ಚಳಿಗಾಲ, ಮಳೆಗಾಲ ಬಂತೆಂದರೆ ಸಾಕು ತಾಪಮಾನ ಬದಲಾವಣೆಯಿಂದ ಜನರು ನಡುಗುತ್ತಿರುತ್ತಾರೆ. ಇಂತಹ ಸಮಯದಲ್ಲಿ ಕುಡಿಯುವ ನೀರಿನಿಂದ ಸ್ನಾನ ಮಾಡುವ ನೀರಿನವರೆಗೂ ಬಿಸಿ ನೀರಿನ ಮೊರೆ ಹೋಗುವುದು ಸಾಮಾನ್ಯ. ಬಿಸಿ ನೀರಿಗಾಗಿ ಅದರಲ್ಲೂ ಸ್ನಾನಕ್ಕಾಗಿ ನಾವು ಗ್ಯಾಸ್ ಗೀಜರ್, ಎಲೆಕ್ಟ್ರಿಕ್ ಗೀಜರ್ ಹೀಗೆ ಹಲವು ಸಾಧನಗಳನ್ನು ಬಳಸುತ್ತೇವೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ(Video Viral) ನೀರನ್ನು ಬಿಸಿ ಮಾಡಲು ಬಳಸಿರುವ ಸಾಧನವು ವಿಶೇಷವಾಗಿದೆ.
ವೈರಲ್ ವಿಡಿಯೋವನ್ನು ಶೌಚಗೃಹದಲ್ಲಿ ಚಿತ್ರೀಕರಿಸಲಾಗಿದೆ. ಅದರಲ್ಲಿ ನಲ್ಲಿಯ ಕೆಳಗೆ ತೆಳುವಾದ ಕಬ್ಬಿಣದ ತಂತಿಯ ಸಹಾಯದಿಂದ ಉರಿಯುತ್ತಿರುವ ಮೇಣದಬತ್ತಿಯನ್ನು ನೇತುಹಾಕಿರುವುದನ್ನು ನೀವು ನೋಡಬಹುದು. ನಲ್ಲಿಯಿಂದ ಹೊರಬರುವ ನೀರು ಮೇಣದಬತ್ತಿಯ ಜ್ವಾಲೆಯಿಂದ ಬಿಸಿಯಾಗುತ್ತಿದೆ ಎಂದು ತೋರುತ್ತದೆ. ವ್ಯಕ್ತಿಯು ಅದೇ ನೀರಿನಿಂದ ಸಂತೋಷದಿಂದ ಸ್ನಾನ ಮಾಡುತ್ತಿರುವುದನ್ನು ಕಾಣಬಹುದು.
ಆದರೆ ಹೀಗೆ ಮಾಡುವುದರಿಂದ ನಲ್ಲಿಯ ನೀರು ಬಿಸಿಯಾಗುವುದೇ..? ಅಸಲಿ ಸತ್ಯವೆಂದರೆ ಇದು ಕೇವಲ ತಮಾಷೆಯ ವಿಡಿಯೋ ಆಗಿದೆ. ಮೇಣದಬತ್ತಿಯಿಂದ ನೀರು ಬಿಸಿಯಾಗಲು ಸಾಧ್ಯವಿಲ್ಲ. ಈ ವಿಡಿಯೋ ನೋಡಿದರೆ ನೀವು ಕೂಡ ನಗಾಡುತ್ತೀರಿ. ಇದು 2024ರ ಅತ್ಯುತ್ತಮ ಜುಗಾಡ್ ವಿಡಿಯೋ ಆಗಿದೆ.
ಇದುವರೆಗೂ ಈ ವಿಡಿಯೋವನ್ನು 38.7 ಮಿಲಿಯನ್ ಅಂದರೆ ಮೂರು ಕೋಟಿಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ವಿಡಿಯೋ ನೋಡಿದ ಪ್ರತಿಯೊಬ್ಬರು ಹೊಟ್ಟೆ ಹುಣ್ಣಾಗುವಂತೆ ನಗಾಡುವುದು ಮಾತ್ರ ಗ್ಯಾರಂಟಿ.