ನ್ಯೂಸ್

ಅನ್ಯಧರ್ಮಿಯರ ಆಕ್ರಮಣಗಳಿಗೆ ತಕ್ಕ ಉತ್ತರಕ್ಕೆ ಹಿಂದು ಸಮಾಜ ಸನ್ನದ್ಧ

ಶಿವಮೊಗ್ಗ: ಹಿಂದುಗಳು ಶೌರ್ಯದಿಂದಲೇ ಅನ್ಯಧರ್ಮಿಯರ ಎಲ್ಲ ದಾಳಿ ಮತ್ತು ಆಕ್ರಮಣಗಳಿಗೆ ತಕ್ಕ ಉತ್ತರ ನೀಡುತ್ತಲೇ ಧರ್ಮವನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ ಎಂದು ವಿಎಚ್‌ಪಿ(ವಿಶ್ವ ಹಿಂದು ಪರಿಷದ್) ಪ್ರಾಂತ ಸಂಚಾಲಕ ಕೆ.ಆರ್.ಸುನಿಲ್ ಹೇಳಿದರು.

ವಿಶ್ವ ಹಿಂದು ಪರಿಷದ್ ಮತ್ತು ಬಜರಂಗದಳದಿಂದ ಭಾನುವಾರ ನಗರದ ಫ್ರೀಡಂಪಾರ್ಕ್‌ನಲ್ಲಿ ಶೌರ್ಯ ಯಾತ್ರೆ ಹಾಗೂ ಕೋಟೆ ರಸ್ತೆಯ ವಾಸವಿ ವಿದ್ಯಾಶಾಲೆಯಲ್ಲಿ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗ ಹಿಂದು ಸಂಘಟನೆ ಮತ್ತಷ್ಟು ಬಲವಾಗಿದ್ದು, ಯಾವುದೇ ದಾಳಿಗೂ ಬಗ್ಗುವುದಿಲ್ಲ. ಬದಲಾಗಿ ಪ್ರತಿ ಉತ್ತರ ನೀಡಲಾಗುತ್ತದೆ ಎಂದರು.

ಹಿಂದು ಸಮಾಜ ಸಹಿಷ್ಣುವಾಗಿದೆ. ಸಾವಿರಾರು ವರ್ಷಗಳಿಂದ ಅನ್ಯಧರ್ಮಿಯರು ನಡೆಸಿಕೊಂಡು ಬಂದಿರುವ ಆಕ್ರಮಣಗಳಿಗೆ ಪ್ರತಿ ಉತ್ತರ ನೀಡುತ್ತಲೇ ಬಂದಿದೆ. ಇದೀಗ ಅನ್ಯಧರ್ಮಿಯರು ಲವ್‌ಜಿಹಾದ್, ಮತಾಂತರ, ಗೋಹತ್ಯೆಗಳ ಮೂಲಕ ಹಿಂದು ಧರ್ಮದ ಮೇಲೆ ಪ್ರಹಾರ ಆರಂಭಿಸಿದ್ದು, ಅದಕ್ಕೆಲ್ಲ ಉತ್ತರ ಕೊಡಲು ಸಮಾಜ ಸನ್ನದ್ಧವಾಗಿದೆ ಎಂದರು.

ಲವ್ ಜಿಹಾದ್ ಮೂಲಕ ಹಿಂದು ಹೆಣ್ಣುಮಕ್ಕಳನ್ನು ಲೈಂಗಿಕವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸೀಯರು ಮಕ್ಕಳನ್ನು ಹೆರುವ ಯಂತ್ರಗಳಂತೆ ಬಿಂಬಿಸಲಾಗುತ್ತಿದೆ. ಇಂತಹ ದುರುದ್ದೇಶಗಳಿಗೆ ನಾವೆಲ್ಲರೂ ಉತ್ತರ ನೀಡಬೇಕಿದೆ ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ವಿಎಚ್‌ಪಿ ಜಿಲ್ಲಾ ಅಧ್ಯಕ್ಷ ಜೆ.ಆರ್.ವಾಸುದೇವ ಮಾತನಾಡಿ, ಬಜರಂಗದಳ ಹಾಗೂ ವಿಎಚ್‌ಪಿ ಸಂಖ್ಯೆಯನ್ನು ದ್ವಿಗುಣಗೊಳಿಸಬೇಕಿದೆ. ಹಿಂದುಗಳೆಲ್ಲಾ ಒಂದೇ ಎಂಬ ಒಗ್ಗಟ್ಟು ಪ್ರದರ್ಶಿಸಬೇಕು. ಸಂಘಟನೆಯ ಬಲ ಹೆಚ್ಚಾದರೆ ಹೋರಾಟದ ಶಕ್ತಿಯೂ ಇಮ್ಮಡಿಸಲಿದೆ ಎಂದರು. ವಿಎಚ್‌ಪಿ ಸಹಕಾರ್ಯದರ್ಶಿ ಚಂದ್ರಶೇಖರ್, ಬಜರಂಗ ದಳ ಜಿಲ್ಲಾ ಸಂಚಾಲಕ ನಾರಾಯಣ ವರ್ಣೇಕರ್, ರಾಜೇಶ್‌ಗೌಡ ಇದ್ದರು.