ನ್ಯೂಸ್

DDLJ ಗೀತೆಗೆ ಹೆಜ್ಜೆ ಹಾಕಿದ ವಧು, ವಿಡಿಯೋ ವೈರಲ್; ನೀವೂ ಫಿದಾ ಆಗ್ದಿದ್ರೆ ಕೇಳಿ…

ಬೆಂಗಳೂರು: ಪ್ರತಿಯೊಬ್ಬರ ಜೀವನದಲ್ಲಿ ನಡೆಯುವ ಪ್ರಮುಖ ಘಟನೆಗಳಲ್ಲಿ ಮದುವೆಯೂ ಒಂದು. ಇತ್ತೀಚಿನ ದಿನಗಳಲ್ಲಿ ವಧು-ವರರು ಈ ದಿನವನ್ನು ಸ್ಮರಣೀಯವಾಗಿಸಲು ವಿಭಿನ್ನವಾಗಿ ಏನನ್ನಾದರೂ ಮಾಡುತ್ತಿರುತ್ತಾರೆ.

ಅಂದಹಾಗೆ ಇತ್ತೀಚೆಗೆ ವಧು ಸಂಗೀತ ಕಾರ್ಯಕ್ರಮದಲ್ಲಿ ನೃತ್ಯ ಮಾಡುವ ವಿಡಿಯೋ ವೈರಲ್ ಆಗಿದ್ದು, DDLJ ಚಿತ್ರದ 'ಮೇರೆ ಖ್ವಾಬೊನ್ ಮೇ ಜೋ ಆಯೆ' ಗೀತೆಗೆ ಅದ್ಭುತವಾಗಿ ಪರ್​​ಫಾರ್ಮ್ ಮಾಡುತ್ತಿರುವುದನ್ನು ನೋಡಬಹುದು. ವಧು ಗೋಲ್ಡನ್ ಲೆಹೆಂಗಾದಲ್ಲಿ ಆಕರ್ಷಕವಾಗಿ ನೃತ್ಯ ಮಾಡಿದ್ದು, ಅವರ ನೃತ್ಯ ಯಾರನ್ನಾದರೂ ಆಕರ್ಷಿಸದೆ ಇರಲಾರದು. ವಧುವಿನ ನೃತ್ಯ ನೋಡಿ ಅಲ್ಲಿ ನೆರೆದಿರುವ ಜನರು ಸಹ ಜೋರಾಗಿ ಹುರಿದುಂಬಿಸುತ್ತಿದ್ದು, ಆಕೆಯ ಅಭಿವ್ಯಕ್ತಿ ಮತ್ತು ನೃತ್ಯ ಎಲ್ಲರನ್ನೂ ಸೆಳೆಯುತ್ತದೆ.

ವಧು ತನ್ನ ಇನ್ಸ್ಟಾಗ್ರಾಂ ಪೇಜ್​​​ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಈ ವಿಡಿಯೋವನ್ನು ಹಂಚಿಕೊಂಡಾಗಿನಿಂದ, ಜನರು ವಧುವಿನ ನೃತ್ಯವನ್ನು ಬಹಳ ಇಷ್ಟಪಟ್ಟಿದ್ದು, ಹಾಡಿ ಹೊಗಳುತ್ತಿದ್ದಾರೆ. ವಿಡಿಯೋ ಈಗಾಗಲೇ 13.6 ಮಿಲಿಯನ್ ವೀಕ್ಷಣೆ ಮತ್ತು 575K ಕ್ಕೂ ಹೆಚ್ಚು ಲೈಕ್ಸ್ ಗಳಿಸಿದೆ.

ವೈರಲ್ ವಿಡಿಯೋಗೆ ಜನರು "ಆಕೆಯ ಮುಖದ ಮೇಲಿನ ಸಂತೋಷ ... ತೃಪ್ತಿ ಮತ್ತು ಖಷಿಯನ್ನು ವ್ಯಕ್ತಪಡಿಸುತ್ತದೆ, ನಿಜಕ್ಕೂ ಅದ್ಭುತವಾಗಿದೆ, Superrrrrbbbb ನೃತ್ಯ, ಸಂತೋಷದ ಪರಿಪೂರ್ಣ ಪ್ಯಾಕೇಜ್" ಎಂದೆಲ್ಲಾ ಕಾಮೆಂಟ್‌ ಮಾಡಿದ್ದು, ಅನೇಕರು ಹೃದಯದ ಎಮೋಟಿಕಾನ್‌ಗಳನ್ನು ಸಹ ಪೋಸ್ಟ್ ಮಾಡಿದ್ದಾರೆ.