ನ್ಯೂಸ್

ಡೋರ್ ಹಿಡಿದು ನೇತಾಡಿರುವ ವಿಡಿಯೋ ವೈರಲ್

ಬೆಂಗಳೂರು: ಟೋಲ್ ಶುಲ್ಕ ಕಟ್ಟದೆ ಪರಾರಿಯಾಗುತ್ತಿದ್ದ ಟಾಟಾಏಸ್ ವಾಹನ ಅಡ್ಡಗಟ್ಟಿದ ಟೋಲ್ ಸಿಬ್ಬಂದಿ ವಾಹನದ ಡೋರ್ ಹಿಡಿದು ನೇತಾಡಿರುವ ವಿಡಿಯೋ ವೈರಲ್ ಆಗಿದೆ.

ಎಲೆಕ್ಟ್ರಾನಿಕ್ ಸಿಟಿ ಟೋಲ್ ಗೇಟ್ ಬಳಿ ಈ ಘಟನೆ ನಡೆದಿದೆ.

ಎಲೆಕ್ಟ್ರಾನಿಕ್ ಸಿಟಿಯಿಂದ ಹೊಸೂರು ಸಂಪರ್ಕಿಸುವ ಟೋಲ್ ಗೇಟ್ ಬಳಿ ಟಾಟಾಏಸ್ ಚಾಲಕನೊಬ್ಬ ಹೊಸೂರು ಕಡೆ ಹೋಗಲು ಬಂದಿದ್ದಾನೆ. ಈ ವೇಳೆ ಟೋಲ್ ಶುಲ್ಕ ಪಾವತಿಸದೆ ಮೊಂಡಾಂಟ ಶುರು ಮಾಡಿದ್ದು, ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಸಿಬ್ಬಂದಿಯೊಬ್ಬ ವಾಹನ ಅಡ್ಡಗಟ್ಟಿದ್ದು, ಆದರೂ ಚಾಲಕ ಏಕಾಏಕಿ ಸಿಬ್ಬಂದಿ ಮೇಲೆಯೇ ವಾಹನ ಹರಿಸಲು ಯತ್ನಿಸಿದ್ದಾನೆ. ಆಗ ಸಿಬ್ಬಂದಿ ವಾಹನದ ಡೋರ್ ಹಿಡಿದು ನೇತಾಡಿದ್ದಾನೆ. ಆದರೂ ತಲೆಕೆಡಿಸಿಕೊಳ್ಳದ ವಾಹನ ಚಾಲಕ ವೇಗವಾಗಿಯೇ ಚಾಲನೆ ಮಾಡಿ, ಮಾರ್ಗ ಮಧ್ಯೆ ರಸ್ತೆ ಬಳಿ ಟೋಲ್ ಸಿಬ್ಬಂದಿಯನ್ನು ತಳ್ಳಿ ಪರಾರಿಯಾಗಿದ್ದಾನೆ. ಈ ವಿಡಿಯೋ ವೈರಲ್ ಆಗಿದ್ದು. ಎಲೆಕ್ಟ್ರಾನಿಕ್ ಸಿಟಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ದೂರು ದಾಖಲಾಗಿಲ್ಲ.