ಜೈಪುರ: ಕಾರು ಚಲಾಯಿಸುತ್ತಿದ್ದಾಗ ಇದ್ದಕ್ಕಿಂದರೆ ಬೆಂಕಿ ಹೊತ್ತಿಕೊಂಡು ಧಗಧಗನೆ ಉರಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ(Video Viral) ಹರಿದಾಡುತ್ತಿದೆ. ಈ ವಿಡಿಯೋದಲ್ಲಿರುವ ಸ್ಥಳವು ಜೈಪುರದ ಅಜ್ಮೀರ್ ರಸ್ತೆಯಲ್ಲಿ ಸುದರ್ಶನಪುರ ಪುಲಿಯಾಗೆ ಹೋಗುವ ಎತ್ತರದ ರಸ್ತೆ ಎಂದು ಹೇಳಲಾಗುತ್ತಿದೆ.
ಇದನ್ನು ಓದಿ: ಕರು ಕಾಪಾಡಲು ಹೆಬ್ಬಾವನ್ನು ಹಿಂಸಿಸುತ್ತಿರುವ ಜನರು; ವಿಡಿಯೋ ನೋಡಿ ನೆಟ್ಟಿಗರು ಹೀಗೆಳಿದ್ದೇಕೆ.. | Viral Video
ಅಸಲಿಗೆ ಕಾರನ್ನು ಚಾಲಕ ಚಲಾಯಿಸುತ್ತಿದ್ದಾಗ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗುತ್ತಿದೆ. ಇದನ್ನು ಗಮನಿಸಿದ ಚಾಲಕ ಕಾರಿನಿಂದ ಇಳಿದು ತನ್ನ ಪ್ರಾಣವನ್ನು ಕಾಪಾಡಿಕೊಂಡಿದ್ದಾನೆ. ಕಾರಿನ ಹ್ಯಾಂಡ್‌ಬ್ರೇಕ್ ವಿಫಲವಾಗಿದ್ದರಿಂದ ಧಗಧಗನೆ ಹೊತ್ತಿಉರಿಯುತ್ತಿರುವ ಕಾರು ಚಾಲಕನಿಲ್ಲದೆ ಎಲಿವೇಟೆಡ್ ರಸ್ತೆಯಿಂದ ಇಳಿಯುತ್ತಿರುವುದನ್ನು ನೋಡಬಹುದಾಗಿದೆ. ಜ್ವಾಲೆ ಮತ್ತು ಹೊಗೆಯನ್ನು ನೋಡಿದ ಜನರು ಕಾರನ್ನು ತಪ್ಪಿಸಲು ತಮ್ಮ ವಾಹನಗಳಿಂದ ಉದ್ರಿಕ್ತರಾಗಿ ಧಾವಿಸುತ್ತಿರುವುದನ್ನು ಕಾಣಬಹುದು.
ಎತ್ತರದ ರಸ್ತೆಯಲ್ಲಿ ವೇಗವಾಗಿ ಚಲಿಸಿದ ಕಾರು ಕೊನೆಯಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ವಾಹನದ ಅವ್ಯವಸ್ಥೆಯ ಹೊರತಾಗಿಯೂ ಯಾವುದೇ ಗಾಯಗಳು ವರದಿಯಾಗಿಲ್ಲ.
ಇದೇ ರೀತಿಯ ಘಟನೆಯೊಂದು ಸೋಮವಾರ ದೆಹಲಿಯ ದ್ವಾರಕಾ ಅಂಡರ್‌ಪಾಸ್ ಬಳಿ ನಡೆದಿದೆ. ಕಾರೊಂದು ಭಾರಿ ಬೆಂಕಿಗೆ ಆಹುತಿಯಾಗಿದೆ. ಕೆಂಪು ಬಣ್ಣದ ಕಾರು ಜ್ವಾಲೆಯ ಚೆಂಡಾಗಿ ಬದಲಾಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕಾರಿನಲ್ಲಿ ಬೆಂಕಿ ಅನಾಹುತ ಆದ್ದರಿಂದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಅಲ್ಲಿಯೂ ಯಾವುದೇ ಗಾಯ ಅಥವಾ ಪ್ರಾಣಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ.(ಏಜೆನ್ಸೀಸ್)