ನ್ಯೂಸ್

ವಿಜಯ್ ದೇವರಕೊಂಡ ಅಭಿನಯದ 'ಕಿಂಗ್​​​ಡಮ್​​' ಸಿನಿಮಾಗೆ ಹಿಂದಿ ಚಿತ್ರಮಂದಿರಗಳಲ್ಲಿಲ್ಲ ಬಿಡುಗಡೆ ಭಾಗ್ಯ| vijay-deverakonda

vijay-deverakonda; ನಟ ವಿಜಯ್ ದೇವರಕೊಂಡ ಅವರ ಮುಂದಿನ ಆಕ್ಷನ್ ಸಿನಿಮಾ 'ಕಿಂಗ್​ಡಮ್'​ ಚಿತ್ರ ಬಿಡುಗಡೆ ದಿನಾಂಕ ಹೊರಬಿದ್ದಿದೆ. ಈ ಚಿತ್ರವನ್ನು ಗೌತಮ್ ತಿನ್ನನುರಿ ನಿರ್ದೇಶನ ಮಾಡಿದ್ದು, ಅಭಿಮಾನಿಗಳು ಬಹಳ ಸಮಯದಿಂದ ಕಾದು ಕುಳಿತಿದ್ದರು.

ಇದೀಗ ವಿಜಯ್ ದೇವರಕೊಂಡ ಮಾಸ್​ ಅವತಾರದಲ್ಲಿ ಕಾಣಿಸಿಕೊಂಡಿರುವ ಚಿತ್ರದ ಹೊಸ ಪ್ರೋಮೋದ ಜೊತೆಗೆ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ. ಭಾಗ್ಯಶ್ರೀ ಬೋರ್ಸೆ ಮತ್ತು ವಿಜಯ್ ದೇವರಕೊಂಡ ಅವರ ಈ ಸಿನಿಮಾ ಇದೇ ಜುಲೈ 31 ರಂದು ತೆಲುಗು ಹಾಗೂ ತಮಿಳಿನಲ್ಲಿ ಬಿಡುಗಡೆಯಾಗುತ್ತಿದ್ದು, ಸಿನಿಮಾ ತಯಾರಕರು ಹಿಂದಿ ಆವೃತ್ತಿಯ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸಿಲ್ಲ.

ಹಿಂದಿ ಟೀಸರ್ ಅನ್ನು ಸುಮಾರು ನಾಲ್ಕು ತಿಂಗಳ ಹಿಂದೆಯೇ ಬಿಡುಗಡೆ ಮಾಡಲಾಗಿದ್ದರೂ, ಥಿಯೇಟರ್​ನಲ್ಲಿ​ ಬಿಡುಗಡೆ ದಿನಾಂಕದ ಕುರಿತು ಯಾವುದೇ ಅಪ್‌ಡೇಟ್ ಬಂದಿಲ್ಲ. ಹಿಂದಿ ಆವೃತ್ತಿಯ ಥಿಯೇಟ್ರಿಕಲ್ ಬಿಡುಗಡೆಯಿಂದ ತಂಡವು ಹೊರಗುಳಿದಿದೆ, ಬದಲಿಗೆ ಸಿನಿಮಾವನ್ನು ನೇರವಾಗಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಮಾಡಬಹುದು ಎಂದು ಹೇಳಲಾಗುತ್ತಿದೆ.

ವರದಿಗಳ ಪ್ರಕಾರ ನೆಟ್‌ಫ್ಲಿಕ್ಸ್ ಈ ಹಿಂದೆ ಈ ಚಿತ್ರದೊಂದಿಗೆ ಪ್ರತ್ಯೇಕ ಒಪ್ಪಂದಕ್ಕೆ ಸಹಿ ಹಾಕಿತ್ತು. ಆದರೆ ಚಿತ್ರದ ಬಿಡುಗಡೆ ಪದೇ ಪದೇ ವಿಳಂಬವಾಗಲು ಪ್ರಾರಂಭಿಸಿದಾಗ, ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಚಿತ್ರವನ್ನು ಆದಷ್ಟು ಬೇಗ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವಂತೆ ತಂಡವನ್ನು ಕೇಳಿಕೊಂಡಿತು.

(ಏಜೆನ್ಸೀಸ್)

ಹಿಂದಿ ಆವೃತ್ತಿಗೆ ದೊಡ್ಡ ಮಲ್ಟಿಪ್ಲೆಕ್ಸ್ ಬೆಂಬಲದ ಕೊರತೆಯಿಂದಾಗಿ ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆಗೆ ಪ್ರಯೋಜನಕಾರಿಯಲ್ಲ. ಪ್ರಮುಖ ಮಲ್ಟಿಪ್ಲೆಕ್ಸ್ ಬೆಂಬಲವಿಲ್ಲದೆ ಹಿಂದಿ ಆವೃತ್ತಿಯನ್ನು ಬಿಡುಗಡೆ ಮಾಡುವುದು ಲಾಭದಾಯಕವಲ್ಲ. ಈ ಸವಾಲುಗಳನ್ನು ತಪ್ಪಿಸಲು, ಹಿಂದಿ ಆವೃತ್ತಿಗೆ ಥಿಯೇಟರ್​ನಲ್ಲಿ ಸಿನಿಮಾ ಬಿಡುಗಡೆಯನ್ನು ಬಿಟ್ಟು ನೇರವಾಗಿ OTT ಬಿಡುಗಡೆಯನ್ನು ಆಯ್ಕೆ ಮಾಡಲು ತಂಡವು ನಿರ್ಧರಿಸಿದೆ ಎಂದು ಹೇಳಲಾಗುತ್ತದೆ.