ಮಂಗಳೂರು: ನಾಟ್ಯವಿದುಷಿ ವಾಣಿಶ್ರೀ ವಿ. ಇವರನ್ನು ಪ್ರಸಾರ ಭಾರತಿ ದೂರದರ್ಶನ ಕೇಂದ್ರ ಬೆಂಗಳೂರು ಇದರ ಆಯ್ಕೆ ಸಮಿತಿಯು ಬಿ ಗ್ರೇಡ್ ಕಲಾವಿದೆಯಾಗಿ ಆಯ್ಕೆ ಮಾಡಿದೆ.
ಇವರು ಮಂಗಳೂರಿನ ಸನಾತನ ನಾಟ್ಯಾಲಯದ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಹಾಗೂ ವಿದುಷಿ ಶ್ರೀಲತಾ ನಾಗರಾಜ್ ಇವರ ಶಿಷ್ಯೆ. ಈಕೆ ಅಳಪೆ ನಿವಾಸಿ, ಪ್ರಸ್ತುತ ಮಂಗಳೂರಿನ ಕೆನರಾ ಸಿಬಿಎಸ್‌ಇ ಸ್ಕೂಲ್ ಶಿಕ್ಷಕಿ ಮಮತಾ ಶಂಕರನಾರಾಯಣ ಭಟ್
ದಂಪತಿ ಪುತ್ರಿ.