ಮುಂಬೈ: ಇತ್ತೀಚೆಗೆ ತಮ್ಮ ಬಹುದಿನದ ಪ್ರಿಯತಮೆ ಪತ್ರಲೇಖಾರನ್ನು ವಿವಾಹವಾದ ಬಾಲಿವುಡ್ ನಟ ರಾಜ್ಕುಮ್ಮಾರ್ ರಾವ್, ತಮ್ಮ ವಿವಾಹ ಸಮಾರಂಭದ ಕೆಲವು ರಸಮಯ ಕ್ಷಣಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ 'ನಮ್ಮ ಜೀವನದ ಅತ್ಯಂತ ಸುಂದರ ಸಮಯದ ಕೆಲವು ದೃಶ್ಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ' ಎಂದು ರಾವ್ ಬರೆದಿದ್ದಾರೆ.
ಹಲವು ಆಫ್ ಬೀಟ್ ಸಿನಿಮಾಗಳೊಂದಿಗೆ ಜನಪ್ರಿಯರಾಗಿರುವ ರಾಜ್ಕುಮ್ಮಾರ್ ರಾವ್ ಮತ್ತು ನಟಿ ಪತ್ರಲೇಖಾ 11 ವರ್ಷಗಳಿಂದ ಜೊತೆಯಾಗಿದ್ದು, ಇದೀಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ತಮ್ಮ ಆಪ್ತರ ಸಮ್ಮುಖದಲ್ಲಿ ಆತ್ಮೀಯವಾಗಿ ನಡೆದ ಮದುವೆ ಶಾಸ್ತ್ರಗಳಲ್ಲಿ ಅವರಿಬ್ಬರ ಖೆಮಿಸ್ಟ್ರಿ ಯಾವ ಸಿನಿಮಾ ದೃಶ್ಯಗಳಿಗೂ ಕಡಿಮೆ ಇಲ್ಲ.
ಪತ್ರಲೇಖಾ ಮದುವೆ ಮಂಟಪಕ್ಕೆ ಬರುವ ಸಂದರ್ಭದಲ್ಲಿ ರಾವ್ ಶಿಳ್ಳೆ ಹೊಡೆದು ಸ್ವಾಗತಿಸುವುದನ್ನೂ, ನವವಧುವಿಗೆ ಸಿಂಧೂರ ಹಾಕುವ ಶಾಸ್ತ್ರದ ನಂತರ ತಮ್ಮ ಹಣೆಗೂ ಸಿಂಧೂರು ಹಚ್ಚಿಸಿಕೊಳ್ಳುವುದನ್ನೂ ವಿಡಿಯೋದಲ್ಲಿ ಕಾಣಬಹುದು. (ಏಜೆನ್ಸೀಸ್)