ನ್ಯೂಸ್

ಬೈಸೆಪ್ಸ್ ಜತೆಗೆ ಲೇಡಿ ಬಾಡಿಬಿಲ್ಡರ್​ ವಧು ಲುಕ್​ Video Viral; ಅಚ್ಚರಿಗೊಂಡ ನೆಟ್ಟಿಗರ ರಿಯಾಕ್ಷನ್​ ಹೀಗಿತ್ತು..

ಬಾಡಿಬಿಲ್ಡರ್​ ಎಂದಾಕ್ಷಣ ನಮಗೆ ಥಟ್​ ಅಂಥಾ ನೆನಪಿಗೆ ಬರುವುದು ಪುರುಷರು ಮಾತ್ರ. ಆದರೆ ಒಬ್ಬ ಮಹಿಳೆ ಬಾಡಿಬಿಲ್ಡರ್​​​ ಆಲೋಚನೆಯೇ ಇರುವುದಿಲ್ಲ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್​ (Video Viral) ಆಗುತ್ತಿದೆ. ಅದರಲ್ಲಿ ಲೇಡಿ ಬಾಡಿಬಿಲ್ಡರ್​​ ಮದುಮಗಳ ಲುಕ್​ನಲ್ಲಿ ಬೈಸೆಪ್ಸ್ ತೋರಿಸುವುದು ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ.

ವೈರಲ್​ ವಿಡಿಯೋದಲ್ಲಿ ಮಹಿಳಾ ಬಾಡಿಬಿಲ್ಡರ್ ಲುಕ್​ ನೋಡಿ ಜನರ ಆಚ್ಚರಿಗೊಂಡಿದ್ದಾರೆ. ಅಷ್ಟಕ್ಕೂ ಆಶ್ಚರ್ಯಕ್ಕೆ ಕಾರಣವಾಗಿದ್ದು ಮಹಿಳೆ ಬಲವಾದ ಮೈಕಟ್ಟು ಮಾತ್ರವಲ್ಲ ಅವರ ವಧುವಿನ ನೋಟ. ಆಭರಣಗಳೊಂದಿಗೆ ವಧುವಿನಂತೆ ಅಲಂಕರಿಸಿಕೊಂಡಿರುವುದನ್ನು ನೋಡಬಹುದು. ಆದರೆ ಅವರ ಬಲವಾದ ದೇಹವು ದೇಹದಾರ್ಢ್ಯದ ವಿಷಯದಲ್ಲಿ ಅವರು ಹುಡುಗರಿಗಿಂತ ಹಿಂದೆ ಇಲ್ಲ ಎಂದು ತೋರಿಸುತ್ತದೆ.

ಈ ವಿಡಿಯೋದಲ್ಲಿರುವ ಮಹಿಳೆಯನ್ನ ಚಿತ್ರಾ ಪುರುಷೋತ್ತಮ್, ಅವರು ಕರ್ನಾಟಕದ ಜನಪ್ರಿಯ ಬಾಡಿಬಿಲ್ಡರ್ ಎಂದು ಹೇಳಲಾಗುತ್ತಿದೆ. ಇವರು ಮಿಸ್ ಇಂಡಿಯಾ ಫಿಟ್‌ನೆಸ್ ಮತ್ತು ವೆಲ್‌ನೆಸ್, ಮಿಸ್ ಸೌತ್ ಇಂಡಿಯಾ ಮುಂತಾದ ಹಲವಾರು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಸ್ಪರ್ಧೆಗಳನ್ನು ಗೆದ್ದಿದ್ದಾರೆ ಎನ್ನಲಾಗಿದೆ.

ಈ ವಿಡಿಯೋವನ್ನು ಇದುವರೆಗೂ 13 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು ಅನೇಕರು ಪ್ರತಿಕ್ರಿಯಿಸಿದ್ದಾರೆ. ಉತ್ತಮ ತಯಾರಿ, ಎಲ್ಲೋ ಯಾವುದೇ AI ಕೆಲಸವೇ?, ಆಭರಣಗಳ ಜತೆಗೆ ಕೆಲವು ಪದಕಗಳು ಸಹ ಅವರ ಕುತ್ತಿಗೆಯಲ್ಲಿ ಇರಬೇಕಿತ್ತು, ಎಷ್ಟು ಉತ್ತಮವಾಗಿ ಬಾಡಿಬಿಲ್ಡ್​ ಮಾಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.