುಭಸಂಖ್ಯೆ: 7

ಕುಂಭ: ವಿವಾಹ ಅಪೇಕ್ಷೆಗಳಿಗೆ ವಿವಾಹ ನಿಶ್ಚಯ. ತಂದೆ ತಾಯಿಯ ಮಾತನ್ನು ಧಿಕ್ಕರಿಸಬೇಡಿ. ಖರೀದಿಯಲ್ಲಿ ಮೋಸ. ಶುಭಸಂಖ್ಯೆ: 8

ಮೀನ: ವಂಚಕರು ಮೋಸ ಮಾಡುತ್ತಾರೆ ಜೋಕೆ. ಯಾವುದೇ ವಿಷಯದಲ್ಲಿ ದುಡುಕಬೇಡಿ. ಆಕಸ್ಮಿಕ ಧನಲಾಭ ಸಾಧ್ಯತೆ. ಶುಭಸಂಖ್ಯೆ: 9

| ವೇ|| ಬ್ರ|| ಶ್ರೀ ದೇವದತ್ತ ಶರ್ಮಾ ಗುರೂಜಿ