ನ್ಯೂಸ್

VIDEO: ಡಿಜೆ ಹಳ್ಳಿ ಗಲಭೆ ಬಗ್ಗೆ ಬಿಜೆಪಿ ನಾಯಕ ಅಣ್ಣಾಮಲೈ ಹೇಳಿದ್ದೇನು?

malli

ನವದೆಹಲಿ: ಟಫ್ ಕಾಪ್ ಸಿಂಗಂ​ ಆಗಿ ಖ್ಯಾತಿ ಗಳಿಸಿದ ಅಣ್ಣಾಮಲೈ ನಿರೀಕ್ಷೆಯಂತೆ ಇಂದು ನವದೆಹಲಿಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಪಕ್ಷ ಸೇರ್ಪಡೆಯ ನಂತರ ದಿಗ್ವಿಜಯ ನ್ಯೂಸ್ ಜತೆಗೆ ಮಾತನಾಡಿದ ಅವರು, ರಾಷ್ಟ್ರೀಯ ಚಿಂತನೆಗೆ ಹೊಂದುವ ಪಕ್ಷ ಬಿಜೆಪಿ. ಹೀಗಾಗಿ ಬಿಜೆಪಿ ಸೇರಿದೆ ಎಂದು ಹೇಳಿದ್ದಾರೆ.

ಯಾವುದೇ ನಿರೀಕ್ಷೆ ಇಲ್ಲದೆ ನಾನು ರಾಜಕೀಯ ರಂಗಕ್ಕೆ ಇಳಿದಿರುವುದಾಗಿ ಹೇಳಿದ ಅವರು, ಯಾವುದೋ ಪದವಿ, ಅಧಿಕಾರದ ಆಸೆಯಿಂದ ಮುನ್ನಡೆಯುತ್ತಿಲ್ಲ. ಹಾಗೆ ನಡೆದಾಗ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಟ್ಟಂತೆ ಆಗುತ್ತದೆ. ಸಾಮಾನ್ಯನಾಗಿದ್ದುಕೊಂಡು ನನ್ನ ಕರ್ತವ್ಯಗಳನ್ನು ನಿರ್ವಹಿಸುತ್ತ ಹೋಗುತ್ತೇನೆ. ಅವಕಾಶ ಸಿಕ್ಕಾಗ ಇಂಪ್ಯಾಕ್ಟ್​ ಮಾಡಿ ತೋರಿಸುತ್ತೇನೆ ಎಂದು ಸ್ಪಷ್ಟವಾಗಿ ಹೇಳಿದ್ರು.

ರಾಜಕೀಯ ನಾಯಕನಾದ ಬಳಿಕ ಮೊದಲ ಬಾರಿ ಡಿಜೆಹಳ್ಳಿ, ಕೆಜೆಹಳ್ಳಿ ಗಲಭೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರ ಮಾತುಗಳು ಸಮತೂಕದಲ್ಲಿದ್ದವು. ಸಂದರ್ಶನದ ಪೂರ್ಣಪಾಠ ವೀಕ್ಷಿಸಲು ಮೇಲಿನ ವಿಡಿಯೋ ಕ್ಲಿಕ್ಕಿಸಿ. (ದಿಗ್ವಿಜಯ ನ್ಯೂಸ್)