ಮುಂಬೈ: ಕಳೆದ ರಾತ್ರಿ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭೂಲ್ ಭುಲೈಯಾ 3 ಚಿತ್ರದ ಐಕಾನಿಕ್ ಸಾಂಗ್ (Ami Je Tomar 3.0) ಹಾಡಿಗೆ ವಿದ್ಯಾ ಬಾಲನ್ (Vidya Balan) ಮತ್ತು ಮಾಧುರಿ ದಿಕ್ಷಿತ್ (Madhuri Dixit) ಗ್ರೇಸ್ಪುಲ್ ಆಗಿ ಹೆಜ್ಜೆ ಹಾಕಿದ್ದಾರೆ.ಈ ಹಾಡಿಗೆ ಜೋಡಿಯಾಗಿ ಹೆಜ್ಜೆ ಹಾಕಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದ್ದು, ನೆಟ್ಟಿಗರ ಮನ ಗೆದ್ದಿದೆ.
ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭೂಲ್ ಭುಲೈಯಾ 3 ಚಿತ್ರದ ಹಾಡಿಗೆ ನೃತ್ಯ ಮಾಡುತ್ತಿರುವ ಸಂದರ್ಭದಲ್ಲಿ ನಟಿ ವಿದ್ಯಾ ಬಾಲನ್ ಆಯ ತಪ್ಪಿಬಿದ್ದಿದ್ದು, ಅದರ ವಿಡಿಯೋ ವೈರಲ್ ಆಗಿದೆ. ವಿದ್ಯಾ ಬಾಲನ್ ಅವರು ಮಾಧುರಿ ದೀಕ್ಷಿತ್ ಜೊತೆ ಈ ಹಾಡಿಗೆ ನೃತ್ಯ ಮಾಡುತ್ತಿದ್ದರು. ಅದ್ಭುತ ನೃತ್ಯದ ಮೂಲಕ ಇಬ್ಬರೂ ತಾರೆಯರು ಪ್ರೇಕ್ಷಕರನ್ನು ರಂಜಿಸುತ್ತಿದ್ದರು. ಆದರೆ ಏಕಾಏಕಿ ವಿದ್ಯಾ ಅವರು ಆಯ ತಪ್ಪಿ ಬಿದ್ದುಬಿಟ್ಟರು. ಆದರೆ ಅದೇ ವೇಳೆ ಸಮಯ ಪ್ರಜ್ಞೆ ಮೆರೆದ ನಟಿ, ಕೂಡಲೇ ಕುಳಿತಲ್ಲಿನಿಂದಲೇ ನೃತ್ಯಕ್ಕೆ ಸ್ಟೆಪ್ ಹಾಕಿ, ಏನೂ ಆಗಿಲ್ಲ ಎನ್ನುವಂತೆ ಎದ್ದುನಿಂತು ನೃತ್ಯ ಮುಂದುವರೆಸಿ ಜನರ ಮನಸ್ಸನ್ನು ಗೆದ್ದುಬಿಟ್ಟರು. ಇವರು ಬಿದ್ದರೂ ಮಾಧುರಿ ದೀಕ್ಷಿತ್ ವಿಚಲಿತಗೊಳ್ಳದೇ ತಮ್ಮ ನೃತ್ಯವನ್ನು ಮುಂದುವರೆಸಿದ್ದರು.
ಮಾಧುರಿ ದೀಕ್ಷಿತ್ (Madhuri Dixit) ನೃತ್ಯ ನೆಟ್ಟುಗರ ಮನಗೆದ್ದಿದಂತು ಸುಳ್ಳಲ್ಲ. ಹಸಿರು ಮತ್ತು ಕಪ್ಪು ಬಣ್ಣದ ಬಟ್ಟೆಯಲ್ಲಿ ಸುಂದರವಾಗಿ ಕಾಣುತ್ತಿರುವ ಈ ನಟಿಯರ ಕೆಮಿಸ್ಟ್ರೀ ಯಾರಿಗೂ ಸರಿಸಾಟಿಯೇನಿಲ್ಲ.
ದಿವಾಸ್ ಅಭಿನಯದ ಹಲವಾರು ವಿಡಿಯೋಗಳು ವೈರಲ್ ಆಗಿದ್ದು, ಅವರು ಬೀಳುತ್ತಿರುವ ಒಂದು ವಿಡಿಯೋ ಮಾತ್ರ ಹೆಚ್ಚು ಸದ್ದು ಮಾಡುತ್ತಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅವರ ಅಭಿಮಾನಿಗಳು ಅದ್ಭುತ ಪ್ರದರ್ಶನ ನೀಡಿದ್ದಕ್ಕೆ ನಟಿಯರನ್ನು ಶ್ಲಾಘಿಸಿದರು. ಮುಜುಗರದ ಕ್ಷಣವನ್ನು ಸ್ಫೂರ್ತಿಯಾಗುವಂತೆ ಅಭಿನಯಿಸಿದ್ದೀರಾ. ನಿಜವಾಗಿಯೂ ನಿಮ್ಮ ಆತ್ಮಸ್ಥೈರ್ಯವನ್ನು ಮೆಚ್ಚಬೇಕು ಎಂದು ಹೊಗಳಿದರು.