ನ್ಯೂಸ್

VIDEO | ಸ್ಟಾರ್ ನಟನ ಮೇಲೆ ಚಪ್ಪಲಿ ಎಸೆದ ದುಷ್ಕರ್ಮಿಗಳು! ತೀವ್ರ ಆಕ್ರೋಶ ವ್ಯಕ್ತಪಡಿಸಿದ ಫ್ಯಾನ್ಸ್​..

ನವದೆಹಲಿ: ಸ್ಟಾರ್ ಹೀರೋ, ಡಿಎಂಡಿಕೆ ಪಕ್ಷದ ನಾಯಕ ವಿಜಯಕಾಂತ್ ನಿನ್ನೆ ಬೆಳಗ್ಗೆ ವಿಧಿವಶರಾದ ವಿಚಾರ ಗೊತ್ತೇ ಇದೆ. ವಿಜಯಕಾಂತ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು  ನಿನ್ನೆ ರಾತ್ರಿ ಹಲವು ಚಿತ್ರರಂಗ ಮತ್ತು ರಾಜಕೀಯ ಗಣ್ಯರು, ಅಭಿಮಾನಿಗಳು  ಆಗಮಿಸಿದ್ದರು. ಈ ವೇಳೆ ಸ್ಟಾರ್​ ನಟರೊಬ್ಬರ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಲು ಯತ್ನಿಸಿರುವ ವಿಡಿಯೋ ವೈರಲ್​​ ಆಗಿದೆ.

ತಮಿಳು ಸ್ಟಾರ್ ವಿಜಯ್ ಕೂಡ ವಿಜಯಕಾಂತ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ಆಗಮಿಸಿದ್ದರು. ವಿಜಯಕಾಂತ್ ಅವರ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿದ ವಿಜಯ್ ಅವರನ್ನು ನೋಡಿ ಭಾವುಕರಾದರು.

ಶ್ರದ್ಧಾಂಜಲಿ ಅರ್ಪಿಸಿ ಬಳಿಕ ವಿಜಯ್ ತನ್ನ ಕಾರಿಗೆ ಹಿಂತಿರುಗುತ್ತಿದ್ದಾಗ ಗುಂಪಿನಿಂದ ಯಾರೋ ಅವರ ಮೇಲೆ ಶೂ ಎಸೆದಿದ್ದಾರೆ. ವಿಜಯ್ ರಕ್ಷಣೆಗೆ ಬಂದ ಪೊಲೀಸರು ಹಾಗೂ ಬೌನ್ಸರ್‌ಗಳು ಕೂಡ ಚಪ್ಪಲಿಯನ್ನು ಗಮನಿಸದ ಕಾರಣ ಆತನನ್ನು ತಡೆಯಲು ಸಾಧ್ಯವಾಗಲಿಲ್ಲ. ಇದರೊಂದಿಗೆ ವಿಜಯ್ ಅವರ ಮೇಲೆ ಚಪ್ಪಲಿ ಬಿದ್ದಿರುವ ವಿಡಿಯೋ ವೈರಲ್ ಆಗಿದೆ. ವಿಜಯ್ ಅಭಿಮಾನಿಗಳು ಸೇರಿದಂತೆ ಎಲ್ಲರೂ ಈ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತಿದ್ದಾರೆ.

ವಿಜಯ್ ಅವರ ಮೇಲೆ ಚಪ್ಪಲಿ ಎಸೆದವರನ್ನು ಹಿಡಿದು ಶಿಕ್ಷಿಸಬೇಕು ಮತ್ತು ಇಂತಹ ವಿಷಯಗಳನ್ನು ಸುಲಭವಾಗಿ ಬಿಡಬಾರದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್‌ಗಳು ನಡೆಯುತ್ತಿವೆ. ಆದರೆ ಈ ಘಟನೆಯಿಂದ ವಿಜಯ್ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.