ನ್ಯೂಸ್

ಹಾವಿನ ಅರಿವಿಲ್ಲದೇ ಅದನ್ನು ಹಿಡಿದು ಆಟವಾಡಿದ ಮಗು! ಭಾರೀ ಆಕ್ರೋಶಕ್ಕೆ ಕಾರಣವಾಯ್ತು ವೈರಲ್​ ವಿಡಿಯೋ…

ನವದೆಹಲಿ: ವಿಷಕಾರಿ ಹಾವೊಂದನ್ನು ಹಿಡಿದು ಮಗುವೊಂದು ಆಟವಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಘಟನೆ ಯಾವ ರಾಜ್ಯದಲ್ಲಿ  ನಡೆದಿದೆ ಎಂಬುದು ಈವರೆಗೆ ಸ್ಪಷ್ಟವಾಗಿಲ್ಲ.

ವಿವೇಕ್ ಚೌಧರಿ ಸ್ನೇಕ್ ಸೇವರ್​ ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, 12.9 ಮಿಲಿಯನ್ಸ್ ವೀವ್ಸ್ ಪಡೆದುಕೊಂಡಿದೆ. ಅನೇಕರು ಮಗುವಿನ ಧೈರ್ಯವನ್ನು ಮೆಚ್ಚಿದ್ದು, ಈ ವಿಡಿಯೋ ಪರ-ವಿರೋಧದ ಚರ್ಚಗೆ ಆಸ್ಪದ ಮಾಡಿಕೊಟ್ಟಿದೆ.

ವೈರಲ್ ಆಗಿರುವ ವಿಡಿಯೋ ನೋಡುವುದಾದರೆ, ಪುಟ್ಟ ಮಗುವೊಂದು ಹಾವಿನ ಬಗ್ಗೆ ಅರಿವಿಲ್ಲದೇ ಅದನ್ನು ಕೈಯಲ್ಲಿ ಹಿಡಿದುಕೊಂಡು ಆಟವಾಡುತ್ತಿರುವುದನ್ನು ನೋಡಬಹುದಾಗಿದೆ. ಬಳಿಕ ಅದಕ್ಕೆ ಜೀವ ಇರುವುದನ್ನು ತಿಳಿದ ಮಗು ಪಕ್ಕಕ್ಕೆ ತಳ್ಳಿದ್ದು, ಬಳಿಕ ವ್ಯಕ್ತಿಯೊಬ್ಬರು ಬಂದು ಅದನ್ನು ಹಿಡಿಯುತ್ತಾರೆ. ಈ ವಿಡಿಯೋ ವೈರಲ್ ಆಗಿದ್ದು, 12.9 ಮಿಲಿಯನ್​ಗೂ ಅಧಿಕ ಬಾರಿ ವೀಕ್ಷಣೆಗೆ ಒಳಪಟ್ಟಿದೆ.

ಅಣೇಕರು ಮಕ್ಕಳನ್ನು ಅಪಾಯಕ್ಕೆ ಸಿಲುಕಿಸುವಷ್ಟು ವಿಪರೀತಕ್ಕೆ ಹೋಗಬೇಡಿ. ಮಗುವನ್ನು ಸರಿಯಾಗಿ ನೋಡಿಕೊಳ್ಳಿ ಎಂದು ಕಮೆಂಟ್ ಹಾಕಿದ್ಧಾರೆ. ನಿನಗೆ ಹುಚ್ಚು ಹಿಡಿದಿದೆಯೇ? ನೀನು ಮಗುವನ್ನು ಹಾವಿನೊಂದಿಗೆ ಆಟವಾಡಲು ಬಿಡುತ್ತಿದ್ದೀಯಾ! ಎಂದು ಮತ್ತಷ್ಟು ಜನ ಕಮೆಂಟ್​ ಹಾಕಿದ್ದಾರೆ. ಕೇವಲ ಲೈಕ್ಸ್​ ಹಾಗೂ ವೀಕ್ಷಣೆಗಾಗಿ ಮಕ್ಕಳನ್ನು ಈ ರೀತಿಯ ಅಪಾಯಕ್ಕೆ ದೂಡುವುದು ಸರಿಯಲ್ಲ. ಮುಂದೊಂದು ದಿನ ನಿಮಗೆ ಇದು ಮುಳುವಾಗಬಹುದು ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.