ವಿಜಯಪುರ ಜಿಪಂ ಸಭಾಂಗಣದಲ್ಲಿ ವೆಚ್ಚ ವೀಕ್ಷಕ ಐಆರ್‌ಎಸ್ ಅಧಿಕಾರಿ ಅನುಪಕುಮಾರ ಸಭೆ ನಡೆಸಿದರು. ಡಿಸಿ ಟಿ. ಭೂಬಾಲನ್, ಸಿಇಒ ರಿಶಿ ಆನಂದ, ಎಸ್‌ಪಿ ಋಷಿಕೇಶ ಸೋನಾವಣೆ ಮತ್ತಿತರರಿದ್ದಾರೆ.  
ನ್ಯೂಸ್

ಮೀಟಿಂಗ್‌ಗಳನ್ನು ಮಾಡಲು ಸಿಗದ ಅನುಮತಿ; ವಿಧಾನಸೌಧದ ಕಡೆಗೆ ಬಾರದ ಸಚಿವರುಗಳು

ಬೆಂಗಳೂರು:
ಲೋಕಸಭಾ ಚುನಾವಣೆ ಮುಗಿದರೂ, ಸಚಿವರು ಮತ್ತು ಶಾಸಕರು ವಿಧಾನಸೌಧದ ಕಡೆಗೆ ಇನ್ನೂ ಮುಖ ಮಾಡಿಲ್ಲ.
ಅಧಿಕಾರಿಗಳ ಸಭೆ ನಡೆಸಲು ಚುನಾವಣಾ ಆಯೋಗದ ಅನುಮತಿ ಅಗತ್ಯವಿರುವ ಹಿನ್ನೆಲೆಯಲ್ಲಿ ಯಾವ ಸಚಿವರು ಮತ್ತು ಶಾಸಕರು ಶಕ್ತಿ ಸೌಧದ ಕಡೆಗೆ ಬರುತ್ತಿಲ್ಲ.
ಬರ ನಿರ್ವಹಣೆಯ ಬಗ್ಗೆ ಅಧಿಕಾರಿಗಳ ಸಭೆ ನಡೆಸಲು ಗ್ರಾಮೀಣಾಭಿವೃದ್ಧಿ ಸಚಿವರು ಚುನಾವಣಾ ಆಯೋಗಕ್ಕೆ ಪತ್ರವನ್ನು ಬರೆದಿದ್ದರೂ ಇನ್ನೂ ಅನುಮತಿ ಬಂದಿಲ್ಲ. ಪ್ರಮುಖ ಮತ್ತು ತುರ್ತು ವಿಷಯದಲ್ಲಿಯೇ ಅನುಮತಿ ನೀಡಿಲ್ಲವಾದ್ದರಿಂದ ಇನ್ನುಳಿದ ಸಚಿವರು ಈ ಬಗ್ಗೆ ಪತ್ರ ಬರೆಯುವ ಗೋಜಿಗೂ ಹೋಗಿಲ್ಲ.
ಇಲಾಖೆಗೆ ಸಂಬಂದಿಸಿದ ಕೆಲ ವಿಷಯಗಳ ಬಗ್ಗೆ ಕೆಲ ಸಚಿವರು ತಮ್ಮ ನಿವಾಸಗಳಿಗೆ ಅಧಿಕಾರಿಗಳನ್ನು ಕರೆಸಿಕೊಂಡು ಚರ್ಚೆ ನಡೆಸಿದ್ದಾರೆ. ಮೀಟಿಂಗ್‌ಗಳನ್ನು ಅಧಿಕೃತವಾಗಿ ಮಾಡಲು ಇನ್ನೂ ಅನುಮತಿ ಇಲ್ಲವಾದ ಕಾರಣ, ಸಚಿವರುಗಳು ಈ ನಿಟ್ಟಿನಲ್ಲಿ ಪ್ರಯತ್ನ ಮಾಡಿಲ್ಲ. ಬದಲಿಗೆ ಮೌಖಿಕವಾಗಿಯೇ ಅಧಿಖಾರಿಗಳಿಗೆ ಸೂಚನೆಗಳನ್ನು ನೀಡುವ ಮೂಲಕ ಕೆಲಸ ಮಾಡಿಸುತ್ತಿರುವುದು ವಿಶೇಷ.
ಚುನಾವಣೆ ಮುಗಿದಿರುವ ಕಾರಣ ರಾಜ್ಯದಲ್ಲಿ ಮಾತ್ರ ಮೀಟಿಂಗ್‌ಗಳನ್ನು ನಡೆಸಿ ಕಾರ್ಯ ನಿರ್ವಹಣೆ ಮಾಡಲು ಚುನಾವಣಾ ಆಯೋಗ ಅನುಮತಿ ನೀಡುವುದು ಒಳ್ಳೆಯದು ಎನ್ನುವುದು ಹಿರಿಯ ಸಚಿವರೊಬ್ಬರ ಅಭಿಮತ.