ನ್ಯೂಸ್

ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಜಯ್‌ ಮಲ್ಯ ಪುತ್ರ ಸಿದ್ಧಾರ್ಥ್‌

 ಮುಂಬೈ: ವಿಜಯ್‌ ಮಲ್ಯ ಅವರ ಪುತ್ರ ಸಿದ್ಧಾರ್ಥ್‌ ಮಲ್ಯ ತಮ್ಮ ಬಹುಕಾಲದ ಗೆಳತಿ ಜಾಸ್ಮಿನ್ ಜತೆಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಕೆಲವು ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಈ ಹಿಂದಷ್ಟೇ ಸಿದ್ಧಾರ್ಥ್‌ ಮಲ್ಯ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಜಾಸ್ಮಿನ್ ಜತೆಗಿರುವ ಫೋಟೊ ಪೋಸ್ಟ್‌ ಮಾಡಿ ಶೀಘ್ರದಲ್ಲೇ ವಿವಾಹವಾಗುವುದಾಗಿ ಘೋಷಿಸಿದ್ದರು. ಇದೀಗ ಈ ಜೋಡಿ ಲಂಡನ್‌ನಲ್ಲಿ ಆಪ್ತರ ಸಮ್ಮುಖದಲ್ಲಿ ಹಸೆಮಣೆ ಏರಿದೆ.

ಫೋಟೋದಲ್ಲಿ, ಜಾಸ್ಮಿನ್ ಬಿಳಿ ಗೌನ್ ಧರಿಸಿದ್ದು, ಸಿದ್ಧಾರ್ಥ್  ಸೂಟ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ದಂಪತಿ ಹೊರಾಂಗಣ ವಿವಾಹವನ್ನು ಹೊಂದಿದ್ದರು. ಜಾಸ್ಮಿನ್ ತಮ್ಮ ಮದುವೆಯ ಉಂಗುರವನ್ನು ಅಭಿಮಾನಿಗಳಿಗೆ ಹತ್ತಿರದಿಂದ ನೋಡಿದರು. "ಶಾಶ್ವತವಾಗಿ" ಎಂಬ ಶೀರ್ಷಿಕೆಯೊಂದಿಗೆ ಅವರು ತಮ್ಮ ಕೈಗಳ ಚಿತ್ರವನ್ನು  ಸೋಶಿಯಲ್​ ಮೀಡಿದಯಾಲ್ಲಿ ಹಂಚಿಕೊಂಡಿದ್ದಾರೆ.

ಕ್ಯಾಲಿಫೋರ್ನಿಯಾದಲ್ಲಿನ ಹ್ಯಾಲೋವಿನ್ ಪಾರ್ಟಿಯಲ್ಲಿ ಸಿದ್ದಾರ್ಥ್ ಹಾಗೂ ಜಾಸ್ಮಿನ್ ಇಬ್ಬರು ಜತೆಯಾಗಿ ಪಾಲ್ಗೊಂಡಿದ್ದರು. ಈ ವೇಳೆ ಸಿದ್ದಾರ್ಥ್ ತಮ್ಮ ಪ್ರೀತಿಯನ್ನು ಹೇಳಿಕೊಂಡಿದ್ದರು. ಇದಕ್ಕೆ ಜಾಸ್ಮಿನ್ ಗ್ರೀನ್ ಸಿಗ್ನಲ್ ನೀಡಿದ್ದರು. ಬಳಿಕ ಈ ಜೋಡಿ ಕಳೆದ ವರ್ಷವೇ ನಿಶ್ಚಿತಾರ್ಥ ಮಾಡಿಕೊಂಡಿತ್ತು.

ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ ಜನಿಸಿದ ಸಿದ್ಧಾರ್ಥ್‌ ಮಲ್ಯ ಲಂಡನ್‌ನಲ್ಲಿ ಶಿಕ್ಷಣ ಪೂರೈಸಿದರು. ಪದವಿ ಪಡೆದ ನಂತರ ಅವರು ಮಾಡೆಲ್‌ ಮತ್ತು ನಟನಾಗಿ ವೃತ್ತಿ ಜೀವನ ಆರಂಭಿಸಿದರು. ಬ್ರಾಹ್ಮಣ ನಮನ್ , ಬೆಸ್ಟ್‌ ಫೇಕ್‌ ಫ್ರೆಂಡ್ಸ್‌ ಮುಂತಾದ ಚಿತ್ರಗಳಲ್ಲಿ ನಟಿಸಿದರು. ಬಳಿಕ ಅಭಿನಯದಿಂದ ದೂರ ಸರಿದಿದ್ದರು.