Vijay Jana Nayagan to release on July 23  
ನ್ಯೂಸ್

Jana Nayagan​ ರಿಲೀಸ್ ಡೇಟ್​ ರಿವೀಲ್​; ತಮಿಳುನಾಡು ಸಿಎಂ​​ ವಿಜಯ್​ ಕೊನೇ​ ಸಿನಿಮಾ ತೆರೆ ಕಾಣೋದೆಂದು?..Vijays Jana Nayagan

ಪ್ರಮುಖ ಮುಖ್ಯಾಂಶಗಳು

  • ಕೊನೆಗೂ ಜನನಾಯಗನ್​ ಸಿನಿಮಾ ರಿಲೀಸ್​ಗೆ ಮುಹೂರ್ತ ಫಿಕ್ಸ್​
  • ಜುಲೈ 23ರಂದು ಸೌತ್​ ಇಂಡಿಯಾದಲ್ಲಿ ಜನನಾಯಗನ್​ ಸಿನಿಮಾ ರಿಲೀಸ್​​
  • ಯುದ್ಧ ಎಷ್ಟು ಕಠಿಣವೋ ಅದರ ವಿಜಯೋತ್ಸವ ಅಷ್ಟೇ ಗರ್ಜನೆಯುಕ್ತವಾಗಿರುತ್ತದೆ ಎಂದು ಪೋಸ್ಟ್​ ಹಂಚಿಕೊಂಡ ಕೆವಿಎನ್
ಜನವರಿರಂದೇ ತೆರೆ ಕಾಣಬೇಕಿದ್ದ ಜನನಾಯಗನ್​ ಸಿನಿಮಾ ಸಾಕಷ್ಟು ಅಡೆತಡೆ ಎದುರಿಸಿತ್ತು. ಸುದೀರ್ಘ ಕಾನೂನು ಹೋರಾಟ ಮತ್ತು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಜೊತೆಗಿನ ತಿಕ್ಕಾಟ ನಡೆಸಿದ 7 ತಿಂಗಳ ನಂತರ ಕೊನೆಗೂ ಯಶಸ್ವಿಯಾಗಿ  ಜುಲೈ 23ರಂದು ಅಬ್ಬರಿಸಲು ರೆಡಿಯಾಗಿದೆ. 

ಕೆವಿಎನ್​ ಹೇಳಿದ್ದೇನು

'ಅಗ್ನಿ ಪರೀಕ್ಷೆಗೆ ಒಳಪಟ್ಟಿದೆ ಕಾಲದಿಂದ ಕೆತ್ತಲ್ಪಟ್ಟಿದೆ, ಇತಿಹಾಸಕ್ಕಾಗಿ ನಿರ್ಮಾಣದದ್ದು, ಯುದ್ಧದ ರಣರಂಗ ಎಷ್ಟು ಕಠಿಣವೋ, ವಿಜಯೋತ್ಸವ ಅಷ್ಟೇ ಗರ್ಜನೆಯಿಂದ ಕೂಡಿರುತ್ತದೆ' ಎನ್ನುವ ಶೀರ್ಷಿಕೆಯಡಿ ಸಿನಿಮಾದ ಪೋಸ್ಟರ್​ ಜೊತೆಗೆ ಮಾಹಿತಿಯನ್ನು ಹಂಚಿಕೊಂಡಿದೆ. ತಮಿಳುನಾಡಿನಲ್ಲಿ ಮೊದಲ ಪ್ರದರ್ಶನ ಬೆಳಿಗ್ಗೆ 9 ಗಂಟೆಗೆ ಇರಲಿದ್ದು,  ಕರ್ನಾಟಕ, ಕೇರಳ, ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಬೆಳಿಗ್ಗೆ 5ರಿಂದಲೇ ಶೋಗಳು ತೆರೆ ಕಾಣಲಿದೆ. 

ಹಲವು ತೊಡಕು

ಈ ವರ್ಷದ ಮೊದಲ ತಿಂಗಳಲ್ಲೇ ಎಚ್. ವಿನೋತ್ ನಿರ್ದೇಶನದ ಜನನಾಯಗನ್​ ಸಿನಿಮಾ ರಿಲೀಸ್​ ಆಗಬೇಕಿತ್ತು. ಕೋರ್ಟ್​​ ಓಡಾಟ, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಜೊತೆಗಿನ ಹಗ್ಗಜಗ್ಗಾಟದಿಂದಾಗಿ  ಏಳು ತಿಂಗಳಿನಿಂದ ಸಿನಿಮಾ ರಿಲೀಸ್​ಗಾಗಿ ಸಿನಿಮಾ ತಂಡ ಒದ್ದಾಟ ನಡೆಸಿತ್ತು.

ಪೈರಸಿ ಕಾಟ

ಈ ಮಧ್ಯೆ   ತಮಿಳುನಾಡಿನ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳಿವೆ ಎನ್ನುವಾಗಲೇ ಸಿನಿಮಾದ HD ಪ್ರಿಂಟ್​​​​​​​ ಪೈರಸಿಯಾಗಿತ್ತು. ಸಿನಿಮಾವನ್ನು 1 ಕೋಟಿಗೂ ಹೆಚ್ಚು ಜನರು ವೀಕ್ಷಿಸಿದ್ದರು ಎನ್ನುವ ಮಾಹಿತಿಯನ್ನು ಪೊಲೀಸರು ನೀಡಿದ್ದರು. ಆ ನಂತರ ಸಿನಿಮಾ ತಂಡ ಸೈಬರ್​ ಪೊಲೀಸರಿಗೆ ದೂರು ನೀಡಿತ್ತು, ಅದರ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು 19 ಜನರನ್ನು ಬಂಧಿಸಿದ್ದಾರೆ.  ಮುನ್ನೂರಕ್ಕೂ ಹೆಚ್ಚು ಲಿಂಕ್​ಗಳನ್ನು ಬ್ಲಾಕ್​ ಮಾಡಿದ್ದಾರೆ.

ಯಾರೆಲ್ಲ ಸಿನಿಮಾದಲ್ಲಿ ಇದ್ದಾರೆ?

ವಿನೋತ್​ ನಿರ್ದೇಶನದ, ಕೆವಿಎನ್​ ಪ್ರೊಡಕ್ಷನ್ಸ್​ ನಿರ್ಮಾಣದ ಜನನಾಯಗನ್​ ಸಿನಿಮಾದಲ್ಲಿ ತಮಿಳುನಾಡಿನ ಸಿಎಂ ವಿಜಯ್​ ಅವರು  ನಟಿಸಿದ್ದು,  ನಟಿ ಪೂಜಾ ಹೆಗ್ಡೆ ನಾಯಕಿಯಾಗಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮಮಿತಾ ಬೈಜಿ,  ಪ್ರಕಾಶ್​ ರಾಜ್​, ಗೌತಮ್​ ವಾಸುದೇವ್​ ಮೆನನ್​​ , ಬಾಬಿ ಡಿಯೋಲ್​ ಸೇರಿದಂತೆ  ಘಟಾನುಘಟಿ ಸಿನಿ ತಾರೆಯರು ಈ ಸಿನಿಮಾಕ್ಕಾಗಿ  ಬಣ್ಣ ಹಚ್ಚಿದ್ದಾರೆ, (ಏಜೆನ್ಸೀಸ್).