ನ್ಯೂಸ್

VIDEO: ನಟಿ ಸಂಯುಕ್ತಾ ಕೈಗೆ ಸುತ್ತಿಕೊಳ್ತು ಹಾವು..

ಬೆಂಗಳೂರು: ನಟಿ ಸಂಯುಕ್ತಾ ಕೈಗೆ ಹಾವೊಂದು ಸುತ್ತಿಕೊಂಡಿರುವ ವಿಡಿಯೋ ಅವರ ಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಆಗಿದೆ. ಕಪ್ಪು ಮತ್ತು ಗೋಲ್ಡನ್ ಚುಕ್ಕೆಗಳ ಮೈ ಬಣ್ಣ ಹೊಂದಿರುವ ಹಾವು ಯಾವ ಜಾತಿಯದ್ದು ಎಂಬುದು ಗೊತ್ತಿಲ್ಲ. 40 ಸೆಕೆಂಡ್​ಗಳ ವಿಡಿಯೋ ಇದಾಗಿದ್ದು, ಅಂಗೈಗೆ ಹಾವು ಸುತ್ತಿಕೊಳ್ಳುತ್ತಿರುವ ದೃಶ್ಯವಿದೆ. ಅದಕ್ಕೊಂದು ಶೀರ್ಷಿಕೆ "Happy #WorldSnakeDay :)" ಎಂದಿದೆ.

ಇಂದು ವಿಶ್ವ ಹಾವು ದಿನ. ಜಗತ್ತಿನಲ್ಲಿ 3,500ಕ್ಕೂ ಹೆಚ್ಚು ಜಾತಿಯ ಹಾವುಗಳಿದ್ದು ಅವುಗಳ ಪೈಕಿ 600 ಹಾವುಗಳು ವಿಷಕಾರಿಯಾಗಿವೆ. ಈ 600 ವಿಷಕಾರಿ ಹಾವುಗಳ ಪೈಕಿ 330 ವಿಷಕಾರಿ ಹಾವುಗಳು ಭಾರತದಲ್ಲೇ ಇವೆಯಂತೆ.