ಕೇಬಲ್ ಮೇಲೆ ಕುಳಿತು ಕಟ್ಟಡದ ಮೇಲೆ ಇಳಿಯಲು ತಿಣುಕಾಡಿದ ಮರಿ ಲಂಗೂರ್ ಅನ್ನು ತಾಯಿ ಲಂಗೂರ್ ಸುರಕ್ಷಿತವಾಗಿ ಕಟ್ಟದ ಮೇಲೆ ಇಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೇಬಲ್ ಮೇಲೆ ತಾಯಿ ಹಾಗೂ ಮರಿ ಲಂಗೂರ್ ಆಗಮಿಸುತ್ತವೆ. ತಾಯಿ ಲಂಗೂರ್ ತಂತಿಯಿಂದ ಕಟ್ಟಡದ ಮೇಲೆ ಇಳಿಯುತ್ತದೆ. ಕೇಬಲ್ ಹಾಗೂ ಕಟ್ಟಡದ ನಡುವಿನ ದೂರ ತುಸು ಹೆಚ್ಚು ಇದ್ದ ಹಿನ್ನೆಲೆಯಲ್ಲಿ ಮರಿ ಲಂಗೂರ್ಗೆ ಸುಲಭವಾಗಿ ಇಳಿಯಲು ಆಗುವುದಿಲ್ಲ. ಹೀಗಾಗಿ ಅದು ಕೇಬಲ್ ಮೇಲೆ ಕುಳಿತಿರುತ್ತದೆ.
ತಾಯಿ ಲಂಗೂರ್ ಕೆಲವು ನಿಮಿಷ ಇಳಿಯಬಹುದು ಎಂದು ಕಾಯುತ್ತದೆ. ಹೀಗಿದ್ದರೂ ಅದಕ್ಕೆ ಇಳಿಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕೇಬಲ್ ಮೇಲಕ್ಕೆ ಜಿಗಿದು ಯಾವು ರೀತಿ ಇಳಿಯಬೇಕು ಎಂದು ಮರಿ ಲಂಗೂರ್ಗೆ ತೋರಿಸಿಕೊಟ್ಟು ಧೈರ್ಯ ತುಂಬಿ ಮತ್ತೆ ಕೆಳಕ್ಕೆ ಇಳಿಯುತ್ತದೆ. ಹೀಗಿದ್ದರೂ ಮರಿ ಲಂಗೂರ್ಗೆ ಇಳಿಯಲು ಸಾಧ್ಯವಾಗುವುದಿಲ್ಲ. ಕೊನೆಗೆ ತಾಯಿ ಲಂಗೂರ್ ಮತ್ತೊಮ್ಮೆ ಕೇಬಲ್ ಮೇಲೆ ಜಿಗಿದು ತನ್ನ ತೋಳಿನ ಮೇಲೆ ಮರಿ ಲಂಗೂರ್ ಕೂರಿಸಿಕೊಂಡು ಕಟ್ಟಡದ ಮೇಲೆ ಸುರಕ್ಷಿತವಾಗಿ ಇಳಿಯುತ್ತದೆ.
ಈ ವಿಡಿಯೋವನ್ನು ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಪ್ರತಿಕ್ರಿಯೆನ್ನು ನೀಡಿದ್ದಾರೆ.
ಭಾರತೀಯ ಅರಣ್ಯ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. (ಏಜೆನ್ಸೀಸ್)