ನ್ಯೂಸ್

ನಾವು ಮಾಡುವ ಪ್ಲ್ಯಾನ್​ ಒಂದಾದರೆ.. ದೇವರ ಆಟವೇ ಬೇರೆ; ಈ ವರ್ಷ ಕಲಿತ ಪಾಠದ ಕುರಿತು ವಿಜಯಲಕ್ಷ್ಮಿ ದರ್ಶನ್​ ಪೋಸ್ಟ್​​​ | Vijayalakshmi Darshan

ನಾವು 2024ರ ವರ್ಷಾಂತ್ಯಕ್ಕೆ ಕಾಲಿಡಿತ್ತಿದ್ದೇವೆ. ಈ ವರ್ಷ ಹಲವರಿಗೆ ಹಲವು ಪಾಠಗಳನ್ನು ಕಲಿಸಿದ್ದರೆ , ಕೆಲವರಿಗೆ ಒಳ್ಳೆಯದಾಗಿದ್ದರೆ ಮತ್ತೆ ಕೆಲವರಿಗೆ ಸಾಧಾರಣವಾಗಿತ್ತು ಎಂದೇಳಬಹುದು. ಆದರೆ ಸ್ಯಾಂಡಲ್​ವುಡ್​ನ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಮತ್ತು ಅವರ ಸುತ್ತಮುತ್ತಲಿನವರಿಗೆ 2024 ಭಯಂಕರವಾಗಿತ್ತು ಎಂದರೆ ತಪ್ಪಾಗಲಾರದು. ಅದರಲ್ಲೂ ವಿಜಯಲಕ್ಷ್ಮಿ ದರ್ಶನ್(Vijayalakshmi Darshan) ಅವರಂತೂ ನರಕ ಯಾತನೆಯನ್ನೇ ಅನುಭವಿಸಿದ್ದಾರೆ.

ಸದಾ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್​ ಆಗಿರುವ ವಿಜಯಲಕ್ಷ್ಮಿ ದರ್ಶನ್​​ 2024ರಲ್ಲಿ ಕಲಿತ ಪಾಠವೇನು ಎಂಬುದನ್ನು ಹಂಚಿಕೊಂಡಿದ್ದಾರೆ. ಪೋಸ್ಟ್​ನಲ್ಲಿ ಕೆಲವು ಸಾಲುಗಳನ್ನು ಹೊಂದಿರುವ ಚಿತ್ರಗಳನ್ನು ಹಂಚಿಕೊಂಡಿದ್ದು, ಅವುಗಳ ಮೂಲಕ ತಾವು ಈ ವರ್ಷ ಕಲಿತ ಪಾಠಗಳು ಎಂಥಹವು ಎಂದು ಹೇಳುವ ಪ್ರಯತ್ನ ಮಾಡಿದ್ದಾರೆ. ನೋವು ಜನರನ್ನು ಬದಲಾಯಿಸುತ್ತದೆ ಎಂದು ಹೇಳಿದ್ದಾರೆ.

ಇದರ ಜತೆಗೆ ಹೃದಯ ಹಂತ ಹಂತವಾಗಿ ಕಠಿಣವಾದ ವಜ್ರವಾಗುವ ಚಿತ್ರವೂ ಇದೆ. ನೋವು ಮೃದು ಹೃದಯವನ್ನು ವಜ್ರದಂತೆ ಕಠಿಣವಾಗಿ ಮಾಡಿದೆ ಎಂಬರ್ಥವನ್ನು ನೀಡುತ್ತದೆ. ಬದಲಾವಣೆ ಭಯಾನಕವಾಗಿರತ್ತೆ, ಆದರೆ ಬದಲಾವಣೆಯೇ ಮುಂದೆ ಬೆಳವಣಿಗೆಗೆ ದಾರಿ, ಜತೆಗೆ ನೋವು ಜನರನ್ನು ಬದಲಾಯಿಸುತ್ತದೆ. ನಾವು ಒಂದು ಪ್ಲ್ಯಾನ್ ಮಾಡಿದರೆ, ದೇವರ ಪ್ಲ್ಯಾನ್ ಬೇರೆದಾಗಿರುತ್ತದೆ. ಜೀವನವು ನೆನಪುಗಳ ಸಂಗ್ರಹವಲ್ಲದೆ ಬೇರೇನೂ ಅಲ್ಲ. ಕನ್ನಡಿ ನನ್ನ ಉತ್ತಮ ಸ್ನೇಹಿತ ಏಕೆಂದರೆ ನಾನು ಅತ್ತಾಗ ಅದು ನನ್ನ ನೋಡಿ ಎಂದಿಗೂ ನಗುವುದಿಲ್ಲ ಎಂದು ವಿಜಯಲಕ್ಷ್ಮಿ ತಾವು ಹಂಚಿಕೊಂಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.

ದರ್ಶನ್​ ತೂಗುದೀಪ ಅವರಿಗೆ ಜಾಮೀನು ಮಂಜೂರಾದ ಬಳಿಕ ವಿಜಯಲಕ್ಷ್ಮಿ ದರ್ಶನ್​ ಹರಕೆ ತೀರಿಸುವುದರಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಮೈಸೂರಿಗೆ ತೆರಳಿ ನಾಡದೇವಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ತಮ್ಮ ಹರಕೆಯನ್ನು ತೀರಿಸಿ ಬಂದಿದ್ದಾರೆ.