ನ್ಯೂಸ್

VIDEO: ಮಾಸ್ಕ್ ಧರಿಸದೇ ರಸ್ತೆಗೆ ಇಳಿಯುವವರಾರು? ;)

ಕರೊನಾ ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಎಲ್ಲರೂ ಮಾಸ್ಕ್ ಧರಿಸಬೇಕಾದ್ದು ಕಡ್ಡಾಯ. ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದಲೂ ಇದು ಉತ್ತಮ ನಡವಳಿಕೆ. ಆದರೆ, ಇನ್ನೂ ಅನೇಕರು ಇದನ್ನು ಮೀರಿ ಮಾಸ್ಕ್ ಧರಿಸದೇ ಸಾರ್ವಜನಿಕ ಪ್ರದೇಶಗಳಲ್ಲಿ ಅಡ್ಡಾಡುತ್ತಿದ್ದಾರೆ. ಅವರಿಗೊಂದು ಪಾಠ ಈ ವಿಡಿಯೋದಲ್ಲಿದೆ.

ಐಪಿಎಸ್ ಅಧಿಕಾರಿ ತಮ್ಮ ಟ್ವಿಟರ್ ಹ್ಯಾಂಡಲ್​ನಲ್ಲಿ ಒಂದು ವಿಡಿಯೋ ಕ್ಲಿಪ್ ಅಪ್ಲೋಡ್ ಮಾಡಿದ್ದು, "Creativity at its peak with #COVID19 around! Now you decide; who are you?" ಎಂಬ ಸ್ಟೇಟಸ್​ ಕೂಡ ಹಾಕಿದ್ದಾರೆ.

ಹಿಂದಿ ಭಾಷೆಯಲ್ಲಿರುವ ವಿಡಿಯೋ ರಿಯಾಲಿಟಿ ಚೆಕ್​ಗೆ ಸಂಬಂಧಿಸಿದ್ದಾಗಿದ್ದು, ರಾತ್ರಿ ಹೊತ್ತು ಲೋಗೋ ಮೈಕ್​ ಹಿಡಿದುಕೊಂಡಿರುವ ಪತ್ರಕರ್ತ ಮಾಸ್ಕ್ ಧರಿಸದ ವ್ಯಕ್ತಿ ಮತ್ತು ಕತ್ತೆಯ ಬಳಿ ಹೋಗಿ ನಡೆಸಿದ ಸಂಭಾಷಣೆಯ ದೃಶ್ಯವಿದೆ. ವಿಡಿಯೋ ಆರಂಭವಾಗುವುದೇ ಪತ್ರಕರ್ತ ಕತ್ತೆಯ ಬಾಯಿಗೆ ಮೈಕ್ ಹಿಡಿದು ಪ್ರಶ್ನೆ ಕೇಳುವ ಮೂಲಕ

ಪತ್ರಕರ್ತ: ಏನೂ ಕೇಳಿದ್ರೂ ಉತ್ತರ ಕೊಡುವುದಿಲ್ಲ ಅಣ್ಣಾ.. ಮಾಸ್ಕ್ ಧರಿಸದೇ ರಸ್ತೆ ಮೇಲೆ ಯಾಕೆ ಕುಳಿತಿದ್ದೀಯಾ ಅಣ್ಣಾ..

ಕತ್ತೆ: -----

ಪತ್ರಕರ್ತ: ಈಗ ಲಾಕ್​ಡೌನ್ ಇದೆ. ಆದರೂ ನೀವು ಹೊರಗೆ ಅಡ್ಡಾಡ್ತಿದ್ದೀರಲ್ಲ.. ಸ್ಯಾನಿಟೈಸ್ ಎಲ್ಲ ಮಾಡ್ತಿದ್ದೀರಲ್ಲ..

ಕತ್ತೆ:--------

ದೃಶ್ಯ ಬದಲಾಗುತ್ತದೆ.

