ನ್ಯೂಸ್

VIDEO| ಮಹಾತ್ಮ ಗಾಂಧಿ ಚಿತ್ರ, ಸಂದೇಶಗಳೊಂದಿಗೆ ಕಂಗೊಳಿಸಿದ ಬುರ್ಜ್​ ಖಲೀಫ

ದುಬೈ: ನಿನ್ನೆ ಆಚರಿಸಿದ 152ನೇ ಗಾಂಧಿ ಜಯಂತಿ ಸಂದರ್ಭಕ್ಕೆ ವಿಶ್ವದ ವಿವಿಧ ನಾಯಕರು ಭಾರತದ ರಾಷ್ಟ್ರಪಿತ ಎಂದು ಕರೆಯಲ್ಪಡುವ ಮಹಾತ್ಮ ಗಾಂಧಿ ಅವರನ್ನು ಸ್ಮರಿಸಿದ್ದಾರೆ. ಇದೇ ಸಂದರ್ಭದಲ್ಲಿ ಜಗತ್ತಿನ ಅತಿಎತ್ತರದ ಕಟ್ಟಡವಾದ ದುಬೈನ ಬುರ್ಜ್​ ಖಲೀಫಾದಲ್ಲಿ ಅವರ ಚಿತ್ರಗಳು, ಸಂದೇಶಗಳು ಶೋಭಿಸಿದವು.

ಬುರ್ಜ್​ ಖಲೀಫಾದ ಮೇಲೆ ಮೂಡಿಬಂದ ದೀಪಗಳ ಚಿತ್ತಾರದಲ್ಲಿ ಭಾರತದ ಬಾವುಟದೊಂದಿಗೆ ಗಾಂಧಿ ಚಿತ್ರಗಳು ರಾರಾಜಿಸಿದವು. ಗಾಂಧಿಯವರ ಅಹಿಂಸೆಯ ಸಂದೇಶಗಳು, ಅವರ ರೇಖಾ ಚಿತ್ರಗಳು ಮತ್ತು ಚರಕ ಮೂಡಿಬಂದವು. ಈ ದೃಶ್ಯವನ್ನು ಬುರ್ಜ್​ ಖಲೀಫಾದ ಅಧಿಕೃತ ಟ್ವಿಟರ್​ ಖಾತೆಯಲ್ಲಿ 'ಬೀ ದ ಚೇಂಜ್ ಯು ವಿಶ್ ಟು ಸೀ ಇನ್​ ದ ವರ್ಲ್ಡ್​' ಎಂಬ ಗಾಂಧೀಜಿ ಮಾತನ್ನು ಸ್ಮರಿಸಿ ಪ್ರಕಟಿಸಿದ್ದಾರೆ. (ಏಜೆನ್ಸೀಸ್)