ನ್ಯೂಸ್

ಮದುವೆಯಾಗುವುದಾಗಿ ಭರವಸೆ ನೀಡಿ ವಂಚಿಸಿದ್ದಾನೆ; ರಾಜಕಾರಣಿ ವಿರುದ್ಧ ದೂರು ನೀಡಿದ ಸೂರ್ಯವಂಶ ನಟಿ ವಿಜಯಲಕ್ಷ್ಮಿ

ಚೆನ್ನೈ: ಬಹುಭಾಷಾ ನಟಿ ವಿಜಯಲಕ್ಷ್ಮಿ,'ನಾಮ್ ತಮಿಳ್ ಕಚ್ಚಿ' ಪಕ್ಷದ ಅಧ್ಯಕ್ಷ ಸೀಮಾನ್ ವಿರುದ್ಧ ಹೊಸ ಆರೋಪ ಮಾಡಿದ್ದಾರೆ, ಮದುವೆಯಾಗುವುದಾಗಿ ಭರವಸೆ ನೀಡಿ ವಂಚಿಸಿದ್ದಾರೆಂದು ಪೊಲೀಸರಿಗೆ ದೂರು ನೀಡಿದ್ದಾರೆ.

2008ರಲ್ಲಿ 'ನಾಮ್ ತಮಿಳ್ ಕಚ್ಚಿ' ಪಕ್ಷದ ಅಧ್ಯಕ್ಷ ಸೀಮಾನ್ ಹಾಗೂ ವಿಜಯಲಕ್ಷ್ಮಿ ಮದುವೆಯಾಗಿದ್ದಾರೆ ಅಂತ ಸುದ್ದಿಯಾಗುತ್ತಿದೆ. ಈ ವಿಚಾರವಾಗಿ ಗ್ರೇಟರ್ ಚೆನ್ನೈ ಪೊಲೀಸ್ ಆಯುಕ್ತರಾದ ಸಂದೀಪ್ ರಾಯ್‌ ಭೇಟಿ ಮಾಡಿ ನಟಿ ಸೀಮಾನ್ ವಿರುದ್ಧ ನೀಡಿದ್ದಾರೆ. ಕನಕಾಂಬರಿ ಹಾಗೂ ಸೂರ್ಯವಂಶ ಸೇರಿದಂತೆ ಹಲವು ಕನ್ನಡ, ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿರುವ ವಿಜಯಲಕ್ಷ್ಮಿ ಈಗ ತಮಿಳುನಾಡಿನಲ್ಲಿ ಸುದ್ದಿಯಲ್ಲಿದ್ದಾರೆ.

