ಉದ್ದ ಕತ್ತಿನ ಹುಲ್ಲೆಗಳು ಆಹಾರಕ್ಕಾಗಿ ಪರಸ್ವರ ಸಹಾಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಂಚಲ ಸೃಷ್ಟಿಸಿದೆ.
ನೇಚರ್ ಇಸ್ ಲಿಟ್ ಎನ್ನುವ ಟ್ವಿಟರ್ ಖಾತೆಯಿಂದ ಅಪ್ಲೋಡ್ ಆಗಿರುವ 19 ಸೆಕೆಂಡುಗಳ ವಿಡಿಯೋ ಕೆಲವೇ ತಾಸುಗಳಲ್ಲಿ 9 ಸಾವಿರ ಮಂದಿ ವೀಕ್ಷಣೆ ಮಾಡಿದ್ದಾರೆ. 800 ಮಂದಿ ಲೈಕ್ ಮಾಡಿದ್ದಾರೆ.
ಪ್ರಾಣಿಗಳನ್ನು ನೋಡಿ ಮನುಷ್ಯರು ಕಲಿಯಬೇಕಾದದ್ದು ತುಂಬಾ ಇದೆ. ಒಬ್ಬರಿಗೊಬ್ಬರು ಹೇಗೆ ಸಹಾಯ ಮಾಡಬೇಕು ಎಂಬುದನ್ನು ಈ ಉದ್ದ ಕತ್ತಿನ ಹುಲ್ಲೆಗಳನ್ನು ನೋಡಿ ಕಲಿಯಬೇಕು ಎಂದು ಬರೆದು ವಿಡಿಯೋ ಅಪ್ ಲೋಡ್ ಮಾಡಲಾಗಿದೆ.
ಮೊದಲು 2 ಹುಲ್ಲೆಗಳು ಮರದ ಬಳಿಗೆ ತೆರಳು ಹಿಂಗಾಲುಗಳ ಮೇಲೆ ನಿಂತು ಮುಂಗಾಲಿನಿಂದ ಮರದ ರೆಂಬೆಯನ್ನು ಬಗ್ಗಿಸುತ್ತವೆ. ಮರದ ರೆಂಬೆ ನೆಲಕ್ಕೆ ಹತ್ತಿರವಾಗುತ್ತಿದ್ದಂತೆ ಒಂದು ಹುಲ್ಲೆ ನಾಲ್ಕು ಕಾಲುಗಳ ಮೇಲೆ ನಿಂತು ಎಲೆಯನ್ನು ತಿನ್ನುತ್ತದೆ. ಮತ್ತೊಂದು ಹುಲ್ಲೆ ಹಿಂಗಾಲುಗಳ ಮೇಲೆ ನಿಂತು ಎಲೆಯನ್ನು ತಿನ್ನುತ್ತದೆ.
ವಿಡಿಯೋವನ್ನು ವೀಕ್ಷಿಸಿದ ಕೆಲವರು ಇದೆ ಮೊದಲ ಬಾರಿಗೆ ಹುಲ್ಲೆಗಳು ಪರಸ್ವರ ಆಹಾರಕ್ಕಾಗಿ ಪರಸ್ವರ ಸಹಾಯ ಮಾಡುತ್ತಿರುವುದನ್ನು ನೋಡುತ್ತಿದ್ದೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೆ ಕೆಲವರು ದ್ವೇಷ ತುಂಬಿಕೊಂಡಿರುವ ಮನುಷ್ಯರು ಇವುಗಳನ್ನು ನೋಡಿ ಪಾಠ ಕಲಿಯಬೇಕು ಎಂದು ಹೇಳಿದ್ದಾರೆ. (ಏಜೆನ್ಸೀಸ್)