ನ್ಯೂಸ್

ತುಮ್ಮಿನಕಟ್ಟಿ ಸರ್ಕಾರಿ ಶಾಲೆ ಮಕ್ಕಳ ಉತ್ತಮ ಸಾಧನೆ

ರಾಣೆಬೆನ್ನೂರ: ತಾಲೂಕಿನ ಮೆಣಸಿನಹಾಳ ಗ್ರಾಮದಲ್ಲಿ ಏರ್ಪಡಿಸಿದ್ದ ತುಮ್ಮಿನಕಟ್ಟಿ ಕ್ಲಸ್ಟರ್​ ಮಟ್ಟದ ಕ್ರೀಡಾಕೂಟದಲ್ಲಿ ಸರ್ಕಾರಿ ಮಾದರಿ ಕೇಂದ್ರ ಶಾಲೆಯ ಮಕ್ಕಳು ಉತ್ತಮ ಸಾಧನೆ ಮಾಡಿದ್ದಾರೆ.
ಖೋ ಖೋ ಪ್ರಥಮ, ವಾಲಿಬಾಲ್​ ಪ್ರಥಮ, ಥ್ರೋಬಾಲ್​ ಪ್ರಥಮ, ಕಬ್ಬಡ್ಡಿ ದ್ವೀತಿಯ, ರಿಲೇ ಪ್ರಥಮ, 100 ಮೀಟರ್​ ಓಟ ಪ್ರಥಮ, 200 ಮೀಟರ್​ ಓಟ ಪ್ರಥಮ, 400 ಮೀಟರ್​ ಓಟ ತೃತೀಯ, 600 ಮೀಟರ್​ ಓಟ ಪ್ರಥಮ, ಎತ್ತರ ಜಿಗಿತ ದ್ವೀತಿಯ, ಉದ್ದ ಜಿಗಿತ ಪ್ರಥಮ, ಗುಂಡು ಎಸೆತ ಪ್ರಥಮ, ಚಕ್ರ ಎಸೆತ ಪ್ರಥಮ ಸ್ಥಾನಗಳಿಸಿದ್ದಾರೆ.