ನ್ಯೂಸ್

ಬಿಜೆಪಿ ಮತ್ತು ಎನ್​ಸಿಪಿ ಕಾರ್ಯಕರ್ತರ ನಡುವೆ ಮಾರಾಮಾರಿ! ವಿಡಿಯೋ ವೈರಲ್ | Maharastra

Maharastra: ಮಹಾರಾಷ್ಟ್ರ ವಿಧಾನಸಭೆ ಮುಂದೆ ಬಿಜೆಪಿ ಮತ್ತು ಎನ್​ಸಿಪಿ ಶರದ್​ ಪವರ್ ಬಣದ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದು, ಘಟನೆಯ ದೃಶ್ಯ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಬಿಜೆಪಿ ಶಾಸಕ ಗೋಪಿಚಂದ್ ಪಡಲ್ಕರ್, ಎನ್​ಸಿಪಿ ಶರದ್ ಪವರ್ ಬಣದ ಶಾಸಕ ಜಿತೇಂದ್ರ ಅವ್ಹಾದ್ ಹಾಗೂ ಅವರ ಬೆಂಬಲಿಗರ ನಡುವೆ ಮಾರಾಮಾರಿ ಸಂಭವಿಸಿದೆ. ವಿಧಾನಸಭಾ ಹೊರೆಗೆ ಮಾತಿಗೆ ಮಾತು ಬೆಳೆದ ಹಿನ್ನಲೆ ಅವಾಚ್ಯ ಶಬ್ದಗಳಿಂದ ಕಾರ್ಯಕರ್ತರು ಪರಸ್ಪರ ಕೈ ಕೈ ಮಿಲಾಯಿಸಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ಎನ್​ಸಿಪಿ ಶಾಸಕ ಜಿತೇಂದ್ರ ಅವ್ಹಾದ್ ರೆಡ್ ಕಾರ್ಪೆಟ್ ಮೇಲೆ ನಡೆದುಕೊಂಡು ಹೋಗುವಾಗ ‘ಮಂಗಳಸೂತ್ರ ಕಳ್ಳ’ ಎಂದು ಘೋಷಣೆ ಕೂಗಿದ್ದರು. ಇದು ಗೋಪಿಚಂದ್​ರನ್ನೇ ಗುರಿಯಾಗಿಸಿ ಹೇಳಿದ್ದು ಎಂದು ವ್ಯಾಪಾಕವಾಗಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಈ ಹಿನ್ನೆಲೆ ಮಾರಾಮಾರಿ ನಡೆದಿದೆ ಎನ್ನಲಾಗಿದೆ.

ಶಾಸಕರ ಬೆಂಬಲಿಗರ ನಡುವಿನ ಹೊಡೆದಾಟದ ಬಗ್ಗೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಎನ್​​ಸಿಪಿ ನಾಯಕ ರೋಹಿತ್ ಪವಾರ್ ಪ್ರಸ್ತಾಪಿಸಿದ್ದು, ಘಟನೆ ಬಗ್ಗೆ ಕಠಿಣ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಕುರಿತು ತನಿಖೆ ನಡೆಸುವುದಾಗಿ ಸ್ಪೀಕರ್ ರಾಹುಲ್ ನಾರ್ವೇಕರ್ ಭರವಸೆಯನ್ನೂ ನೀಡಿದ್ದಾರೆ. ಸ್ಪೀಕರ್ ಮತ್ತು ಬಿಜೆಪಿ ಹಿರಿಯ ನಾಯಕರನ್ನು ಭೇಟಿಯಾದ ಗೋಪಿಚಂದ್, ಇಡೀ ಘಟನೆ ದುರದೃಷ್ಟಕರ ಎಂದು ಹೇಳಿ ಕ್ಷಮೆಯಾಚಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್​ಐಆರ್ ದಾಖಲಿಸಲಾಗಿದ್ದು, ಶಾಸಕ ಗೋಪಿಚಂದ್ ಮತ್ತು ಜಿತೇಂದ್ರ ಅವ್ಹಾದ್​ರ ಇಬ್ಬರು ಬೆಂಬಲಿಗರನ್ನು ಪೊಲೀಸರು ಬಂಧಿಸಿದ್ದಾರೆ. (ಏಜೆನ್ಸೀಸ್​)