ನಟಿ ಹೇಳಿದ್ದೇನು?: “ನಾನು ಕರ್ನಾಟಕದಲ್ಲಿ ಹುಟ್ಟಿದ್ದೇನೆ ಎಂಬ ಕಾರಣಕ್ಕೆ ವಿಡಿಯೋವನ್ನು ವೀಕ್ಷಿಸುತ್ತಿರುವ ಅಭಿಮಾನಿಗಳಿಗೆ ನಾನು ಹೇಳಲು ಬಯಸುತ್ತೇನೆ, ಸೀಮಾನ್ ನನಗೆ ಸಾಕಷ್ಟು ಹಿಂಸೆ ನೀಡಿದ್ದಾರೆ. ಒಬ್ಬ ಮಹಿಳೆಯಾಗಿ, ನಾನು ಅದನ್ನು ಸಹಿಸಿಕೊಂಡಿದ್ದೇನೆ. ಈಗ ನಿರಂತರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಮೇಲೆ ಕಿರುಕುಳ ನೀಡುತ್ತಿದ್ದಾರೆ. ನೀವು ನನಗೆ ನೋವು ಅನುಭವಿಸಲು ನನ್ನನ್ನು ನಾಚಿಕೆಪಡಿಸಿದ್ದೀರಿ ಮತ್ತು ನಿಮ್ಮಿಂದ ಅಂತಹ ಅವಮಾನಗಳನ್ನು ಎದುರಿಸಿದ ನಂತರ ಏನು ಮಾಡಬೇಕೆಂದು ನಿರ್ಧರಿಸುವುದು ನನಗೆ ಬಿಟ್ಟದ್ದು. ಈ ಪ್ರಕರಣದಿಂದ ಸೀಮಾನ್ ತಪ್ಪಿಸಿಕೊಳ್ಳಲು ಬಿಡಬೇಡಿ ಎಂದು ನನ್ನ ಅಭಿಮಾನಿಗಳಲ್ಲಿ ವಿನಂತಿಸುತ್ತೇನೆ. ಅವರು ಎಂದಿಗೂ ನಿರೀಕ್ಷಣಾ ಜಾಮೀನು ಪಡೆಯಬಾರದು. ನಾನು ಸೀಮಾನ್ ವಿಷಯಗಳನ್ನು ಹೊರಗೆ ತೆಗೆಯುತ್ತಿರುವೆ ಎಂದು ನನ್ನನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಾಡುತ್ತಿದ್ದಾರೆ. ನಾನು ಪಬ್ಲಿಸಿಟಿಗಾಗಿ ಇದನ್ನು ಮಾಡುತ್ತಿಲ್ಲ ಆದರೆ ಅವರ ಕಡೆಯವರು ತಪ್ಪಾಗಿ ಬಿಂಬಿಸುತ್ತಿದ್ದಾರೆ. ನಾವು ಒಟ್ಟಿಗೆ ಕುಳಿತುಕೊಂಡು ಮಾತನಾಡಿಕೊಂಡು ಸೆಟಲ್ ಮಾಡಿಕೊಳ್ಳಬೇಕಾದ ವಿಷಯಗಳು ದೊಡ್ಡದಾಗಿದೆ. ಭವಿಷ್ಯದಲ್ಲಿ ಎಷ್ಟು ಬೆದರಿಕೆ ಬಂದರೂ ಹಿಂದೆ ಸರಿಯುವುದಿಲ್ಲ' ಎಂದು ಮಾಧ್ಯಮಗಳ ಜೊತೆ ಮಾತನಾಡುತ್ತಾ ವಿಜಯಲಕ್ಷ್ಮಿ ಕಣ್ಣೀರಿಟ್ಟಿದ್ದಾರೆ.

ಆಕೆಯ ಸಹೋದರಿ ಉಷಾ ಮಾತನಾಡಿ, ವಿಜಯಲಕ್ಷ್ಮಿ ಸೀಮಾನ್ ಜತೆ ಎರಡು ವರ್ಷಗಳಿಂದ ಸಂಬಂಧದಲ್ಲಿದ್ದಳು. ಸೀಮಾನ್ ಅವರು ವಿಜಯಲಕ್ಷ್ಮಿ ಅವರನ್ನು ಮದುವೆಯಾಗುವುದಾಗಿ ಹೇಳಿದರು, ಆದರೆ ಅವರು ತಮ್ಮ ರಾಜಕೀಯ ಪಕ್ಷವನ್ನು ಪ್ರಾರಂಭಿಸಿದ ನಂತರ, ಎಲ್ಲವೂ ಬದಲಾಗಿದೆ. ಕಳೆದೆರಡು ವರ್ಷಗಳಿಂದ ಸೀಮಾನ್ ಮತ್ತು ಆತನ ಪಕ್ಷದವರು ಕಿರುಕುಳ ನೀಡುತ್ತಿದ್ದರು. ಹರಿ ನಾಡರೊಂದಿಗೆ ನಮಗೆ ಯಾವುದೇ ದ್ವೇಷವಿಲ್ಲ. ನಮ್ಮ ಮಾನಹಾನಿ ಮಾಡಲು ಸೀಮಾನ್ ಅವರಿಂದ ಪ್ರಚೋದನೆಗೆ ಒಳಗಾಗಿದ್ದರು. ಕಳೆದೆರಡು ದಿನಗಳ ಹಿಂದೆ ಸೀಮಾನ್ ವಿರುದ್ಧ ಮಾತನಾಡಲು ಮುಂದಾದರೆ ನನ್ನ ತಂಗಿಯ ನಾಲಿಗೆ ಕತ್ತರಿಸುತ್ತೇನೆ ಎಂದು ವಿಡಿಯೋ ಪೋಸ್ಟ್ ಮಾಡಿದ್ದರು. ಹತ್ತು ವರ್ಷಗಳ ಹಿಂದೆಯೇ ನಾವು ಸೀಮಾನ್ ವಿರುದ್ಧ ದೂರು ನೀಡಿದ್ದೆವು. ಕೊಲೆ ಬೆದರಿಕೆಯ ಹಿನ್ನೆಲೆಯಲ್ಲಿ ನಾವು ಆ ದೂರನ್ನು ಹಿಂಪಡೆಯುವಂತೆ ಒತ್ತಾಯಿಸಲಾಯಿತು. ಸೀಮಾನ್ ಪ್ರಭಾವದಿಂದ ವಿಜಯಲಕ್ಷ್ಮಿಗೆ ಸಿನಿಮಾ ಅವಕಾಶಗಳು ಸಿಗದಂತೆ ಮಾಡಿತ್ತು. ಬೆಂಗಳೂರಿಗೆ ತೆರಳಿ ಅಲ್ಲಿಯೂ ಸೀಮಾನ್ ನಿಂದ ಹಿಂಸೆ ಅನುಭವಿಸಿದ್ದೇವೆ. ಮಾರ್ಚ್ 8 ರಂದು ಮತ್ತೆ ಚೆನ್ನೈಗೆ ಬಂದೆವು. 2020 ಮತ್ತು ನಾವು ಸೀಮಾನ್ ವಿರುದ್ಧ ದೂರು ನೀಡಿದ್ದೇವೆ. ಆ ಬಗ್ಗೆ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ನಮಗೆ ಏನೂ ಬೇಡ. ನಾವು ಶಾಂತಿಯಿಂದ ಬದುಕಲು ಬಯಸುತ್ತೇವೆ. ” ಎಂದಿದ್ದಾರೆ.

