ನ್ಯೂಸ್

‘ಪುಷ್ಪ’ ಚಿತ್ರದ ನಿರ್ದೇಶಕರ ಜತೆಗೆ ವಿಜಯ್​ ದೇವರಕೊಂಡ ಹೊಸ ಸಿನಿಮಾ

manjunathktgns

ಹೈದರಾಬಾದ್​: ವಿಜಯ್​ ದೇವರಕೊಂಡ ಸದ್ಯ ಟಾಲಿವುಡ್​ನ ಟಾಪ್​ ನಾಯಕರ ಸಾಲಿನಲ್ಲಿದ್ದಾರೆ. ಬಿಗ್​ಬಜೆಟ್​ ಸಿನಿಮಾಗಳಲ್ಲಿಯೂ ವಿಜಯ್​ ತೊಡಗಿಸಿಕೊಳ್ಳುತ್ತಿದ್ದಾರೆ. ಇದೀಗ ಅವರ ಸಿನಿಮಾ ಬತ್ತಳಿಕೆಗೆ ಮತ್ತೊಂದು ಬಿಗ್​ ಸಿನಿಮಾ ಸೇರ್ಪಡೆಗೊಂಡಿದೆ.

ಟಾಲಿವುಡ್​ನ ಖ್ಯಾತ ನಿರ್ದೇಶಕ ಸುಕುಮಾರ್​ ನಿರ್ದೇಶನದಲ್ಲಿ ಹೊಸ ಸಿನಿಮಾವೊಂದರಲ್ಲಿ ವಿಜಯ್​ ನಾಯಕನಾಗಿ ನಟಿಸುವುದು ಅಧಿಕೃತವಾಗಿದ್ದು, ಸ್ವತಃ ನಟ ಮತ್ತು ನಿರ್ದೇಶಕ ಇಬ್ಬರೂ ಸೋಷಿಯಲ್​ ಮೀಡಿಯಾದಲ್ಲಿ ಈ ಸುದ್ದಿಯನ್ನು ಬಹಿರಂಗಗೊಳಿಸಿದ್ದಾರೆ.

ಸದ್ಯ ಈ ಕಾಂಬಿನೇಷನ್​ ಒಂದಾಗಿದ್ದು ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದ್ದು, ಕೇದಾರ ಸೆಲಗಂಸೆಟ್ಟಿ ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ. ಹಾಗಾದರೆ ಯಾವಾಗ ಈ ಸಿನಿಮಾ ಸೆಟ್ಟೇರಲಿದೆ? ಸದ್ಯ ಅಲ್ಲು ಅರ್ಜುನ್ ಅವರೊಂದಿಗೆ ಪುಷ್ಪ ಚಿತ್ರದಲ್ಲಿ ಸುಕುಮಾರ್​ ಬಿಜಿಯಾಗಿದ್ದಾರೆ. ಆ ಸಿನಿಮಾ ಮುಗಿದ ಬಳಿಕವಷ್ಟೇ ಅಂದರೆ 2022ರಲ್ಲಿ ಈ ಚಿತ್ರ ಸೆಟ್ಟೇರಲಿದೆ. (ಏಜೆನ್ಸೀಸ್​)