ಮುಂಬೈ: 'ಛಾವಾ' ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಕ್ಕಿ ಕೌಶಲ್(Vicky Kaushal) ನಟಿಸಿರುವುದು ಗೊತ್ತೆ ಇದೆ. ಈ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು ಚಿತ್ರತಂಡ ಪ್ರಚಾರವನ್ನು ಆರಂಭಿಸಿದೆ. ಆದರೆ ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಕಾಲಿಗೆ ಪೆಟ್ಟಾಗಿದ್ದು ನಡೆಯಲು ಕಷ್ಟ ಪಡುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿಯೂ ಅವರು ಸಿನಿಮಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.
ಇದನ್ನು ಓದಿ: ಬಾಲಿವುಡ್ ಬಿಗ್ಬಿ ಅಭಿನಯದ ಈ ಸಿನಿಮಾಗಳು ಇದುವರೆಗೂ ತೆರೆಕಂಡಿಲ್ಲ; ಅದರ ಹಿಂದಿನ ಕಾರಣ ಹೀಗಿದೆ.. | Amithabh Bachchan
ಕಾಲಿನ ಗಾಯದಿಂದಾಗಿ ರಶ್ಮಿಕಾ ಮಂದಣ್ಣ ಅವರಿಗೆ ನಡೆಯಲು ಕಷ್ಟವಾಗಿದೆ. ಆದ್ದರಿಂದ ರಶ್ಮಿಕಾ ವ್ಹೀಲ್‌ಚೇರ್‌ನಲ್ಲಿ ಪ್ರಚಾರ ಕಾರ್ಯಕ್ರಮಕ್ಕೆ ಬಂದರು. ಹೈದರಾಬಾದ್ನಲ್ಲಿ ಶುಕ್ರವಾರ(ಜನವರಿ 31) ಸಿನಿಮಾ ಮತ್ತೊಂದು ಹಾಡನ್ನು ಬಿಡುಗಡೆ ಮಾಡಲಾಗಿದೆ. ಈ ವೇಳೆ ವಿಕ್ಕಿ ಕೌಶಲ್ ಅವರು ರಶ್ಮಿಕಾ ಮಂದಣ್ಣ ಅವರು ಕುಳಿತಿದ್ದ ವ್ಹೀಲ್ಚೇರ್ ಅನ್ನು ತಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಕ್ಕಿ ಕೌಶಲ್ ಅವರ ವಿನಮ್ರತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ವಿಕ್ಕಿ ಕೌಶಲ್ ನಿಜವಾಗಿಯೂ ಸಂಭಾವಿತ ವ್ಯಕ್ತಿ, ವಿಕ್ಕಿ ಯಾವಾಗಲೂ ಹೃದಯಗಳನ್ನು ಗೆಲ್ಲುತ್ತಾರೆ, ಕತ್ರಿನಾ ಕೈಫ್ ಇಂದು ಊಟ ನೀಡುವುದಿಲ್ಲ ಎಂದೆಲ್ಲಾ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.
ಜಿಮ್ನಲ್ಲಿ ವ್ಯಾಯಾಮ ಮಾಡುವಾಗ ರಶ್ಮಿಕಾ ಮಂದಣ್ಣ ಅವರ ಕಾಲಿಗೆ ಗಾಯವಾಗಿತ್ತು. ಈ ಗಂಭೀರ ಗಾಯದಲ್ಲಿ ಅವರ ಕಾಲಿಗೆ ಮೂರು ಸ್ಥಳಗಳಲ್ಲಿ ಮುರಿತ ಸಂಭವಿಸಿದೆ ಮತ್ತು ಸ್ನಾಯುಗಳು ತುಂಡಾಗಿವೆ. ರಶ್ಮಿಕಾ ಮಂದಣ್ಣ ನಡೆಯಲು ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ಈ ನಡುವೆಯೂ 'ಛಾವಾ' ಚಿತ್ರದ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಈ ಸಿನಿಮಾ ಫೆಬ್ರವರಿ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.(ಏಜೆನ್ಸೀಸ್)