ಪತ್ರಕರ್ತ ಎದ್ದು ಅಲ್ಲೇ ಇದ್ದ ಇಬ್ಬರ ಪೈಕಿ ಒಬ್ಬಾತ ಮಾಸ್ಕ್ ಧರಿಸಿರಲಿಲ್ಲ. ಆತನ ಬಳಿ ಹೋಗಿ ಮಾತನಾಡುವ ದೃಶ್ಯ

ಪತ್ರಕರ್ತ: ಅಲ್ನೋಡಿ ನಮ್ಮ ಅಣ್ಣ ಕುಳಿತಿದ್ದಾನೆ ನೋಡಿ ಅಲ್ಲಿ.. ಸ್ವಲ್ಪ ಮುಂದೆ ನೋಡಿ ಅಲ್ಲೇ ಇದ್ದಾನೆ. ಸ್ವಲ್ಪ ಸೈಡ್​ನಲ್ಲಿ ನಿಲ್ಲಣ್ಣ.. ಇವರು ಅಣ್ಣನ್ನನ್ನು ನೋಡಿಬಿಡಲಿ ಒಮ್ಮೆ... ಅಲ್ಲಿ ಸೈಡ್​ನಲ್ಲಿ ಇದೆಯಲ್ಲ. ಅದು ಏನೂ ಮಾತನಾಡುವುದಿಲ್ಲ.. ಪ್ರಶ್ನೆ ಕೇಳಿದ್ರೆ ಮಾತೇ ಆಡಲ್ಲ.. ಯಾಕೆ ಹಾಗೆ...?

ಮಾಸ್ಕ್ ಧರಿಸದ ವ್ಯಕ್ತಿ: ಯೇ.. ಅದೇನೂ ಮಾತನಾಡುವಂತಹ ಗಿರಾಕಿ ಅಲ್ಲ ಬಿಡಣ್ಣ..

ಪತ್ರಕರ್ತ: ಅದು ಮಾತನಾಡುವಂಥದ್ದಲ್ಲ.. ಹಾಗಾದ್ರೆ ಅದೇನದು...

ಮಾಸ್ಕ್ ಧರಿಸದ ವ್ಯಕ್ತಿ: ಏನು.. ಅಲ್ಲೇ ಎದುರಿಗೇ ಇದೆಯಲ್ಲ ನೋಡಿ...

ಪತ್ರಕರ್ತ: ಹಾಗಾದ್ರೆ ಅದರ ಹೆಸರೇನು?

ಮಾಸ್ಕ್ ಧರಿಸದ ವ್ಯಕ್ತಿ: ಅದನ್ನು ಕತ್ತೆ ಅಂತ ಕರೀತಾರೆ...

ಪತ್ರಕರ್ತ: ಕತ್ತೆ ಅಂತಾರಾ... ಓ ಅಣ್ಣಾ.. ಹಾಗಾದ್ರೆ ಲಾಕ್​ಡೌನ್ ಟೈಮ್​ನಲ್ಲಿ ಮಾಸ್ಕ್ ಧರಿಸದೇ ಇರುವುದು ಹೊರಗೆಲ್ಲ ಅಡ್ಡಾಡೋದು ಕತ್ತೇನಾ...

ಮಾಸ್ಕ್ ಧರಿಸದ ವ್ಯಕ್ತಿ: ಹಾಂ.. ಹೌದು...

ಪತ್ರಕರ್ತ: ಹಾಗಾದ್ರೆ ಮಾಸ್ಕ್ ಧರಿಸದೇ ಇರುವವರನ್ನು ಏನಂತಾರೆ?

ಮಾಸ್ಕ್ ಧರಿಸದ ವ್ಯಕ್ತಿ: ನಾನು ಈಗ ಎದ್ದು ಬಂದೆ. ಮಾಸ್ಕ್ ಮರೆತು ಬಂದೆ..

ಪತ್ರಕರ್ತ: ಅದೂ ಹಾಗೇ ಅಲ್ಲವೇ. ಈಗಷ್ಟೇ ಅಲ್ಲಿಂದ ಎದ್ದು ಹೋಯಿತು.. ಯಾರು ಮಾಸ್ಕ್ ಧರಿಸುವುದಿಲ್ಲವೋ ಅವರು ಕತ್ತೆ...

ಮಾಸ್ಕ್ ಧರಿಸದ ವ್ಯಕ್ತಿ: ಹೌದು.. ಮಾಸ್ಕ್ ಯಾರು ಧರಿಸುವುದಿಲ್ಲವೋ ಅವರು ಕತ್ತೆ... !