ನ್ಯೂಸ್

VIDEO| ಬೀದಿನಾಯಿಗೆ ಸೀಮಂತ ಮಾಡಿದ ಸ್ನೇಹಿತರು

ನವದೆಹಲಿ: ಬೀದಿನಾಯಿಗಳನ್ನು ಕಂಡರೆ ಭಯ ಪಟ್ಟು ದೂರ ಓಡುವವರ ಮಧ್ಯೆ ಇಲ್ಲೊಂದು ಗುಂಪು ಮಾಡಿರುವ ಕೆಲಸ ನೋಡಿದ್ರೆ ನೀವೂ ಖಂಡಿತವಾಗಿಯೂ ಆಶ್ಚರ್ಯಪಡುತ್ತಿರಾ. ಇವರಿಗೆ ಇರುವ ಪ್ರಾಣಿಗಳ ಪ್ರೀತಿ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​​ ವೈರಲ್​​ ಆಗಿದೆ.

ಗೆಳೆಯರ ತಂಡವೊಂದು ಬೀದಿ ನಾಯಿಗೆ ಸೀಮಂತ ಮಾಡಿದ್ದು, ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ವೀಡಿಯೋ ನೋಡಿದ ನೆಟ್ಟಿಗರು ಗೆಳೆಯರ ಈ ತಂಡದ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಹುಡುಗ ಹುಡುಗಿಯರಿರುವ ಗೆಳೆಯರ ಬಳಗ ನಾಯಿಗೆ ಹೂವಿನ ಮಾಲೆಯನ್ನು ಹಾಕಿ ಅರಶಿಣ ಕುಂಕುಮ ಹಾಕಿ ಹಳದಿ ಬಣ್ಣದ ಶಾಲನ್ನು ಹೊದಿಸಿ ಅದರಿಷ್ಟದ ಆಹಾರ ನೀಡುತ್ತಾರೆ. ನಂತರ ಅದರೊಂದಿಗೆ ನಿಂತು ಗೆಳೆಯರು ಫೋಟೋ ತೆಗೆಸಿಕೊಂಡಿದ್ದಾರೆ. ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಬೀದಿನಾಯಿಯೊಂದರ 'ಬೇಬಿ ಶವರ್'ನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಲೈಕ್‌ಗಳನ್ನು ಪಡೆಯುತ್ತಿದೆ. ಇನ್​ಸ್ಟಾಗ್ರಾಮ್​​ ಬಳಕೆದಾರ ಭರತ್ ಚಂದ್ರನ್ ಎಂಬ ವ್ಯಕ್ತಿ ಈ ಪೋಸ್ಟ್ ಮಾಡಿದ್ದು, “ಬೀದಿ ನಾಯಿಗಳ ಬಗ್ಗೆ ದ್ವೇಷ, ಅಸಹ್ಯ ಮತ್ತು ತಿರಸ್ಕಾರದಿಂದ ತುಂಬಿರುವ ಜಗತ್ತಿನಲ್ಲಿ, ಇಲ್ಲಿ ನಾವು ಬೇಬಿ ಶವರ್ ಅನ್ನು ಆಚರಿಸುತ್ತಿದ್ದೇವೆ. ಸುರಕ್ಷಿತ ಹೆರಿಗೆಯನ್ನು ಹೊಂದುತ್ತಾಳೆ. ನಾಯಿಮರಿಗಳಿಗೆ ಲಸಿಕೆ ಹಾಕಲಾಗುತ್ತದೆ ಮತ್ತು ದತ್ತು ಪಡೆಯಲು ನೀಡಲಾಗುತ್ತದೆ. ಪ್ರೀ-ಬುಕಿಂಗ್ ಓಪನ್ ಆಗಿದೆ ಎಂದು ಬರೆದುಕೊಂಡಿದ್ದಾರೆ. ನೆಟ್ಟಿಗರು ಈ ವಿಡಿಯೋ ನೋಟಿ ಮೆಚ್ಚುಗೆ ಸೂಚಿಸಿ ಕಾಮೆಂಟ್​​ ಮಾಡುತ್ತಿದ್ದಾರೆ.