ನ್ಯೂಸ್

VIDEO: ಒಡಿಶಾದ ಸೋನಾಪುರ ಬೀಚ್​ನಲ್ಲಿ ಜನರ ಕುತೂಹಲಕ್ಕೆ ಕಾರಣವಾಯಿತು ಬೃಹತ್ ಗಾತ್ರದ ಮೀನು!

ಬೆಹ್ರಾಂಪುರ: ಇಲ್ಲಿಗೆ ಸಮೀಪದ ಸೋನಾಪುರ ಬೀಚ್​ನ ದಂಡೆ ಮೇಲೆ ಸೋಮವಾರ ಬೃಹತ್ ಗಾತ್ರದ ಮೀನೊಂದು ಪತ್ತೆಯಾಗಿದ್ದು ಜನರ ಕುತೂಹಲಕ್ಕೆ ಕಾರಣವಾಗಿತ್ತು.

ಬೆಳಗ್ಗೆ ಕೆಲವರು ಮೀನುಗಾರಿಕೆಗೆ ಕಡಲಿನ ಕಡೆಗೆ ಹೊರಟಿದ್ದರೆ, ಇನ್ನು ಕೆಲವರು ಬೆಳಗ್ಗಿನ ವಾಕಿಂಗ್​ಗೆ ಕಡಲತಡಿಗೆ ಬಂದಿದ್ದರು. ಎಲ್ಲರ ಗಮನ ಸೆಳೆದಿತ್ತು ಆ ಮೀನು. ಅಲೆಗಳ ಜತೆಗೆ ತೇಲಿ ಬಂದ ಆ ಮೀನನ್ನು ಮತ್ತೆ ಕಡಲಿನಾಳಕ್ಕೆ ಕಳುಹಿಸುವ ಪ್ರಯತ್ನವನ್ನು ಅಲ್ಲಿದ್ದವರು ಮಾಡಿದ್ದರು. ಆದರೆ ಪ್ರಯೋಜನವಾಗಲಿಲ್ಲ.

ಇಷ್ಟಕ್ಕೂ ಆ ಮೀನು ವೇಲ್ ಶಾರ್ಕ್​ ಜಾತಿಗೆ ಸೇರಿದ್ದಾಗಿತ್ತು. ಇವುಗಳ ಜೀವಿತಾವಧಿ 70 ವರ್ಷ. ಕಡಲಿನಲ್ಲಿ ನಿಧಾನವಾಗಿ ಚಲಿಸುವ ಇವುಗಳ ಪೈಕಿ ಬೃಹತ್ ಗಾತ್ರದ್ದು ಎಂದರೆ 62 ಅಡಿ ಉದ್ದ ಇರುತ್ತವೆ. ಮನುಷ್ಯರಿಗೆ ಇದರಿಂದ ಯಾವುದೇ ಹಾನಿ ಇಲ್ಲ. ವೇಲ್ ಶಾರ್ಕ್ ಬಗ್ಗೆ ತಿಳಿದುಕೊಳ್ಳಲು ಕೆಳಗಿನ ವಿಡಿಯೋ ವೀಕ್ಷಿಸಬಹುದು.