ನ್ಯೂಸ್

VIDEO| BBSK10: ಡ್ರೋನ್​ ಪ್ರತಾಪ್​ ಬ್ರೇನ್​ ವಾಶ್​ ಮಾಡ್ತಿದ್ದಾರೆ ಇವರು…; ಸ್ನೇಹಿತ್​ ಸೂಚಿಸಿದ ಹೆಸರು ಯಾರದ್ದು?

ಬೆಂಗಳೂರು: ​​​ಬಿಗ್ ಬಾಸ್​ ಕನ್ನಡ ಸೀಸನ್​ 10ರ ಸ್ಪರ್ಧಿಗಳು ಇದೀಗ 11ನೇ ವಾರಕ್ಕೆ ಕಾಲಿಟ್ಟು, 9ನೇ ವಾರಕ್ಕೆ ಬಿಗ್ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದ ಸ್ನೇಹಿತ್​, ವಿಜಯವಾಣಿ ನಡೆಸಿದ ವಿಶೇಷ ಸಂದರ್ಶನದಲ್ಲಿ ಭಾಗಿಯಾಗಿ, ತಮ್ಮ ಅನುಭವಗಳನ್ನು ವೀಕ್ಷಕರ ಮುಂದೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬಿಗ್ ಬಾಸ್​ ಮನೆಯೊಳಗೆ ನಡೆಯುತ್ತಿರುವ ಕೆಲವು ವಿಷಯಗಳು ಹಾಗೂ ಸ್ಪರ್ಧಿಗಳ ಕುರಿತು ಕೇಳಲಾದ ಒಂದಷ್ಟು ಪ್ರಶ್ನೆಗಳಿಗೆ ಸ್ನೇಹಿತ್ ಕೊಟ್ಟ ಉತ್ತರ ಹೀಗಿದೆ. "ಮನೆಯಲ್ಲಿ ಜಗಳ ಆಡೋದಿಕ್ಕೆ ವಾತಾವರಣ ತುಂಬ ಕಂಡ್ಯೂಸಿವ್ ಆಗಿದೆ. ನೀವು ಒಂದಿಷ್ಟು ಜನಗಳನ್ನು ಒಂದೇ ಜಾಗದಲ್ಲಿ ಹಾಕಿ, ಅವರಿಗೆ ಊಟ ಕಮ್ಮಿ, ನಿದ್ದೆ ಕಡಿಮೆ ಮಾಡಿದ್ರೆ ಏನಾಗುತ್ತದೆ? ಖಂಡಿತವಾಗಿ ಜಗಳ ಆಗ್ತುತ್ತೆ" ಎಂದರು.

"ಅಲ್ಲಿ ಮಾತು ಆಡಿದ್ರೆ ಜಗಳ ಆಡ್ತಾರೆ ಅನಿಸುತ್ತೆ. ನನಗೆ ಸಂಗೀತಾ ಬೇಕು ಬೇಕು ಅಂತ ಕೆದಕಿ ಜಟಾಪಟಿ ಮಾಡ್ತಾರೆ ಅನಿಸೋದಿಲ್ಲ. ಮನೆಯಲ್ಲಿ ಪ್ರತಾಪ್ ಸ್ಮಾರ್ಟ್​, ಆದ್ರೆ ಸಂಗೀತಾ....." ಮತ್ತಷ್ಟು ತಿಳಿಯಲು ಕೆಳಗಿನ ಸಂದರ್ಶನದ ವಿಡಿಯೋ ನೋಡಿ.