ನ್ಯೂಸ್

ಥೈಯ್ಲೆಂಡ್​ನಲ್ಲಿ ಪತಿ 'ದರ್ಶನ್'​ ಜೊತೆ ತೆಗೆಸಿದ್ದ ಫೋಟೋ ಪೋಸ್ಟ್​ ಮಾಡಿದ 'ವಿಜಯಲಕ್ಷ್ಮಿ'| Darshan

ಬೆಂಗಳೂರು: ಸ್ನೇಹಿತೆ ಪವಿತ್ರಾಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ ಎನ್ನುವ ಹಿನ್ನೆಲೆಯಲ್ಲಿ ನಟ ದರ್ಶನ್ ಸೇರಿದಂತೆ 7 ಮಂದಿ ಸೇರಿ​​ ಚಿತ್ರದುರ್ಗದ ನಿವಾಸಿಯಾಗಿರುವ ರೇಣುಕಾಸ್ವಾಮಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಪ್ರಕರಣದ ಹಿನ್ನೆಲೆಯಲ್ಲಿ ಜಾಮೀನು ರದ್ದಾಗಿ ದರ್ಶನ್​ ಮತ್ತೆ ಜೈಲು ಸೇರಿದ್ದಾರೆ. ಈ ಸಂದರ್ಭದಲ್ಲಿ ಇತ್ತ ಸೋಷಿಯಲ್ ಮೀಡಿಯಾದಲ್ಲಿ ಫುಲ್​ ಆ್ಯಕ್ಟೀವ್ ಆಗಿರುವ ದರ್ಶನ್ ಪತ್ನಿ ವಿಜಯಲಕ್ಷ್ಮಿ ತನ್ನ ಗಂಡನ ಜೊತೆಗಿನ ಥೈಲ್ಯಾಂಡ್ ಫೋಟೊಗಳನ್ನು ಇನ್​ಸ್ಟಾಗ್ರಾಮ್​​ನಲ್ಲಿ ಶೇರ್ ಮಾಡಿದ್ದಾರೆ.

ಜುಲೈ ತಿಂಗಳಲ್ಲಿ ಡೆವಿಲ್ ಸಿನಿಮಾ ಚಿತ್ರೀಕರಣಕ್ಕಾಗಿ ದರ್ಶನ್ ಥೈಯ್ಲೆಂಡ್‌ಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್ ಜೊತೆ ಪ್ರವಾಸವನ್ನೂ ಸಹ ಕೈಗೊಂಡಿದ್ದರು. ಆ ವೇಳೆ ತೆಗೆಸಿಕೊಂಡಿದ್ದಾ ಫೋಟೋವನ್ನು ಪತ್ನಿ ವಿಜಯಲಕ್ಷ್ಮಿ ಇದೀಗ ಶೇರ್​ ಮಾಡಿದ್ದು, ಪತಿಯನ್ನು ತುಂಬಾ ಮಿಸ್​ ಮಾಡಿಕೊಳ್ಳುತ್ತಿರುವ ಸಂದೇಶ ರವಾನಿಸಿರುವ ಹಾಗೆ ಕಾಣುತ್ತಿದೆ.

(ಏಜೆನ್ಸೀಸ್)

ಜೈಲಿಗೆ ಹೋಗುವುದಕ್ಕೂ ಮುನ್ನ ದರ್ಶನ್ ‘ದಿ ಡಿವಿಲ್’ ಚಿತ್ರದ ಶೂಟಿಂಗ್​ ಮುಗಿಸಿ ಹೋಗಿದ್ದಾರೆ. ಇನ್ನೇನೊ ಸಿನಿಮಾದ ಪ್ರಚಾರ ಶುರುಮಾಡಬೇಕು ಅನ್ನುವಷ್ಟರಲ್ಲಿ ಅವರ ಜಾಮೀನು ರದ್ದಾಗಿ, ಮತ್ತೆ ಜೈಲಿಗೆ ಹೋಗುವ ಪರಿಸ್ಥಿತಿ ಎದುರಾಯ್ತು. ಈ ಬೆನ್ನಲ್ಲೇ ದರ್ಶನ್ ಪರವಾಗಿ ಪತ್ನಿ ವಿಜಯಲಕ್ಷ್ಮಿ ‘ದಿ ಡೆವಿಲ್’ ಸಿನಿಮಾದ ಪ್ರಮೋಷನ್ ಬಗ್ಗೆ ಅಪ್​ಡೇಟ್ಸ್ ನೀಡುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸಿನಿಮಾಗೆ ಯಾವುದೇ ತೊಂದರೆ ಆಗದಂತೆ ಕೆಲಸ ಮುಂದುವರಿಸಲು ದರ್ಶನ್ ತಿಳಿಸಿದ್ದು, ಈ ಹಿನ್ನೆಲೆ ಪತ್ನಿಯೇ ಚಿತ್ರದ ಪ್ರಮುಖ ಉಸ್ತುವಾರಿಯಾಗಿ ಕೆಲಸ ಆರಂಭಿಸಿದ್ದಾರೆ.