ನ್ಯೂಸ್

ತಾಯಿ & ಮಗಳ ಬಿಹು ಡ್ಯಾನ್ಸ್ Video Viral; ಕಂದಮ್ಮನ ನೃತ್ಯಕ್ಕೆ ನೆಟ್ಟಿಗರು ಫಿದಾ

ಮಕ್ಕಳ ಮುದ್ದಾದ ವಿಡಿಯೋಗಳನ್ನು ಸಾಕಷ್ಟು ಬಾರಿ ಸಾಮಾಜಿಕ ಜಾಲತಾಣದಲ್ಲಿ ನೋಡಿರುತ್ತೀರಿ. ಎಷ್ಟು ನೋಡಿದರು ಮತ್ತೆ ನೋಡಬೇಕು ಎನ್ನುವ ಹಂಬಲ ನಿಲ್ಲುವುದಿಲ್ಲ. ಸ್ಕ್ರೋಲಿಂಗ್ ಮಾಡುವಾಗ, ಮೂಡ್ ಅನ್ನು ಫ್ರೆಶ್ ಮಾಡಲು ಅಥವಾ ಬೇಸರವನ್ನು ಹೋಗಲಾಡಿಸಲು ಮಕ್ಕಳ ವಿಡಿಯೋವನ್ನು ನೋಡುತ್ತಿರುತ್ತೇವೆ. ಸದ್ಯ ಅಂತಹದ್ದೇ ಮುದ್ದು ಕಂದಮ್ಮನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​(Video Viral) ಆಗಿದೆ. ಅದರಲ್ಲಿ ಎರಡೂವರೆ ವರ್ಷದ ಬಾಲಕಿ ಅಸ್ಸಾಂನ ಸಾಂಪ್ರದಾಯಿಕ ಬಿಹು ನೃತ್ಯವನ್ನು ಮಾಡುತ್ತಿದ್ದಾರೆ.

ವೈರಲ್ ವೀಡಿಯೊದಲ್ಲಿ ಪುಟ್ಟ ಹುಡುಗಿ ತನ್ನ ತಾಯಿಯಂತೆ ಅಸ್ಸಾಮಿ ಉಡುಗೆಯನ್ನು ಧರಿಸಿರುವುದನ್ನು ನೋಡಬಹುದು. ಬಹಳ ಮುದ್ದಾಗಿ ಕಾಣುತ್ತಿದ್ದಾಳೆ. ತನ್ನ ತಾಯಿ ಬಿಹು ನೃತ್ಯವನ್ನು ಮಾಡುವುದನ್ನು ನೋಡಿ, ಅವಳು ಅದನ್ನು ನಕಲಿಸಲು ಪ್ರಯತ್ನಿಸುತ್ತಾಳೆ. ಅವಳು ತನ್ನ ತಾಯಿಯಂತೆ ನೃತ್ಯ ಮಾಡಲು ಮತ್ತೆ ಮತ್ತೆ ಪ್ರಯತ್ನಿಸುತ್ತಾಳೆ. ಹಾಗೆ ಮಾಡುವಾಗ ಹುಡುಗಿ ತುಂಬಾ ಮುದ್ದಾಗಿ ಕಾಣುತ್ತಾಳೆ. ನೋಡಿದರೆ ಆಕೆ ಈ ಅಭಿನಯದಲ್ಲಿ ಸಾಕಷ್ಟು ಆಸಕ್ತಿ ವಹಿಸುತ್ತಿರುವುದು ಸ್ಪಷ್ಟವಾಗುತ್ತದೆ.

ಇಲ್ಲಿಯವರೆಗೆ ಈ ವಿಡಿಯೋವನ್ನು 4 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಅನೇಕರು ಪ್ರತಿಕ್ರಿಯಿಸಿದ್ದಾರೆ. ಇದು ತುಂಬಾ ಮುದ್ದಾಗಿದೆ, ವಾಹ್ ವಿಡಿಯೋವನ್ನು ನೋಡಿದ ನಂತರ ನನ್ನ ಹೃದಯವು ಸಂತೋಷವಾಯಿತು, ಈ ರೀಲ್ ಅನ್ನು ಎಷ್ಟು ಬಾರಿ ನೋಡಿದರೂ ತೃಪ್ತಿಯಾಗುವುದಿಲ್ಲ ಎಂದು ಕಾಮೆಂಟ್​ ಮಾಡಿದ್ದಾರೆ.