ಬೆಂಗಳೂರು: ವಿಜಯವಾಣಿ ಮತ್ತು ದಿಗ್ವಿಜಯ 24×7 ನ್ಯೂಸ್ ಚಾನಲ್ ವತಿಯಿಂದ ಜಯನಗರ 5ನೇ ಬ್ಲಾಕ್‌ನಲ್ಲಿರುವ ಶಾಲಿನಿ ಮೈದಾನದಲ್ಲಿ ಆಯೋಜಿಸಿರುವ ಎರಡು ದಿನಗಳ 'ಎಜುಕೇಷನ್ ಎಕ್ಸ್‌ಪೋ' ಕಾರ್ಯಕ್ರಮಕ್ಕೆ ಸಚಿವ ರಾಮಲಿಂಗಾರೆಡ್ಡಿ ಅದ್ದೂರಿ ಚಾಲನೆ ನೀಡಿದರು. ಚಿತ್ರನಟಿ ಮೇಘಾ ಶೆಟ್ಟಿ, ಶಾಸಕ ಸಿ.ಕೆ. ರಾಮಮೂರ್ತಿ ಜತೆಯಲ್ಲಿ ಸಚಿವರು ಮಳಿಗೆಗಳಿಗೆ ತೆರಳಿ ವೀಕ್ಷಿಸಿದರು.
ಬೆಳಗ್ಗೆಯಿಂದ ತಂಡೋಪತಂಡವಾಗಿ ವಿದ್ಯಾರ್ಥಿಗಳು ಹಾಗೂ ಪಾಲಕರು ಮಳಿಗೆಗಳಿಗೆ ಭೇಟಿ ನೀಡಿ ಶಿಕ್ಷಣ ಹಾಗೂ ಕೋರ್ಸ್‌ಗಳ ಬಗ್ಗೆ ಸಮಗ್ರ ಮಾಹಿತಿ ಪಡೆಯುತ್ತಿದ್ದು, ಮೊದಲ ದಿನವೇ ಎಕ್ಸ್‌ಪೋಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎರಡು ದಿನ ರಜೆ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಎಕ್ಸ್‌ಪೋಗೆ ಆಗಮಿಸಿ ಮಾಹಿತಿ ಪಡೆಯಬಹುದು.
ವೃತ್ತಿ ಶಿಕ್ಣಣ, ಉನ್ನತ ಶಿಕ್ಷಣ ಕುರಿತು ವಿದ್ಯಾರ್ಥಿಗಳಿಗಿರುವ ಗೊಂದಲ ನಿವಾರಣೆಗೆ ಎಕ್ಸ್‌ಪೋ ಸಹಕಾರಿಯಾಗಲಿದೆ. ವಿದ್ಯಾರ್ಥಿಗಳು ಮತ್ತು ಪಾಲಕರು ಈ ವೇದಿಕೆಯನ್ನು ಸದ್ಬಳಕೆ ಮಾಡಿಕೊಳ್ಳಬಹುದು. ಎಕ್ಸ್‌ಪೋದಲ್ಲಿ 50ಕ್ಕೂ ಹೆಚ್ಚು ವಿವಿಗಳು, ಇಂಜಿನಿಯರಿಂಗ್ ಕಾಲೇಜುಗಳು ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಗಳ ಮಳಿಗೆಗಳು ಒಂದೇ ಸೂರಿನಡಿ ಇರವುದರಿಂದ ಕೋರ್ಸ್‌ಗಳ ಬಗ್ಗೆ ಉಪಯುಕ್ತ ಮಾಹಿತಿ ದೊರೆಯಲಿದೆ.
ಈ ಬಾರಿ ಎಕ್ಸ್‌ಪೋದಲ್ಲಿ ಮೊದಲ ಬಾರಿ ನವೋದ್ಯಮಕ್ಕೆ ವಿಶೇಷ ವೇದಿಕೆ ಕಲ್ಪಿಸಲಾಗಿದೆ. ವಿನೂತನ ಐಡಿಯಾಗಳನ್ನು ಪ್ರದರ್ಶಿಸುವವರಿಗೆ ಬಹುಮಾನ ಸಿಗಲಿದೆ. ನವೋದ್ಯಮ ಆರಂಭಿಸುವವರಿಗೆ ಇದೊಂದು ಒಳ್ಳೆಯ ಅವಕಾಶ. ವಿದ್ಯಾರ್ಥಿಗಳು ಯಾವುದೇ ಬಿಸಿನೆಸ್ ಐಡಿಯಾವನ್ನು ಎಕ್ಸ್‌ಪೋದಲ್ಲಿ ಪ್ರದರ್ಶಿಸಬಹುದು. 'ರಾಮಯ್ಯ ಎವೊಲ್ಯೂಟ್ ಫೌಂಡೇಶನ್' ಸಾರ್ಟಪ್ ಆರಂಭಿಸಲು ಒಂದು ಕೋಟಿ ರೂ.ವರೆಗೆ ಸಹಾಯಧನ ನೀಡಲಿದೆ. ನವೋದ್ಯಮ ಸಂಬಂಧಿಸಿದ ಚರ್ಚೆಗಳು ನಡೆಯಲಿವೆ.
ವೃತ್ತಿ ಶಿಕ್ಷಣ, ಉನ್ನತ ಶಿಕ್ಷಣ ಕುರಿತು ವಿದ್ಯಾರ್ಥಿಗಳಿಗಿರುವ ಗೊಂದಲ ನಿವಾರಣಿಗೆ ಎಕ್ಸ್‌ಪೋ ಸಹಕಾರಿಯಾಗಲಿದೆ. ವಿದ್ಯಾರ್ಥಿಗಳು ಮತ್ತು ಪಾಲಕರು ಈ ವೇದಿಕೆಯನ್ನು ಸದ್ಬಳಕೆ ಮಾಡಿಕೊಳ್ಳಬಹುದು. ಎಕ್ಸ್‌ಪೋದಲ್ಲಿ ಹಲವು ವಿವಿಗಳು, ಇಂಜಿನಿಯರಿಂಗ್ ಕಾಲೇಜುಗಳು ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಗಳು ಭಾಗವಹಿಸಲಿವೆ. ಇಂಜಿನಿ ಯರಿಂಗ್, ವೈದ್ಯಕೀಯ ಮತ್ತು ದಂತ ವೈದ್ಯಕೀಯ, ಎಂಬಿಎ, ಕಂಪ್ಯೂಟರ್ ಸೈನ್ಸ್, ಅನಿಮೇಷನ್, ಹೋಟೆಲ್ ಮ್ಯಾನೇಜ್‌ಮೆಂಟ್, ಬಾಹ್ಯಾಕಾಶ ತಂತ್ರಜ್ಞಾನ, ಸಮೂಹ ಸಂವಹನ, ಫ್ಯಾಷನ್‌ಡಿಸೈನ್ ಸೇರಿ ಇತರ ಕೋರ್ಸ್‌ಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು. ಪಾಲಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಸಂಸ್ಥೆಗಳು ಚರ್ಚಿಸಲು ಅವಕಾಶ ನೀಡಲಾಗುತ್ತದೆ. ಒಂದೇ ವೇದಿಕೆಯಲ್ಲಿ ಹಲವು ಕಾಲೇಜುಗಳ ಆಡಳಿತ ಮಂಡಳಿಗಳ ಮಾಹಿತಿ ದೊರೆಯುವುದರಿಂದ ಹಲವೆಡೆ ಮಾಹಿತಿ ಕಲೆಹಾಕುವ ತೊಂದರೆ ಕೂಡ ತಪ್ಪಲಿದೆ.