ನಮ್ಮ ದೇಶದಲ್ಲಿ ಮಾತ್ರವಲ್ಲ.. ಪ್ರಪಂಚದಾದ್ಯಂತ ಕೋತಿಗಳು ತುಂಬಾ ಚೇಷ್ಟೆ ಮಾಡುವ ಅನೇಕ ಸ್ಥಳಗಳಿವೆ. ಅವಕಾಶ ಸಿಕ್ಕ ತಕ್ಷಣ ವಸ್ತುಗಳನ್ನು ನಮ್ಮಿಂದ ಕಿತ್ತುಕೊಳ್ಳುವುದನ್ನು ಮಾತ್ರ ತಪ್ಪಿಸುವುದಿಲ್ಲ.ಇಂತಹ ಅನೇಕ ವಿಡಿಯೋಗಳನ್ನು ಆಗಾಗ್ಗೆ ನೋಡುತ್ತಿರುತ್ತೇವೆ. ಅಂತಹದ್ದೇ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್(Video Viral) ಆಗುತ್ತಿದೆ. ವಿಡಿಯೋದಲ್ಲಿ ಕೋತಿಯು ಮಹಿಳೆಯೊಬ್ಬರ ಐಫೋನ್ ಕಸಿದುಕೊಂಡು ಕುಳಿತಿರುವುದನ್ನು ನೋಡಬಹುದು.
ವೈರಲ್ ವಿಡಿಯೋದಲ್ಲಿ ಕೋತಿಯು ಮಹಿಳೆಯ ಐಫೋನ್ ಕಸಿದುಕೊಂಡು ಕುಳಿತಿರುವುದನ್ನು ನೋಡಬಹುದು. ಐಫೋಣ್ ಅನ್ನು ಕಸಿದುಕೊಂಡ ನಂತರ ಮತ್ತೆ ಮತ್ತೆ ಸ್ಕ್ರಾಚ್ ಮಾಡಲು ಪ್ರಯತ್ನಿಸುತ್ತಿದೆ. ಮಹಿಳೆಯು ಫೋನ್ ಅನ್ನು ಕೋತಿಯಿಂದ ಮರಳಿ ಪಡೆಯಲು ಪ್ರಯತ್ನಿಸುತ್ತಿರುವುದನ್ನು ನೀವು ಕಾಣಬಹುದು. ಕೋತಿಗೆ ಕನ್ನಡಕ ಮತ್ತು ಕೆಲವೊಮ್ಮೆ ಬಿಸ್ಕತ್ತಿನ ಆಮಿಷವೊಡ್ಡುತ್ತಿದ್ದಾರೆ.
ಬಳಿಕ ಮಹಿಳೆಗೆ ಸಹಾಯ ಮಾಡಲು ಇನ್ನೂ ಅನೇಕ ಜನರು ಅಲ್ಲಿಗೆ ಬರುತ್ತಾರೆ. ಕೊಟ್ಟ ಬಿಸ್ಕತ್ತನ್ನು ಕೋತಿ ತೆಗೆದುಕೊಂಡು ತಿನ್ನುತ್ತದೆ ಆದರೆ ಫೋನ್ ಬಿಡುವುದಿಲ್ಲ. ಕೈಲಿರುವ ಫೋನ್ ಅನ್ನು ಕಂದಕಕ್ಕೆ ಬೀಸಾಡುವುದೇನೋ ಎಂಬ ಆತಂಕದಲ್ಲಿ ಎಲ್ಲರೂ ಇರುವಂತೆ ಕಾಣುತತದೆ. ಕೋತಿಯನ್ನು ಪುಸಲಾಯಿಸಲು ಮಹಿಳೆ ಮತ್ತು ಇತರ ಜನರು ಪ್ರಯತ್ನಿಸುತ್ತಿದ್ದರೂ, ಯಾರ ಪ್ರಯತ್ನಕ್ಕೂ ಆ ಮಂಗ ಮಾರು ಹೋಗದೆ ಫೋನ್ ಹಿಡಿದು ಹಾಗೆಯೇ ಕುಳಿತಿರುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು.
ಅಡ್ವೆಂಚರ್ ಬಜೆಟ್ ಜೊತೆಗೆ ಹಣ್ಣಿನ ಬಜೆಟ್ ಕೂಡ ಬಹಳ ಮುಖ್ಯ ಎಂಬ ಶೀರ್ಷಿಕೆ ನೀಡಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಅನೇಕರು ವಿಡಿಯೋ ನೋಡಿ ಪ್ರತಿಕ್ರಿಯಿಸಿದ್ದಾರೆ. ಕೋತಿಗೆ ಅದರ ಕೈಯಲ್ಲಿ ಆಹಾರವನ್ನು ನೀಡಬೇಕಾಗಿತ್ತು ಇದರಿಂದ ಫೋನ್ ಅನ್ನು ಬಿಟ್ಟು ಆಹಾರವನ್ನು ಪಡೆದುಕೊಳ್ಳುತಿತ್ತು, ಚೌಕಾಶಿ ಮಾಡಬೇಕಾಗಿರುವುದು ಸನ್‌ಗ್ಲಾಸ್‌ನೊಂದಿಗೆ ಅಲ್ಲ, ಬಿಸ್ಕತ್ತಿನೊಂದಿಗೆ ಚೌಕಾಶಿ ಮಾಡಬೇಕಿತ್ತು ಎಂದು ಕಾಮೆಂಟ್ ಮಾಡಿದ್ದಾರೆ.