ನ್ಯೂಸ್

VIDEO| BBKS10: ಮನೆಯೊಳಗೆ ಇವರೇ ನನ್ನ ಫೇವರಿಟ್​ ಸ್ಪರ್ಧಿಗಳು!

ಬೆಂಗಳೂರು: ಬಿಗ್ ಬಾಸ್​ ಕನ್ನಡ ಸೀಸನ್​ 10 ಇದೀಗ 11ನೇ ವಾರದ ಅಂತ್ಯದತ್ತ ಸಾಗುತ್ತಿದ್ದು, 10ನೇ ವಾರಕ್ಕೆ ಬಿಗ್ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದ ಪವಿ ಪೂವಪ್ಪ, ಇತ್ತೀಚೆಗೆ ವಿಜಯವಾಣಿ ನಡೆಸಿದ ವಿಶೇಷ ಸಂದರ್ಶನದಲ್ಲಿ ಭಾಗಿಯಾಗಿ ಮನೆಯೊಳಗಿನ ಹಲವು ಕುತೂಹಲಕಾರಿ ಸಂಗತಿಗಳ ಬಗ್ಗೆ ಮನಬಿಚ್ಚಿ ಮಾತನಾಡಿದರು. ಈ ವೇಳೆ ಬಿಗ್ ಬಾಸ್​ ವೋಟಿಂಗ್ ಹಾಗೂ ಮನೆಯೊಳಗೆ ತಮ್ಮ ನೆಚ್ಚಿನ ಸ್ಪರ್ಧಿಗಳು ಯಾರು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಮನೆಯೊಳಗಿನ ಅನುಭವವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಪವಿ, "ಹೊರಗಡೆಗಿಂತ ನಾನು ಬಿಗ್​ಬಾಸ್​ನಲ್ಲೇ ಮೂರು ಹೊತ್ತು ಚೆನ್ನಾಗಿ ಊಟ ಮಾಡಿದ್ದೇನೆ" ಎಂದರು. ಇನ್ನು ಬಿಗ್ ಬಾಸ್​ ವೋಟಿಂಗ್ ಫೇಕ್? ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, "ಮೊದಲನೆಯದಾಗಿ ವೋಟಿಂಗ್ ಹೇಗೆ ನಡೆಯುತ್ತಿದೆ ಎಂಬುದರ ಬಗ್ಗೆ ನನಗೂ ಒಂದು ಡೌಟ್​ ಇದೆ. ನಾಮಿನೇಟ್​ ಯಾರಾಗುತ್ತಾರೋ ಅವರಿಗೆ ಜನರು ಎಷ್ಟು ವೋಟ್​ ಮಾಡಿದ್ದಾರೆ ಎಂಬುದನ್ನು ತೋರಿಸಬೇಕು. ಆಗ ಅವರಿಗೆ ತಿಳಿಯುತ್ತದೆ ಎಷ್ಟು ಮತ ಬಂದಿದೆ ಅಂತ, ಜತೆಗೆ ಮೋಟಿವೇಟ್​ ಕೂಡ ಆಗುತ್ತೆ" ಎಂದರು.

"ಸಂಗೀತಾ ಅವರು ಖಂಡಿತವಾಗಿ ಕಂಟೆಂಟ್​ಗೆ ಅಂತಾನೇ ಮಾಡ್ತಾರೆ. ಆದ್ರೆ, ಕೆಲವೊಮ್ಮೆ ಅವರು ತೆಗೆದುಕೊಳ್ಳುವ ನಿರ್ಧಾರ ಸರಿಯಾಗಿಯೇ ಇರುತ್ತದೆ ಅನಿಸುತ್ತೆ ನನಗೆ. ನನ್ನ ಫೇವರಿಟ್ ಸ್ಪರ್ಧಿಗಳು......." ಹೆಚ್ಚಿನ ವಿಷಯ ತಿಳಿಯಲು ಕೆಳಗಿನ ಸಂದರ್ಶನದ ವಿಡಿಯೋ ವೀಕ್ಷಿಸಿ.