2020ರಲ್ಲಿ ನಟಿ ವಿಜಯಲಕ್ಷ್ಮಿ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣದಲ್ಲಿ ಪನನ್‌ಗಟ್ಟು ಪದೈ ಕಟ್ಚಿ ಪಕ್ಷದ ಸ್ಥಾಪಕ ಹರಿ ನಾಡಾರ್‌ ಎಂಬಾತನನ್ನು ಚೆನ್ನೈ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ನಟಿಗೆ ಲೈಂಗಿಕ ಕಿರುಕುಳ ಹಾಗೂ ಜೀವ ಬೆದರಿಕೆ ಹಾಕಿದ ಆರೋಪದಡಿ ಆತನನ್ನು ಬಂಧಿಸಲಾಗಿದೆ. 2020ರಲ್ಲಿ ನಟಿ ವಿಜಯಲಕ್ಷ್ಮಿ ಆತ್ಮಹತ್ಯೆಗೆ ಯತ್ನಿಸಿದ್ದು, ಇದಕ್ಕೆ ಲೈಂಗಿಕ ಕಿರುಕುಳವೇ ಕಾರಣ ಎನ್ನಲಾಗಿತ್ತು. 2020ರ ಜುಲೈನಲ್ಲಿ ನಾಮ್‌ ತಮಿಳರ್‌ ಕಚ್ಚಿ (ಎನ್‌ಟಿಕೆ) ಪಕ್ಷದ ನಾಯಕ ಸೀಮನ್‌ ಕುಮ್ಮಕ್ಕಿನ ಮೇಲೆ ನಾಡಾರ್‌ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದರು.

2020 ರಲ್ಲಿ ನಟಿ ವಿಜಯಲಕ್ಷ್ಮಿ ಆತ್ಮಹತ್ಯೆ ಯತ್ನ ಪ್ರಕರಣ ತನಿಖೆ ನಡೆಸುತ್ತಿದ್ದ ತಿರುವನ್‌ಮಿಯೂರ್‌ ಪೊಲೀಸರಿಗೆ ನಟಿ, ಈ ಹಿಂದೆ ತನ್ನೊಂದಿಗೆ ಸಂಬಂಧ ಹೊಂದಿದ್ದ ಎನ್‌ಟಿಕೆ ಮುಖಂಡ ಸೀಮನ್‌ ತನಗೆ ಕಿರುಕುಳ ನೀಡಲು ಹರಿ ನದರ್‌ನನ್ನು ಕಳಿಸಿದ್ದಾನೆ ಎಂದು ಪೊಲೀಸರಿಗೆ ತಿಳಿಸಿದ್ದರು.