ಮುಂಬೈ: ಮಕ್ಕಳು ವಯಸ್ಸಿಗೆ ಬಂದಾಗ ಪೋಷಕರೇ ಗಂಡು-ಅಥವಾ ಹೆಣ್ಣನ್ನು ಹುಡುಕಿ ಮದುವೆ ಮಾಡೋದು ರೂಢಿಯಾಗಿತ್ತು. ಆದರೆ ಇಂದು ಕಾಲ ಬದಲಾಗಿದೆ. ಇಂದಿನ ಯುವಕ, ಯುವತಿಯರು ತಾವು ಇಷ್ಟಪಟ್ಟವರನ್ನು ಮದುವೆಯಾಗುತ್ತಾರೆ. ಕೆಲವು ಪೋಷಕರು ಒಪ್ಪುತ್ತಾರೆ, ಇನ್ನು ಕೆಲವರು ವಿರೋಧ ವ್ಯಕ್ತಪಡಿಸುತ್ತಾರೆ. ಆದರೆ ಇಲ್ಲೊಬ್ಬಳು ತಾಯಿ ಏನು ಮಾಡಿದ್ದಾಳೆಂದು ನೀವೆ ನೋಡಿ....
ಮಗಳಿಗೆ ಬಾಯ್‌ಫ್ರೆಂಡ್ ಇದ್ದಾನೆ ಎಂಬ ಕಾರಣಕ್ಕೆ ಮಹಿಳೆಯೊಬ್ಬರು ತನ್ನ ಮಗಳನ್ನು ಜನರ ಮುಂದೆಯೇ ಥಳಿಸುತ್ತಿರುವುದನ್ನು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಏನಿದೆ?: ಮಗಳಿಗೆ ಬಾಯ್‌ಫ್ರೆಂಡ್ ಇದ್ದಾನೆ ಎಂದು ತಿಳಿದ ಕೂಡಲೇ ತಾಯಿ ಮಗಳಿಗೆ ಕಪಾಳಮೋಕ್ಷ ಮಾಡುತ್ತಾಳೆ. ಹೊಡೆಯದಂತೆ ಮಗಳು ಪದೇ ಪದೇ ಕೇಳಿಕೊಂಡರೂ ತಾಯಿ ಮತ್ತೆ ಮತ್ತೆ ಹೊಡೆಯುವುದನ್ನು ನೋಡಬಹುದು. ಮಗಳು ಅಳುತ್ತಾ ಏನನ್ನೋ ವಿವರಿಸುತ್ತಿದ್ದರೂ ತಾಯಿ ತನ್ನ ಮಗಳನ್ನು ಹೊಡೆಯುತ್ತಲೇ ಇರುತ್ತಾಳೆ. ನಂತರ ಅವಳನ್ನು ಕೋಣೆಯಿಂದ ಹೊರಗೆ ಎಳೆದುಕೊಂಡು ಹೋಗುತ್ತಾಳೆ.
ಈ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಆದರೆ ಈ ಘಟನೆ ಎಲ್ಲಿ ನಡೆದಿರುವುದು ಎನ್ನುವ ಮಾಹಿತಿ ಲಭ್ಯವಾಗಿಲ್ಲ.