ನ್ಯೂಸ್

''ನಾನು ನಂದಿನಿ'' ಬಳಿಕ ''ಮಮ್ಮಿ ಫಿಶ್​​​ ಮಮ್ಮಿ ಫಿಶ್​​​''; ವಿಕಿಪೀಡಿಯಾ ರೀಲ್ಸ್​​​ಗೆ 1 ಮಿಲಿಯನ್​​​ಗೂ ಅಧಿಕ ವೀಕ್ಷಣೆ..!

ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ರೀಲ್ಸ್ ಗಳು ಇದಕ್ಕಿದ್ದಂತೆ ವೈರಲ್ ಆಗುವ ಮೂಲಕ ಹಲವು ಕಲಾವಿದರು ರಾತ್ರೋ ರಾತ್ರಿ ಪ್ರಸಿದ್ಧರಾಗುತ್ತಾರೆ. ಕೆಲ ದಿನಗಳ ಹಿಂದೆ ನಾನು ನಂದಿನಿ ಬೆಂಗಳೂರಿಗ್ ಬಂದೀನಿ' ಎಂಬ ರೀಲ್ಸ್ ನಿಂದಾಗಿ ವಿಕಿಪೀಡಿಯಾ ಎಲ್ಲರ ಮನೆ ಮಾತಾಗಿದ್ದಾರೆ. ಇದೀಗ ವಿಕಿಪೀಡಿಯಾ ಅವರ ಮತ್ತೊಂದು ರೀಲ್ಸ್​​ ಮಮ್ಮಿ ಫಿಶ್​​ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​​ ಸೌಂಡ್​​ ಮಾಡುತ್ತಿದೆ.


ಮಮ್ಮಿ ಫಿಶ್​​ ರೀಲ್ಸನ್ನ ಕೆಲ ದಿನಗಳ ಹಿಂದೆ ಫೇಸ್​ಬುಕ್​ನಲ್ಲಿ ಮತ್ತು ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋ ರಚಿಸಿದ ವಿಕಿಪೀಡಿಯಾ’ದ ವಿಕಾಸ ಮತ್ತು ತಂಡದವರನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ಇದೀಗ ಮಮ್ಮಿ ಫಿಶ್​​​​ ರೀಲ್ಸ್​​ಗೆ ಚಿಕ್ಕವರಿಂದ ಹಿಡಿದು ದೊಡ್ಡವರೂ ಸಹ ಹೆಜ್ಜೆ ಹಾಕಿದ್ದಾರೆ.


ಮನುಷ್ಯನ ಅತಿಯಾಸೆಯ ಬಗ್ಗೆ ಈ ರೀಲ್ಸ್​​​ನಲ್ಲಿ ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಗಿದ್ದು. ಅದರ ಸಾಹಿತ್ಯ ಈ ರೀತಿಯಾಗಿದೆ. ಮಮ್ಮಿ ಫಿಶ್​​​ ಮಮ್ಮಿ ಫಿಶ್​​​ ನಾವೆಲ್ಲಾ ನೀರಲ್ಯಾಕೆ ಇದ್ದೀವಿ? ಅಯ್ಯೋ ಪುಟ್ಟ ಭೂಮಿ ಮೇಲೆ humans ಎಲ್ಲಾ selfish ಕಣೋ..ಅಯ್ಯೋ ಉಟ್ಟ ನಿಂಗೊತ್ತಿಲ್ವಾ ಈ humans ಎಲ್ಲಾ selfish ಕಣೋ….ಮಮ್ಮಿ ಫಿಶ್​ ಥ್ಯಾಂಕ್​ ಯೂ ಮಮ್ಮಿ ಫಿಶ್​​. ನಾನು ನೀರು ಬಿಟ್ಟು ಎಂದು ಹೋಗೋದಿಲ್ಲ.


ಈ ಸಾಹಿತ್ಯವು ಮಾನವನ ಅತಿಯಾಸೆಯಿಂದಾಗಿ ಮೀನೂ ಕೂಡಾ ನೀರಿನಿಂದ ಹೊರ ಬರಲು ಇಷ್ಟ ಪಡುವುದಿಲ್ಲ ಎಂಬ ಸಂದೇಶ ನೀಡಿದೆ.
ಕನ್ನಡದ ಕೆಲವೇ ಕೆಲವು ಸೆನ್ಸಿಬಲ್‌ ಕಂಟೆಂಟ್ ಕ್ರಿಯೇಟರ್‌ಗಳಲ್ಲಿ ಒಬ್ಬರಾಗಿರುವ ವಿಕಿಪೀಡಿಯಾ ಹೆಸರಿನಲ್ಲಿ ಖ್ಯಾತಿ ಗಳಿಸಿರುವ ವಿಕಾಸ್ ಮತ್ತು ತಂಡ ‘ನಾನು ನಂದಿನಿ.. ಬೆಂಗ್ಳೂರಿಗೆ ಬಂದೀನಿ’ ಹಾಡಿನ ಕ್ರಿಯೇಟರ್‌ಗಳು ಹೊಸದಾದ ಕಂಟೆಂಟ್​ ನೀಡಲು ಪ್ರಯತ್ನಿಸುತ್ತಿದ್ದು ಎಲ್ಲವೂ ಯಶಸ್ವಿಯಾಗುತ್ತಲಿದೆ.


ಸದ್ಯ ಮಮ್ಮಿ ಫಿಶ್​​ ರೀಲ್ಸ್​​ಗೆ ಜನರ ಮೆಚ್ಚುಗೆ ವ್ಯಕ್ತವಾಗುತ್ತಿದೆ. 2 ಲಕ್ಷಕ್ಕೂ ಅಧಿಕ ಲೈಕ್ಸ್​​ ಪಡೆದುಕೊಂಡಿರುವ ವಿಡಿಯೋಗೆ ಮಿಲಿಯನ್​ ಗಟ್ಟಲೆ ವೀಕ್ಷಣೆ ದೊರೆತಿದೆ. ಇಂಗ್ಲಿಷ್​​ ಹಾಡಿನ ರೀಲ್ಸ್​ ಮಾಡಿ ಸೈ ಎನಿಸಿಕೊಂಡ ತಂಡಕ್ಕೆ ಇದೀಗ ಮಮ್ಮಿ ಫಿಶ್​​​ ರೀಲ್ಸ್​​ಗೂ ಭಾರೀ ಮೆಚ್ಚುಗೆ ದೊರೆಯುತ್ತಿದೆ.