ಬೆಂಗಳೂರು: ನಾವು ಕಷ್ಟಪಟ್ಟು ರಾಜಕಾರಣ ಮಾಡುತ್ತಿದ್ದೇವೆ, ನ್ಯಾಯುತವಾಗಿ ಆಸ್ತಿ ಮಾಡಿದ್ದೇವೆ, ಯಾರಿಗೂ ತೊಂದರೆ ಕೊಟ್ಟಿಲ್ಲ. ಆದರೂ ಬಿಜೆಪಿಯವರು ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದರು. ನನಗೆ ಇಂದು ಜಯ ಸಿಕ್ಕಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ನ್ಯಾಯಾಲಯದಲ್ಲಿ ತೀರ್ಪು ಪ್ರಕಟಗೊಂಡ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು,
ನಾನು ಏನೂ ತಪ್ಪು ಮಾಡಿಲ್ಲ ಎಂದು ಅಂದೇ ಹೇಳಿದ್ದೇನೆ. ನನಗೆ ನ್ಯಾಯಾಲಯದ ಬಗ್ಗೆ ನಂಬಿಕೆ ಇದೆ. ನಾವು ಯಾರಿಗೂ ಮೋಸ ಮಾಡಿಲ್ಲ ಎಂದು ಹೇಳಿದರು.
ಶಾಸಕ ಯತ್ನಾಳ್‌ಗೂ ಇದಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಿದ ಅವರು, ಇದು ಸಿಬಿಐ ಮತ್ತು ಸರ್ಕಾರದ ವಿಚಾರ. ಸಿಬಿಐ ಎಫ್‌ಐಆರ್ ಹಾಕಿತ್ತು. ಸಾಯುವವರೆಗೂ ಹೋರಾಟ ಮಾಡಲೇಬೇಕು ಎಂದರಲ್ಲದೇ, ಡಿಕೆಶಿಗೆ ಅನ್ಯಾಯವಾಗಿದೆ ಎಂದು ಸಂಪುಟದಲ್ಲಿ ಸಿಎಂ ತೀರ್ಮಾನ ಮಾಡಿದ್ದರು, ಸರ್ಕಾರ ಮಾಡಿದ ತೀರ್ಮಾನ ಸರಿಯಾಗಿದೆ ಎಂದು ಕೋರ್ಟ್ ಹೇಳಿದೆ, ಈ ಕೇಸ್ ಇಲ್ಲಿಗೆ ಬಿಡಬಹುದು ಎಂದರು.
ನನ್ನ ವಿರುದ್ಧ ಸಿಬಿಐಗೆ ಕೊಟ್ಟಿದ್ದು ಸರಿಯಲ್ಲ. ಸಿಬಿಐ ಅರ್ಧ ತನಿಖೆ ಮಾಡಿದ್ದೇನೆ ಅಂತ ಹೇಳಿದ್ದರು, ಆದರೆ ಯಾವುದೇ ತನಿಖೆ ಮಾಡಿರಲಿಲ್ಲ ಎಂದು ಹೇಳಿದರು.