ಸಿನಿಮಾದಿಂದಲೇ ಉತ್ತಮ ಜನಪ್ರಿಯತೆ ಗಳಿಸಿದ ನಾಯಕಿಯರಲ್ಲಿ ಕರಾವಳಿ ಸುಂದರಿ ಕೃತಿ ಶೆಟ್ಟಿ ಕೂಡ ಒಬ್ಬರು. ಇವರ ಜತೆ ರೊಮ್ಯಾನ್ಸ್ ಮಾಡುವುದಿಲ್ಲ ಎಂದು ಕಾಲಿವುಡ್ ಸ್ಟಾರ್ ಹೀರೋ ವಿಜಯ್ ಸೇತುಪತಿ ಹೇಳಿಕೆ ನೀಡಿರೋದು ಭಾರೀ ಚರ್ಚೆಗೆ ಕಾರಣವಾಗಿದೆ.
ಉಪ್ಪೇನಾ ಚಿತ್ರದ ಮೂಲಕ ಕೃತಿ ಶೆಟ್ಟಿ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿರು. ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಕೂಡಾ ಆಯಿತು. ಭಿನಯ ಮತ್ತು ಸೌಂದರ್ಯದ ಮೂಲಕ ತೆಲುಗು ಸೇರಿದಂತೆ ಸೌಥ್ ಸಿನಿ ಪ್ರೇಕ್ಷಕರ ಮನ ಗೆದ್ದಿರುವಂತಹ ನಟಿ ಕೃತಿ ಶೆಟ್ಟಿ.
ಉಪ್ಪೇನ ಚಿತ್ರದಲ್ಲಿ ನಾನು ಕೃತಿ ತಂದೆಯಾಗಿ ನಟಿಸಿದ್ದೇನೆ. ಈ ಚಿತ್ರ ಸೂಪರ್ ಹಿಟ್ ಆಗಿತ್ತು. ನಂತರ ನಾನು ತಮಿಳಿನ ಚಿತ್ರಕ್ಕೆ ಸಹಿ ಹಾಕಿದೆ. ಅದರಲ್ಲಿ ನನಗೆ ಜೋಡಿಯಾಗಿ ಕೃತಿ ಶೆಟ್ಟಿ ಇದ್ದರೆ ಒಳ್ಳೆಯದು ಎಂದು ನಿರ್ಮಾಪಕರು ಭಾವಿಸಿದರು. ಈ ವಿಚಾರ ತಿಳಿದ ತಕ್ಷಣ ಸಿನಿಮಾ ಯೂನಿಟ್‌ಗೆ ಫೋನ್ ಮಾಡಿ ಬೇಡ ಅಂದೆ. ನಾನು ತಂದೆಯಾಗಿ ನಟಿಸಿದ ನಟಿ ಜತೆ ರೊಮ್ಯಾನ್ಸ್ ಮಾಡಲು ಇಷ್ಟವಿಲ್ಲ ಎಂದು ವಿಜಯ್ ಹೇಳಿದ್ದಾರೆ.
ಕೃತಿ ಶೆಟ್ಟಿ ಬಾಲಿವುಡ್ ಮತ್ತು ಟಾಲಿವುಡ್‌ನಲ್ಲಿ ಸರಣಿ ಚಿತ್ರಗಳಲ್ಲಿ ನಿರತರಾಗಿದ್ದಾರೆ. ಜವಾನ್ ಚಿತ್ರದಲ್ಲಿ ವಿಜಯ್ ವಿಲನ್ ಪಾತ್ರದ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದು, ಮಹಾರಾಜ, ಮೇರಿ ಕ್ರಿಸ್‌ಮಸ್, ಗಾಂಧಿ ಟಾಕ್ಸ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಕೃತಿ ಶೆಟ್ಟಿ ಜೊತೆ ರೊಮ್ಯಾನ್ಸ್ ಮಾಡಲು ನಿರಾಕರಿಸಿದ್ದರು. ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಈ ಕುರಿತು ವಿಜಯ್ ಸ್ಪಷ್ಟತೆ ನೀಡಿದರು.